ವಿಭಾಗದ ಮುಖ್ಯಸ್ಥರು

ಶ್ರೀ. ಶಿಂಡೆ ನೀಲೇಶ್ ಡಿಓಬಾ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಕೊಪ್ಪ ವಿಭಾಗ, ಕೊಪ್ಪ -577126
08265221266
dcfkoppa@gmail.com

ವಿಭಾಗದ ಬಗ್ಗೆ

ಕೊಪ್ಪ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ನೈರುತ್ಯ ಭಾಗದಲ್ಲಿದೆ. ಈ ವಿಭಾಗ ನರಸಿಂಹರಾಜಪುರ(ಎನ್‌.ಆರ್‌.ಪುರ), ಕೊಪ್ಪ ಮತ್ತು ಶೃಂಗೇರಿ ಕಂದಾಯ ತಾಲೂಕುಗಳನ್ನು ವ್ಯಾಪಿಸಿದೆ. ಈ ವಿಭಾಗದಲ್ಲಿ ದಾಖಲಿಸಿರುವ 89,181 ಹೆಕ್ಟೇರ್‌ ಅರಣ್ಯ ಪ್ರದೇಶವಿದ್ದು, ಇದು ಇದರ ಭೌಗೋಳಿಕ ವಿಸ್ತಾರದ (2,000.24 ಚಕಿಮೀ ) ಸುಮಾರು 44.58 ರಷ್ಟು ಪಾಲು ಹೊಂದಿದೆ. ಈ ವಿಭಾಗದಲ್ಲಿ ಕೊಪ್ಪ ಮತ್ತು ಬಾಳೆಹೊನ್ನೂರು ಈ ಎರಡು ಉಪ ವಿಭಾಗಗಳಿವೆ, ಮತ್ತು ಬಾಳೆಹೊನ್ನೂರು, ಚಿಕ್ಕಗ್ರಹಾರ, ಕಳಸ, ಕೊಪ್ಪ, ನರಸಿಂಹರಾಜಪುರ (ಎನ್.ಆರ್. ಪುರ) ಮತ್ತು ಶೃಂಗೇರಿ ಈ ಆರು ವಲಯಗಳಿವೆ. ಈ ವಿಭಾಗ ನ.ರಾ.ಪುರ ಮತ್ತು ಸಂಗಮೇಸ್ವರ ಪೇಟೆಯಲ್ಲಿ ಟಿಂಬರ್‌ ಡಿಪೋ ಹೊಂದಿದೆ. ಕೊಪ್ಪ ವಿಭಾಗದ ಕಾಡುಗಳು ಮುಖ್ಯವಾಗಿ ಅರೆ ನಿತ್ಯಹಸಿರು ಮತ್ತು ತೇವಾಂಶ ಭರಿತ ಎಲೆಯುದುರುವ ವಿಧದವಾಗಿವೆ, ಕಳಸ ಮತ್ತು ಶೃಂಗೇರಿ ವಲಯಗಳಲ್ಲಿ ಒಂದಿಷ್ಟು ಅದ್ಭುತವಾದ ನಿತ್ಯಹಸಿರು ಕಾಡುಗಳಿವೆ. ನಿತ್ಯಹಸಿರು ಅರಣ್ಯಗಳ ಎತ್ತರದ ಪ್ರದೇಶಗಳಲ್ಲಿ, ಹುಲ್ಲುಗಾವಲಿನಿಂದ ಆವೃತವಾದ ಶೋಲಾ ಕಾಡುಗಳನ್ನೂ ಕೂಡ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಪಕ್ಕದಲ್ಲಿರುವ ಪ್ರದೇಶಗಳಲ್ಲಿ ಕಾಣಬಹುದು.

ಕೊಪ್ಪ ವಿಭಾಗದ ನಕ್ಷೆ

--%>

ಉಪ ವಿಭಾಗಗಳು