ವಿಭಾಗದ ಮುಖ್ಯಸ್ಥರು

ಡಾll ಅಜ್ಜಯ್ಯ ಜಿ. ಆರ್. ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಳಿಯಾಳ ವಿಭಾಗ, ಹಳಿಯಾಳ 581329
08284220128
dcfhalyal@gmail.com

ವಿಭಾಗದ ಬಗ್ಗೆ

ಹಳಿಯಾಳ ಅರಣ್ಯ ವಿಭಾಗ ಉತ್ತರ ಕನ್ನಡ ಜಿಲ್ಲೆಯ ಈಶಾನ್ಯ ಭಾಗದಲ್ಲಿದೆ ಮತ್ತು ಧಾರವಾಡ ವಿಭಾಗದ ಪಶ್ಚಿಮ ಭಾಗದಲ್ಲಿದೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 109768.895 ಹೆಕ್ಟೇರ್‌ಗಳಷ್ಟಿದೆ ಮತ್ತು ಭೌಗೋಳಿಕ ಪ್ರದೇಶದ ವಿಸ್ತಾರ 1,480.04315 ಚ.ಕಿ.ಮೀ. ಅರಣ್ಯ ಪ್ರದೇಶ ಭೌಗೋಳಿಕ ಪ್ರದೇಶದ 74.16 ರಷ್ಟಿದೆ. ವಿಭಾಗ ಹಳಿಯಾಳ, ದಾಂಡೇಲಿ ಮತ್ತು ಜೋಯ್ಡಾ (ಭಾಗಶಃ) ತಾಲೂಕುಗಳಲ್ಲಿ ವ್ಯಾಪಿಸಿದೆ. ಹಳಿಯಾಳ, ದಾಂಡೇಲಿ ಮತ್ತು ಗಣೇಶಗುಡಿ ಈ ಮೂರು ಉಪ ವಿಭಾಗಗಳಿವೆ ಮತ್ತು ಹಳಿಯಾಳ, ಸಾಂಬ್ರಾಣಿ, ಭಾಗ್ವತಿ, ದಾಂಡೇಲಿ, ವಿರ್ನೋಲಿ, ಜೋಯ್ಡಾ, ಬಾರ್ಚಿ, ಜಗಳಬೆಟ್‌ ಮತ್ತು ತಿನೈಘಾಟ್‌ ಈ ಒಂಭತ್ತು ವಲಯಗಳನ್ನು ಹೊಂದಿದೆ. ಈ ವಿಭಾಗ 34 ಸೆಕ್ಷನ್‌ಗಳು ಮತ್ತು 112 ಬೀಟ್‌ಗಳನ್ನು ಹೊಂದಿದೆ. ಹಳಿಯಾಳ ವಿಭಾಗ ಪೂರ್ವ ಭಾಗದಲ್ಲಿ ಮುಖ್ಯವಾಗಿ ಒಣ ಎಲೆಯುದುರುವ ಕಾಡುಗಳು, ಮಧ್ಯ ಭಾಗದಲ್ಲಿ ತೇವಾಂಶ ಭರಿತ ಎಲೆಯುದುರುವ ಕಾಡುಗಳು, ಪಶ್ಚಿಮ ಭಾಗದಲ್ಲಿ ಅಲ್ಲಲ್ಲಿ ನಿತ್ಯ ಹಸಿರು ಕಾಡುಗಳ ಜೊತೆ ಅರೆ ನಿತ್ಯ ಹಸಿರು ಕಾಡುಗಳನ್ನು ಹೊಂದಿದೆ. ಹಳಿಯಾಳ ವಿಭಾಗದ ಮುಖ್ಯ ಟಿಂಬರ್‌ ಡಿಪೋ ದಾಂಡೇಲಿಯಲ್ಲಿದೆ.

ಹಳಿಯಾಳ ವಿಭಾಗದ ನಕ್ಷೆ

--%>

ಉಪ ವಿಭಾಗಗಳು