ವಿಭಾಗದ ಮುಖ್ಯಸ್ಥರು

ಶ್ರೀ. ಯಶ್ಪಾಲ್‌ ಕ್ಷೀರಸಾಗರ್ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಧಾರವಾಡ ವಿಭಾಗ ,ಕೆ.ಸಿ. ಪಾರ್ಕ್ ಹತ್ತಿರ, ಪಿ.ಬಿ. ರಸ್ತೆ, ಧಾರವಾಡ -580008
08362447092
dcfdwd@yahoo.co.in

ವಿಭಾಗದ ಬಗ್ಗೆ

ಧಾರವಾಡ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ಮಧ್ಯ ವಲಯದಲ್ಲಿದೆ. ಧಾರವಾಡ ಅರಣ್ಯ ವಿಭಾಗದ ಗಡಿಗಳು ಧಾರವಾಡ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ದಾಖಲಿಸಿಕೊಂಡಿರುವ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 46,854 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (4,260 ಚ.ಕಿ.ಮೀ). ಸುಮಾರು 11 ರಷ್ಟಿದೆ. ಈ ವಿಭಾಗ ಧಾರವಾಡ ಉಪ ವಿಭಾಗ ಎನ್ನುವ ಒಂದು ಉಪ ವಿಭಾಗ ಹೊಂದಿದೆ ಮತ್ತು ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ಈ ಮೂರು ವಲಯಗಳನ್ನು ಹೊಂದಿದೆ. ಕೆನರಾ ವೃತ್ತ (ಉತ್ತರ ಕನ್ನಡ ಜಿಲ್ಲೆ)ದ ಯಲ್ಲಾಪುರ ಅರಣ್ಯ ವಿಭಾಗದ ಕಿರವತ್ತಿ ವಲಯದ ಪಕ್ಕದಲ್ಲಿರುವ ಕಲಘಟಗಿ ವಲಯದ ಪಶ್ಚಿಮ ಭಾಗದಲ್ಲಿ ಸಾಕಷ್ಟು ಉತ್ತಮ ತೇಗದ ಮರಗಳಿರುವ ಒಣ ಎಲೆಯುದುರುವ ಕಾಡುಗಳಿವೆ. ಅದೇ ರೀತಿ, ಕೆನರಾ ವೃತ್ತದ ಹಳಿಯಾಳ ವಿಭಾಗದ ಹಳಿಯಾಳ ವಲಯದ ಪಕ್ಕದಲ್ಲಿರುವ ಧಾರವಾಡ ವಲಯದ ಪಶ್ಚಿಮ ಭಾಗ, ಒಣ ಎಲೆಯುದುರುವ ಕಾಡು ಹೊಂದಿದೆ, ಅದಾಗ್ಯೂ ಇಲ್ಲಿನ ಗುಣಮಟ್ಟ ಕಲಘಟಗಿ ಅರಣ್ಯಕ್ಕಿಂತ ತುಸು ಕಳಪೆಯಾಗಿದೆ. ವಿಭಾಗದ ಉಳಿದ ಪ್ರದೇಶ ಮುಳ್ಳುಕಂಟಿ ಪ್ರಭೇದಗಳೊಂದಿಗೆ ಬಹುತೇಕ ಕುರುಚಲು ಕಾಡುಗಳನ್ನು ಹೊಂದಿದೆ. ಅತ್ತಿವೇರಿ ಪಕ್ಷಿಧಾಮ ಎನ್ನುವ ವನ್ಯಜೀವಿ ಅಭಯಾರಣ್ಯ ಯಲ್ಲಾಪುರ ಅರಣ್ಯ ವಿಭಾಗದ ಮುಂಡಗೋಡು ವಲಯದ ಅರಣ್ಯಗಳು ಮತ್ತು ಧಾರವಾಡ ವಿಭಾಗದ ಕಲಘಟಗಿ ವಲಯದ ಮಧ್ಯೆ ವಿಭಾಗದ ಪಶ್ಚಿಮ ಗಡಿಯಲ್ಲಿ ಇದೆ.

ಧಾರವಾಡ ವಿಭಾಗದ ನಕ್ಷೆ

--%>

ಉಪ ವಿಭಾಗಗಳು