ಕರ್ನಾಟಕದ ಸಾಮಾಜಿಕ ಅರಣ್ಯೀಕರಣ ಘಟಕ ಸಾಮಾಜಿಕ ಅರಣ್ಯೀಕರಣ ವಿಭಾಗಗಳ ಮೂಲಕ, ಅರಣ್ಯೇತರ ಪ್ರದೇಶಗಳಲ್ಲಿ ಗಿಡ ನೆಡುವ ಮೂಲಕ ಹಸರೀಕರಣ ಮಾಡುವುದು ಮುಖ್ಯ ಉದ್ದೇಶವಾಗಿರುತ್ತದೆ. ಜಿಲ್ಲಾ ವಲಯದ ಯೋಜನೆಗಳಾದ “ಸಾಮಾಜಿಕ ಅರಣ್ಯೀಕರಣ” ಮತ್ತು “ಕಟ್ಟಡಗಳು” ಯೋಜನೆ ಜೊತೆಯಲ್ಲಿ ಕೇಂದ್ರ ಯೋಜನೆಗಳಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹಾಗೂ ಕೃಷಿ ಅರಣ್ಯ ಉಪ ಯೋಜನೆ (ಎಸ್.ಎಂ.ಎ.ಎಫ್.) ಅನುಷ್ಠಾನದ ಜವಾಬ್ದಾರಿಯನ್ನೂ ಸಹ ಹೊಂದಿರುತ್ತದೆ. ಸಾಮಾಜಿಕ ಅರಣ್ಯ ಯೋಜನೆಯಡಿಯಲ್ಲಿ ಹೊಸ ನಡೆತೋಪುಗಳನ್ನು ಬೆಳೆಸುವುದು, ಹಳೆಯ ನಡೆತೋಪುಗಳ ನಿರ್ವಹಣೆ, ಸಸ್ಯಕ್ಷೇತ್ರ ಮುಂತಾದ ಚಟುವಟಿಕೆಗಳನ್ನು ಹಾಗೂ ಕಟ್ಟಡ ಯೋಜನೆಗಳಡಿಯಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ಹಳೆ ಕಟ್ಟಡಗಳ ನಿರ್ವಹಣೆಯನ್ನು ಸಹ ನಿರ್ವಹಿಸುತ್ತದೆ.