ವಿಭಾಗದ ಬಗ್ಗೆ
ಅರಣ್ಯ ಭೂಮಿಯಲ್ಲಿ ಆಗಿರುವ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸುವುದು, ಅರಣ್ಯ ಜಮೀನುಗಳನ್ನು ಕಂದಾಯ ದಾಖಲಾತಿಗಳಲ್ಲಿ ಇಂಡೀಕರಣ ಮಾಡುವ ವಿಷಯಗಳು, ಅರಣ್ಯ ಗುತ್ತಿಗೆಗಳು ಹಾಗೂ ಅಧಿಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ವಿಷಯಗಳ ಬಗ್ಗೆ ಕಾರ್ಯ ನಿರ್ವಹಿಸುತ್ತದೆ.
ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು:
ಅರಣ್ಯ ಭೂಮಿಗಳ ಭೂ ದಾಖಲೆಗಳನ್ನು ನಿರ್ವಹಣೆ ಮಾಡುವುದು ಭೂ ದಾಖಲೆ ಘಟಕದ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಭೂ-ದಾಖಲೆ ಘಟಕ ಮುಖ್ಯವಾಗಿ
• ಅರಣ್ಯ ಭೂಮಿಯಲ್ಲಿ ಆಗಿರುವ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸುವ ಪ್ರಕರಣಗಳ ಪ್ರಗತಿ ಪರಿಶೀಲನೆ,
• ಅರಣ್ಯ ಜಮೀನುಗಳನ್ನು ಕಂದಾಯ ದಾಖಲಾತಿಗಳಲ್ಲಿ ಇಂಡೀಕರಣ ಪ್ರಗತಿ ಪರಿಶೀಲನೆ,
• ಅರಣ್ಯ ಗುತ್ತಿಗೆಗಳು ಹಾಗೂ ಗುತ್ತಿಗೆ ಬಾಡಿಗೆ ಹಣ ವಸೂಲಾತಿ,
• ಕುಮ್ಕಿ, ಬಾಣೆ, ಬೆಟ್ಟ, ಹಾಡಿ, ಕಾನ್, ಸೊಪ್ಪಿನ ಬೆಟ್ಟ, ಜಮ್ಮಮಲೈ ಮತ್ತು ಮೋಟ ಸ್ಥಳ ಜಮೀನುಗಳಿಗೆ ಸಂಬಂಧಿಸಿದ ವಿಷಯಗಳ ನಿರ್ವಹಣೆ,
• ಅಧಿಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ, 2006 ಮತ್ತು ನಿಯಮಗಳು 2008ರ ಅನುಷ್ಠಾನಗೊಳಿಸುವ ಬಗ್ಗೆ,
• ಕೇಂದ್ರ ಅಧಿಕೃತ ಸಮಿತಿಯಿಂದ ಅರಣ್ಯ ಭೂಮಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸ್ವೀಕರಿಸಿದ ಅರ್ಜಿಗಳ ಕುರಿತು ಕ್ರಮಜರುಗಿಸುವುದು.
• ಅರಣ್ಯ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳ ನಿರ್ವಹಣೆ ಹಾಗೂ ಆಡಿಟ್ ಪ್ಯಾರಾಗಳಿಗೆ ಉತ್ತರ ಸಲ್ಲಿಸುವುದು.
• ರಾಜ್ಯ ಸರ್ಕಾರದ ಯೋಜನೆಯಾದ ಬೆಂಗಳೂರು ನಗರ ಮತ್ತು ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ಅರಣ್ಯ ಭೂಮಿ ಒತ್ತುವರಿಯಾಗದಂತೆ ರಕ್ಷಣೆ, ಕ್ರೂಢೀಕರಣ ಮತ್ತು ಗಡಿರೇಖೆ ಗುರ್ತಿಸುವ ಯೋಜನೆಯಡಿಯಲ್ಲಿ ಕೈಗೊಳ್ಳಲಾಗುವ ಅರಣ್ಯಗಳ ಸುತ್ತ ರಕ್ಷಣಾಗೋಡೆ ನಿರ್ಮಾಣ, ರಕ್ಷಣಾ ಬೇಲಿ, ಜಾನುವಾರು ನಿರೋಧಕ ಕಂದಕ ಮುಂತಾದ ಕಾರ್ಯಕ್ರಮಗಳ ಉಸ್ತುವಾರಿಯನ್ನು ನಿರ್ವಹಿಸುತ್ತದೆ.