ವಿಭಾಗದ ಮುಖ್ಯಸ್ಥರು

ವಿಭಾಗದ ಬಗ್ಗೆ

ಕಾರವಾರ ಅರಣ್ಯ ವಿಭಾಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿದ್ದು, ಉತ್ತರದಲ್ಲಿ ಗೋವಾದ ಜೊತೆ ಗಡಿ ಹಂಚಿಕೊಂಡಿದೆ. ಈ ವಿಭಾಗ ಸಂಪೂರ್ಣ ಕಾರವಾರ ತಾಲೂಕು ಮತ್ತು ಅಂಕೋಲಾ ಹಾಗೂ ಜೊಯ್ಡಾ ತಾಲೂಕುಗಳ ಕೆಲವು ಭಾಗಗಳನ್ನು ಒಳಗೊಂಡಿದೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 1,17,877.67 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ಸುಮಾರು 71.75 ವಿಸ್ತಾರವಾಗಿದೆ (1,642.81 ಚ.ಕಿ.ಮೀ.). ವಿಭಾಗ ಕರಾವಳಿ ಪ್ರದೇಶಗಳು ಮತ್ತು ಘಟ್ಟ ಪ್ರದೇಶಗಳು ಎರಡನ್ನೂ ಹೊಂದಿದೆ. ಕಾಳಿ ಮತ್ತು ಗಂಗಾವಳಿ ವಿಭಾಗದಲ್ಲಿ ಹರಿಯುವ ಪ್ರಮುಖ ನದಿಗಳಾಗಿದ್ದು, ಅರಬ್ಬಿ ಸಮುದ್ರಕ್ಕೆ ಸೇರುತ್ತವೆ. ಇದು ಕಾರವಾರ ಮತ್ತು ಅಂಕೋಲಾ ಈ ಎರಡು ಉಪ ವಿಭಾಗಗಳನ್ನು ಹೊಂದಿದೆ, ಮತ್ತು ಕಾರವಾರ, ಗೊಪ್ಸಿಟ್ಟಾ, ಕದ್ರಾ, ಜೋಯ್ಡಾ, ಅಂಕೋಲಾ, ಮಾಸ್ತಿಕಟ್ಟ ಮತ್ತು ರಾಮನಗುಳಿ ಈ ಏಳು ವಲಯಗಳನ್ನು ಒಳಗೊಂಡಿದೆ. ಈ ವಿಭಾಗ 28 ಉಪ ವಿಭಾಗ ಮತ್ತು 79 ಬೀಟ್‌ಗಳನ್ನು ಹೊಂದಿದೆ. ಹಟ್ಟಿಕೇರಿ ಮತ್ತು ಕದ್ರಾದಲ್ಲಿ ಎರಡು ಟಿಂಬರ್‌ ಡಿಪೋಗಳಿವೆ. ಕಾರವಾರ ವಿಭಾಗ ಪ್ರಮುಖವಾಗಿ ತೇವಾಂಶ ಭರಿತ ಎಲೆಯುದುರುವ ಕಾಡು, ಅರೆ ನಿತ್ಯಹಸಿರು ಮತ್ತು ನಿತ್ಯ ಹಸಿರು ಕಾಡುಗಳ ಜೊತೆ ಕರಾವಳಿ ಪ್ರದೇಶದಲ್ಲಿ ಒಂದಿಷ್ಟು ಕಾಂಡ್ಲಾ ವನವನ್ನೂ ಹೊಂದಿದೆ.

ಕಾರವಾರ ವಿಭಾಗದ ನಕ್ಷೆ

--%>

ಉಪ ವಿಭಾಗಗಳು