ತಟ್ಟಿಹಳ್ಳದ ಅರಣ್ಯ ತರಬೇತಿ ಕೇಂದ್ರವನ್ನು 1972 ರಲ್ಲಿ ದಾಂಡೇಲಿಯಲ್ಲಿ ಆರಂಭಿಸಲಾಯಿತು ಮತ್ತು ನಂತರ 01.04.1987 ರಂದು ತಟ್ಟಿಹಳ್ಳದ ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರವಾಗಿದೆ. ಕಿರವತ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಅರಣ್ಯ ರಕ್ಷಕರ ತರಬೇತಿ ಶಾಲೆಯನ್ನು ಕೂಡ 01.04.1987 ರಂದು ಇದೇ ಆವರಣಕ್ಕೆ ಸ್ಥಳಾಂತರ ಮಾಡಲಾಯಿತು. ತಟ್ಟಿಹಳ್ಳ ಅಣೆಕಟ್ಟು ನಿರ್ಮಾಣ ಪೂರ್ಣಗೊಂಡ ನಂತರ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಿಂದ ತರಬೇತಿ ಕೇಂದ್ರದ ಮೂಲಸೌಕರ್ಯವನ್ನು ಇಲಾಖೆಗೆ ಸ್ಥಳಾಂತರ ಮಾಡಲಾಯಿತು. 13.50 ಹೆಕ್ಟೇರ್ ವಿಸ್ತಾರ ಹೊಂದಿರುವ ಅರಣ್ಯ ತರಬೇತಿ ಕೇಂದ್ರದ ಕ್ಯಾಂಪಸ್ ಹಳಿಯಾಳ ಪ್ರಾದೇಶಿಕ ಅರಣ್ಯದ ಭಾಗವತಿ ವಲಯದಲ್ಲಿ ಇದೆ. ಅರಣ್ಯ ತರವೇತಿ ಕ್ಯಾಂಪಸ್ ಯಲ್ಲಾಪುರ ತಾಲೂಕಿನಿಂದ 25 ಕಿ.ಮೀ., ದಾಂಡೇಲಿಯಿಂದ 30 ಕಿ.ಮೀ. ಮತ್ತು ಹಳಿಯಾಳ ತಾಲೂಕು ಪ್ರಧಾನ ಕಚೇರಿಯಿಂದ 25 ಕಿ.ಮೀ. ದೂರದಲ್ಲಿದೆ. ಈ ಅರಣ್ಯ ತರಬೇತಿ ಕೇಂದ್ರದಲ್ಲಿ ಹೊಸದಾಗಿ ನೇಮಕಗೊಂಡ ಉಪ ವಲಯ ಅರಣ್ಯ ಅಧಿಕಾರಿಗಳು ಕಮ್ ಮೋಜಣಿದಾರರಿಗೆ, ಅರಣ್ಯ ರಕ್ಷಕರಿಗೆ ಮತ್ತು ಅರಣ್ಯ ವೀಕ್ಷಕರಿಗೆ ನೇಮಕಾತಿ ತರಬೇತಿಯನ್ನು ನೀಡಲಾಗುತ್ತದೆ. ಈ ಕೇಂದ್ರ ಆಡಳಿತಾತ್ಮಕ ಬ್ಲಾಕ್, 2 ಆಧುನಿಕ ತರಗತಿ ಕೋಣೆಗಳು, 1 ಗ್ರಂಥಾಲಯ, 1 ಕಂಪ್ಯೂಟರ್ ಲ್ಯಾಬೊರೇಟರಿ, 1 ಆಡಿಟೋರಿಯಂ, 1 ಒಳಾಂಗಣ ಹಾಲ್, 4 ಪುರುಷ ಹಾಸ್ಟೆಲ್ ಗಳ ಬ್ಲಾಕ್, 1 ಮಹಿಳೆಯರ ಹಾಸ್ಟೆಲ್ ಬ್ಲಾಕ್, 1 ಮೆಸ್ ಹಾಲ್ ಮತ್ತು 1 ಹಳೆಯ ಅತಿಥಿ ಗೃಹವನ್ನು ಒಳಗೊಂಡಿದೆ. ಇದರೊಂದಿಗೆ, ಇಲ್ಲಿ ಪ್ರರೀಕ್ಷಾರ್ಥಿಗಳ ಬಳಕೆಗಾಗಿ ಪೆರೇಡ್ ಗ್ರೌಂಡ್, ಪಿಟಿ ಗ್ರೌಂಡ್, ಜಿಮ್ ಮತ್ತು ವಾಲಿಬಾಲ್ ಕೋರ್ಟ್ ಗಳು ಇವೆ. ಈವರೆಗೆ 493 ಉಪ ವಲಯ ಅರಣ್ಯ ಅಧಿಕಾರಿಗಳು ಕಮ್ ಮೋಜಣಿದಾರರು, 2130 ಅರಣ್ಯ ರಕ್ಷಕರು ಮತ್ತು 280 ಅರಣ್ಯ ವೀಕ್ಷಕರು ತಮ್ಮ ನೇಮಕಾತಿ ತರಬೇತಿಯನ್ನು ಈ ಕೇಂದ್ರದಲ್ಲಿ ಪಡೆದಿದ್ದಾರೆ.ಪ್ರಸ್ತುತ 10.06.2019 ರಿಂದ 110 ಸಾಮರ್ಥ್ಯವಿರುವ ಅರಣ್ಯ ರಕ್ಷಕರ ನೇಮಕಾತಿ ಪ್ರರೀಕ್ಷಾರ್ಥಿಗಳ 55ನೇ ಬ್ಯಾಚ್ ಈ ಕೇಂದ್ರದಲ್ಲಿ ನೇಮಕಾತಿ ತರಬೇತಿಯನ್ನು ಪಡೆಯುತ್ತಿದೆ. ನೇಮಕಾತಿ ತರಬೇತಿಯ ಜೊತೆಗೆ, ಕರ್ತವ್ಯನಿರತ ಉಪ ವಲಯ ಅರಣ್ಯ ಅಧಿಕಾರಿಗಳು ಕಮ್ ಮೋಜಣಿದಾರ, ಅರಣ್ಯ ರಕ್ಷಕರು ಮತ್ತು ಅರಣ್ಯ ವೀಕ್ಷಕರ ಮರುಮನನ ಕೋರ್ಸ್ ಗಳನ್ನು ಕೂಡ ನಡೆಸಲಾಗುತ್ತಿದೆ. ಜಿ.ಪಿ.ಎಸ್. ಸೌಲಭ್ಯ, ಅರಣ್ಯ ಕಾನೂನು ತಿದ್ದುಪಡಿಗಳು, ಅರಣ್ಯ ಸಮೀಕ್ಷೆ, ವನ್ಯಜೀವಿ ಸಂರಕ್ಷಣೆ, ವೈದ್ಯಕೀಯ ಸಸ್ಯಗಳ ಗುರುತಿಸುವಿಕೆ ಮುಂತಾದ ವಿಷಯಗಳಲ್ಲಿ ಈ ಮರುಮನನ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತ 1 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, 4 ವಲಯ ಅರಣ್ಯ ಅಧಿಕಾರಿಗಳು, 2 ಉಪ ವಲಯ ಅರಣ್ಯ ಅಧಿಕಾರಿಗಳು, 3 ವೀಕ್ಷಕರು ಮತ್ತು ಆಡಳಿತಕ್ಕಾಗಿ ಮಂಜೂರು ಮಾಡಿದ ಸಚಿವಾಲಯ ಸಿಬ್ಬಂದಿಗಳು ಈ ತರಬೇತಿ ಕೇಂದ್ರದಲ್ಲಿದ್ದಾರೆ.

ಸೌಲಭ್ಯಗಳು

ಸ್ಥಳ

ಸಂಪರ್ಕ ವಿವರಗಳು
 • ಶ್ರೀ. ಬ್ರಿಜೇಶ್ ವಿನಯ್ ಕುಮಾರ್  
  ವಲಯ ಅರಣ್ಯಾಧಿಕಾರಿಗಳು
 •   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಎಫ್ ಟಿ ಸಿ, ತಟ್ಟಿಹಲ್ಲಾ
 •   acftattihalla67@gmail.com
 •   8284267851
 • ಶ್ರೀ. ಎಸ್.ಎನ್ ಗೊಂಡಾ  
  ವಲಯ ಅರಣ್ಯಾಧಿಕಾರಿಗಳು
 •   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಎಫ್ ಟಿ ಸಿ, ತಟ್ಟಿಹಲ್ಲಾ
 •   acftattihalla67@gmail.com
 •   8284267851