ವಿಭಾಗದ ಮುಖ್ಯಸ್ಥರು

ಶ್ರೀ. ಎಸ್.‌ ಪ್ರಭಾಕರನ್ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು
ಉಪ ಅರಣ್ಯ ಸಂರಕ್ಷಣಾಧಿಕಾರಿ & ನಿರ್ದೇಶಕರು, ಭದ್ರಾ ಹುಲಿ ಸಂರಕ್ಷಿತ, ಬೋಳರಾಮೇಶ್ವರ ದೇವಸ್ಥಾನ ಎದುರು, ಕೆ.ಎಂ. ರಸ್ತೆ, ಚಿಕ್ಕಮಗಳೂರು-577101
08262234904
dcfbhadra@yahoo.com

ವಿಭಾಗದ ಬಗ್ಗೆ

ಭದ್ರಾ ಹುಲಿ ಮೀಸಲು ಪ್ರದೇಶ ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು, ಇದರ ಒಂದು ಸಣ್ಣ ಭಾಗ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ತರೀಕೆರೆ, ಚಿಕ್ಕಮಗಳೂರು ಮತ್ತು ಎನ್‌.ಆರ್‌. ಪುರ ತಾಲೂಕುಗಳನ್ನು ಒಳಗೊಂಡಿದೆ. ಹುಲಿ ಮೀಸಲು ಪ್ರದೇಶವನ್ನು 1999ರಲ್ಲಿ ಅಧಿಸೂಚಿತಗೊಳಿಸಲಾಯಿತು, ಅದಕ್ಕಿಂತ ಮುಂಚೆ ಇದನ್ನು 1974ರಲ್ಲಿ ವನ್ಯಜೀವಿ ಅಭಯಾರಣ್ಯ ಎಂದು ಅಧಿಸೂಚಿತಗೊಳಿಸಲಾಗಿತ್ತು. 1951ರಷ್ಟು ಹಿಂದೆಯೇ ಘೋಷಣೆ ಮಾಡಲಾಗಿದ್ದ ಜಗ್ಗರ್‌ ಕಣಿವೆ ವನ್ಯಜೀವಿ ಉದ್ಯಾನ ಈ ಅಭಯಾರಣ್ಯದ ಭಾಗವಾಗಿದೆ. ಹುಲಿ ಮೀಸಲು ಪ್ರದೇಶದ ಒಟ್ಟು ಅರಣ್ಯ ಪ್ರದೇಶ 49,246 ಹೆಕ್ಟೇರ್‌ಗಳಾಗಿದೆ. ಹುಲಿ ಮೀಸಲು ಪ್ರದೇಶಕ್ಕೆ ಅರಣ್ಯ ಸಂರಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಇದರಲ್ಲಿ ಚಿಕ್ಕಮಗಳೂರು ವ.ಜೀ. ಮತ್ತು ಲಕ್ಕವಳ್ಳಿ ವ.ಜೀ. ಎನ್ನುವ ಎರಡು ಉಪ ವಿಭಾಗಗಳಿವೆ, ಮತ್ತು ಹೆಬ್ಬೆ, ಲಕ್ಕವಳ್ಳಿ, ಮುತ್ತೋಡಿ ಮತ್ತು ತಣಿಗೆಬೈಲು ವ.ಜೀ. ಎನ್ನುವ ನಾಲ್ಕು ವಲಯಗಳನ್ನು ಹೊಂದಿದೆ. ಪಶ್ಚಿಮ ಹಾಗೂ ಎತ್ತರದ ಪ್ರದೇಶಗಳ ಒದ್ದೆ ಭೂಮಿಗಳಲ್ಲಿ ನಿತ್ಯಹಸಿರು, ಹಾಗೂ ಮೀಸಲು ಪ್ರದೇಶದ ಪೂರ್ವ ಭಾಗದಲ್ಲಿ ಒಣ ಎಲೆಯುದುರುವ ಅರಣ್ಯಗಳೊಂದಿಗೆ, ಹುಲಿ ಮೀಸಲು ಪ್ರದೇಶದ ಅರಣ್ಯಗಳು ಮುಖ್ಯವಾಗಿ ತೇವಾಂಶ ಭರಿತ ಎಲೆಯುದುರುವ ಮತ್ತು ಅರೆ ನಿತ್ಯ ಹಸಿರುವ ಮಾದರಿಯವು. ಹುಲಿ ಮೀಸಲು ಪ್ರದೇಶ, ವಿಶೇಷವಾಗಿ ಮುತ್ತೋಡಿ-ಲಕ್ಕವಳ್ಳಿ ಪ್ರದೇಶದಲ್ಲಿ, ಕರ್ನಾಟಕದ ಅತ್ಯುತ್ತಮ (ಗುಣಮಟ್ಟI/II) ತೇವಾಂಶ ಭರಿತ ಎಲೆಯುದುರುವ ಕಾಡುಗಳನ್ನು ಹೊಂದಿದೆ. ಬಾಬಾ ಬುಡನ್‌ ಗಿರಿಯ ಎತ್ತರದ ಪ್ರದೇಶಗಳಲ್ಲಿ, ಅಲ್ಲಲ್ಲಿ ಶೋಲಾ ಕಾಡುಗಳನ್ನು ಆವರಿಸಿರುವ ವಿಸ್ತೃತವಾದ ಮತ್ತು ನಿರಂತರವಾದ ಹುಲ್ಲುಗಾವಲುಗಳನ್ನು ಕಾಣಬಹುದು. ಹುಲಿ ಮೀಸಲು ಪ್ರದೇಶದಲ್ಲಿ ಕಂಡುಬರುವ ಪ್ರಾಣಿಗಳಲ್ಲಿ, ಹುಲಿ, ಚಿರತೆ, ಕಾಡು ನಾಯಿ, ಆನೆ, ಕಾಡುಕೋಣ, ಸಾಂಬಾರ, ಚುಕ್ಕೆ ಜಿಂಕೆ, ಬೊಗಳುವ ಜಿಂಕೆ, ಜೇನು ಕರಡಿ, ಕಾಡು ಹಂದಿ, ಲಂಗೂರ್, ಬಾನೆಟ್ ಕೋತಿ, ನರಿ, ವಿವಿಧ ಬಗೆಯ ಸರೀಸೃಪಗಳು ಮತ್ತು ಹಕ್ಕಿಗಳು ಮುಂತಾದವು ಸೇರಿವೆ.

ಭದ್ರಾ ವನ್ಯಜೀವಿ ವಿಭಾಗದ ನಕ್ಷೆ

--%>

ಉಪ ವಿಭಾಗಗಳು