A- A A+
ವನ್ಯಜೀವಿ ಸಾಮಾಗ್ರಿಗಳ ಆದ್ಯರ್ಪಣೆ- ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿರಿ

ಈ ಘಟಕವು ಕರ್ನಾಟಕ ರಾಜ್ಯಾದ್ಯಂತ ಸಂಶೋಧನೆ ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಅರಣ್ಯ ಸಂಶೋಧನೆ ವ್ಯಾಪ್ತಿಯಲ್ಲಿ ನಾಲ್ಕು ಸಂಶೋಧನ ವೃತ್ತಗಳು ಇರುತ್ತವೆ. ಒಂದನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಬೆಂಗಳೂರು ಹಾಗು ಉಳಿದ ಮೂರು ವೃತ್ತಗಳಾದ ಧಾರವಾಡ, ಮಡಿಕೇರಿ ಮತ್ತು ಬಳ್ಳಾರಿ ವೃತ್ತಗಳಿಗೆ ಅರಣ್ಯ ಸಂರಕ್ಷಣಾಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಇವುಗಳಲ್ಲದೇ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ (ಸಂಶೋಧನೆ) ಬೆಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ( ಅರಣ್ಯ ಬಳಕೆ) ಘಟಕಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ವೃತ್ತಗಳು ಹಾಗೂ ವಿಭಾಗಗಳು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ ಮತ್ತು ಬಳಕೆ), ದೊರೆಸಾನಿಪಾಳ್ಯ ಬೆಂಗಳೂರು ರವರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತವೆ. ಕರ್ನಾಟಕ ಅರಣ್ಯ ಇಲಾಖೆಯ ಸಂಶೋದನ ಘಟಕವು ಅನೇಕ ಮರ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ. ಅವುಗಳೆಂದರೆ • ವಿವಿಧ ಕೃಷಿ ಭೌಗೋಳಿಕ ವಲಯಗಳಲ್ಲಿ ಆರ್ಥಿಕ ಹಾಗೂ ಪರಿಸರ ಪ್ರಧಾನವಾದ ಜಾತಿಯ ಉತೃಷ್ಟ (ಪ್ಲಸ್) ಮರಗಳನ್ನು ಗುರುತಿಸುವುದು, • ವಿವಿಧ ಜಾತಿಯ ಬೀಜೋತ್ಪನ್ನ ಮರಗಳನ್ನು ಗುರುತಿಸುವುದು ಹಾಗೂ ಪೋಷಿಸುವುದು, • ಕ್ಲೋನಲ್ ಆರ್ಚರ್ಡ್ಸ್, ಸೀಡಲಿಂಗ ಸೀಡ್ ಆರ್ಚರ್ಡ್ಸ್, ಪ್ರೋಜೆನಿ ಸೀಡ್ ಟ್ರಯಲ್, ಹಾಗೂ ಉತ್ತಮ ಜರ್ಮ್, ಪ್ಲಾಸ್ಮ್ ಬ್ಯಾಂಕ್ ಇತ್ಯಾದಿ ಚಟುವಟಿಕೆಗಳ ಮೂಲಕ ಉತ್ತಮ ಬೀಜಗಳನ್ನು ಉತ್ಪಾಧಿಸುವುದು, ಕಸಿಮಾಡಿದ ಸಸಿಗಳು ಹಾಗೂ ಕ್ಲೋನಲ್ ನೀಲಗಿರಿ ಮತ್ತು ಅಕೇಷಿಯಾ ಹೈಬ್ರೀಡ್ ಸಸಿಗಳನ್ನು ಬೆಳೆಸುವುದು, • ಯುಕಲಿಪ್ಟಸ್, ಅಕೇಷಿಯಾ, ಹಲಸು, ನೆಲ್ಲಿ ಮುಂತಾದ ಜಾತಿ ಮರಗಳ ಪ್ರೊವೇನ್ಯಾನ್ಸ್ ನಿರ್ವಹಿಸುವುದು, • ವಿವಿಧ ಜಾತಿಯ ಔಷಧಿ ಸಸಿಗಳನ್ನು ದನ್ವಂತರಿ ವನದಲ್ಲಿ ಬೆಳೆಸುವುದು ಇತ್ಯಾದಿ ಕೆಲಸಗಳನ್ನು ಯೋಜನೆ/ಯೋಜನೇತರ ವಲಯಗಳ ಅಡಿ ಮುಖ್ಯವಾಗಿ ರಾಜ್ಯ ವಲಯ ಯೋಜನೆಯಾದ ಸಂಶೋದನೆ ಪ್ರಧಾನ ಕಾಮಗಾರಿಗಳಡಿಯಲ್ಲಿ ನಿರ್ವಹಿಸಲಾಗುತ್ತದೆ.