ವಿಭಾಗದ ಬಗ್ಗೆ
ಕರ್ನಾಟಕ ರಾಜ್ಯವು ವೈವಿಧ್ಯಮಯ ಸಸ್ಯವರ್ಗ ಮತ್ತು ಜೀವಿಗಳನ್ನು ಒಳಗೊಂಡ ಅತ್ಯಂತ ಮನೋಹರವಾದ ಅರಣ್ಯಗಳನ್ನು ಹೊಂದಿದೆ. ರಾಜ್ಯದ ಅರಣ್ಯಗಳು ವನ್ಯಜೀವಿಗಳಿಂದ ಸಂಪದ್ಬರಿತವಾಗಿದೆ. ರಾಜ್ಯದಲ್ಲಿರುವ ವನ್ಯಪ್ರಾಣಿಗಳನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ನಿಯಮಗಳಡಿ ಸಂರಕ್ಷಿಸಲಾಗುತ್ತಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ವನ್ಯಜೀವಿ ಘಟಕಕ್ಕೆ ಮುಖ್ಯಸ್ಥರಾಗಿರುತ್ತಾರೆ. ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಸಂರಕ್ಷಿತ ಮೀಸಲು ಪ್ರದೇಶಗಳನ್ನು ಒಳಗೊಂಡ ಸಂರಕ್ಷಿತ ಪ್ರದೇಶಗಳು ಎಂದು ಗುರುತಿಸಲಾದ ರಾಜ್ಯದ ಸುಮಾರು 25 ಅರಣ್ಯ ಪ್ರದೇಶಗಳನ್ನು ವನ್ಯಜೀವಿ ಘಟಕದಿಂದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರವರ ಮಾರ್ಗದರ್ಶನದಲ್ಲಿ ನಿರ್ವಹಣೆ ಮಾಡುತ್ತದೆ. ಅಲ್ಲದೇ ಇಡೀ ಕರ್ನಾಟಕ ರಾಜ್ಯದ ಯಾವುದೇ ವನ್ಯಜೀವಿ ಸಂಬಂಧಿತ ವಿಷಯಗಳ ಆಡಳಿತಕ್ಕೂ ಸಹ ವನ್ಯಜೀವಿ ಘಟಕವು ಜವಾಬ್ದಾರಿ ಹೊಂದಿರುತ್ತದೆ.