A- A A+
ಮೈಸೂರಿನ ಶ್ರೀ ಶಮಂತ್ ಗೊರೂರು ಅವರನ್ನು ೨೦೨೩ ನೇ ಸಾಲಿನ ಜನವರಿ ಮಾಹೆಯಲ್ಲಿ ಹಮ್ಮಿಕೊಂಡ ಲೋಗೋ ಸ್ಪರ್ಧೆಯ ವಿಜೇತರೆಂದು ಘೋಷಿಸಲಾಗಿದೆ. ಅಭಿನಂದನೆಗಳು! 2022-23 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರರು, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ವೃಂದದ ಸಿಬ್ಬಂದಿಗಳ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ, ದಿನಾಂಕ: 21-03-2023. ಅರಣ್ಯ ಇಲಾಖೆಯಲ್ಲಿ 2022-23 ನೇ ಸಾಲಿನ ನೇರ ನೇಮಕಾತಿ ಮೂಲಕ ಆನೆ ಕಾವಾಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಕುರಿತು ಅಧಿಸೂಚನೆ, ವೇಳಾಪಟ್ಟಿ ಮತ್ತು ಅರ್ಜಿ ನಮೂನೆ. 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 18-03-2023 ಅರಣ್ಯ ವ್ಯವಸ್ಥಾಪನಾಧಿಕಾರಿ (Forest Settlement Officer) ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಗರಿಷ್ಠ ಎರಡು ವರ್ಷಗಳ ಅವಧಿಗೆ ನೇಮಕಾತಿಯ ಕುರಿತು
ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಅರಣ್ಯೀಕರಣ ಕಾರ್ಯಕ್ರಮರ್ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ಹಾಗೂ ಅವರ ಸಹಕಾರವನ್ನು ಪಡೆಯುವ ದೃಷ್ಟಿಯಿಂದ ಸಾರ್ವಜನಿಕ ಸಹಬಾಗಿತ್ವದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಎಂಬ ಹೊಸ ಯೋಜನೆಯನ್ನು 2011-12ನೇ ಸಾಲಿನಿಂದ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದ ಅನ್ವಯ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ ರೂ. 35/- ಗಳನ್ನು ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ ರೂ. 40/- ಹಾಗೂ ರೂ. 50/- ಹೀಗೆ ಒಟ್ಟು ರೂ. 125/- ಗಳನ್ನು ಪ್ರೋತ್ಸಾಹ ಧನವನ್ನಾಗಿ ಪಾವತಿಸಲಾಗುತ್ತದೆ. ಈ ರೀತಿ ಪಾವತಿಸುತ್ತಿರುವ ಪ್ರೋತ್ಸಾಹ ಧನದಿಂದ ರೈತರು ಸಸಿಗಳನ್ನು ಪಡೆಯಲು ಹಾಗೂ ನೆಡಲು ಖರ್ಚು ಮಾಡುವ ಹಣವನ್ನು ತುಂಬಿಕೊಳ್ಳಬಹುದಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಸಸಿಸಗಳನ್ನು ನೆಟ್ಟು ಬೆಳಸಿದ್ದಲ್ಲಿ ಗಣನೀಯವಾಗಿ ಪ್ರೋತ್ಸಾಹ ಧನ ಪಡೆಯಬಹುದಾಗಿದೆ. ಪ್ರೋತ್ಸಾಹ ಧನ ಪಡಿಯುದಲ್ಲದೇ ರೈತರು ಮರಗಳಿಂದ ಸಿಗುವಂತಹ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರಮಟ್ಟು, ಇತ್ಯಾದಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

  • ಕೃಅಪ್ರೋಯೋ ಅಡಿ ನೋಂದಣಿ ಮಾಡಿಕೊಳ್ಳಲು ಇರುವ ಪ್ರಕ್ರಿಯೆ ಏನು

    ಕೃಅಪ್ರೋಯೋ ಅಡಿಯಲ್ಲಿ ಸಸಿಗಳನ್ನು ನೆಡುವ ಇಚ್ಛೆಯುಳ್ಳ ರೈತರು ಸಮೀಪದ ವಲಯ ಅರಣ್ಯ ಕಚೇರಿಗೆ ಭೇಟಿ ನೀಡಿ ನಿರ್ದಿಷ್ಟಪಡಿಸಿದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅರ್ಜಿಯಲ್ಲಿ ಈ ಕೆಳಗಿನ ವಿವರಗಳನ್ನು ಒದಗಿಸಬೇಕು: ಅರ್ಜಿದಾರರ ಹೆಸರು, ವಿಳಾಸ ಮತ್ತು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಸಸಿ ನೆಡಲು ಉದ್ದೇಶಿಸಿರುವ ಭೂಮಿಯ ಪಹಣಿ, ಭೂಮಿಯ ಕೈ ನಕ್ಷೆ, ಅಗತ್ಯವಿರುವ ಸಸಿಗಳ ವಿವರ (ಪ್ರಭೇದ, ಸಸಿಗಳ ಸಂಖ್ಯೆ, ಪಾಲಿ ಬ್ಯಾಗ್‌ಗಳ ಗಾತ್ರ ಇತ್ಯಾದಿ) ಮತ್ತು ಅರ್ಜಿದಾರರ ಬ್ಯಾಂಕ್‌ ಖಾತೆಯ ವಿವರ. ಅರ್ಜಿಯ ಜೊತೆ ನೋಂದಣಿ ಶುಲ್ಕ ರೂ. 10/- ನೀಡಬೇಕು.

  • ನೋಂದಣಿಯನ್ನು ಯಾವಾಗ ಮಾಡಬೇಕು

    ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚೆ ನೋಂದಣಿಯನ್ನು ಮಾಡಬೇಕು (ಮೇ ತಿಂಗಳ ಅಂತ್ಯಕ್ಕಿಂತ ಮುಂಚೆ)

  • ಸಸಿಗಳನ್ನು ಪಡೆಯುವುದು ಹೇಗೆ

    ಅರ್ಜಿದಾರರು ಸಮೀಪದ ನರ್ಸರಿಗೆ ಭೇಟಿ ನೀಡಬೇಕು ಮತ್ತು ಈ ಕೆಳಗಿನ ಸಬ್ಸಿಡಿ ದರಗಳನ್ನು ಪಾವತಿಸಿ ಅರ್ಜಿ ಸಲ್ಲಿಸಿದ ಸಸಿಗಳನ್ನು ಪಡೆದುಕೊಳ್ಳಬೇಕು. • 5”x8” ಮತ್ತು 6”x9” ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 1/- • 8”x12” ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 3/- • 10”x16” ಮತ್ತು 14”20” ಪಾಲಿಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 5/-

  • ಒಂದು ವೇಳೆ ಅರ್ಜಿ ಸಲ್ಲಿಸಿದ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ ಏನು ಮಾಡಬೇಕು

    ಒಂದು ವೇಳೆ ಅರ್ಜಿ ಸಲ್ಲಿಸಿದ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ, ನರ್ಸರಿಯ ಸಂಬಂಧಿತ ಉಸ್ತುವಾರಿ ಸಿಬ್ಬಂದಿಯಿಂದ ಅದನ್ನು ಸೂಚಿಸುವ ಲಿಖಿತ ಅನುಮೋದನೆಯನ್ನು ಪಡೆದುಕೊಳ್ಳಬೇಕು. ಲಿಖಿತ ಅನುಮೋದನೆಯಲ್ಲಿ ಸಲ್ಲಿಸುವ ಮೂಲಕ, ಸಸಿಗಳು ಲಭ್ಯವಿರುವ ವಲಯ ಅಥವಾ ವಿಭಾಗದ ಇನ್ನೊಂದು ನರ್ಸರಿಯಿಂದ ಸಸಿಗಳನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಅರ್ಜಿದಾರ ಸಸಿಗಳನ್ನು ಪಡೆದುಕೊಳ್ಳಲು ವಿಫಲನಾದರೆ, ಅರಣ್ಯ ಇಲಾಖೆ ಆ ವರ್ಷ ಸಸಿಗಳನ್ನು ಬೆಳೆಸುತ್ತದೆ ಮತ್ತು ಮುಂದಿನ ಮಳೆಗಾಲಕ್ಕೆ ಸಸಿಗಳನ್ನು ಒದಗಿಸಲು ವ್ಯವಸ್ಥೆ ಮಾಡುತ್ತದೆ.

  • ಪ್ರೋತ್ಸಾಹಧನವನ್ನು ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆ ಏನು

    ಪ್ರತಿ ಫಲಾನುಭವಿ ಪ್ರತಿ ಹೆಕ್ಟೇರ್‌ಗೆ ಗರಿಷ್ಠ 400 ಸಸಿಗಳಿಗೆ ಪ್ರೋತ್ಸಾಹಧನ ಪಡೆಯಲು ಅರ್ಹನಾಗಿರುತ್ತಾನೆ. ಸಸಿ ನೆಡುವ ಒಟ್ಟು ಪ್ರದೇಶಕ್ಕೆ ಸಂಬಂಧಿಸಿ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. 2017-18ರ ಬಳಿಕ ನೆಡಲಾದ ಸಸಿಗಳಿಗೆ ಸಂಬಂಧಿಸಿ, ಈ ಕೆಳಗಿನ ಅನುಸೂಚಿಯ ಪ್ರಕಾರ ಮೂರು ವರ್ಷಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ: • ಸಸಿ ನೆಟ್ಟ ಒಂದು ವರ್ಷಗಳವರೆಗೆ ಬದುಕಿ ಉಳಿಯುವ ಪ್ರತಿ ಸಸಿಗೆ ರೂ. 30/- • ಸಸಿ ನೆಟ್ಟ ಎರಡು ವರ್ಷಗಳವರೆಗೆ ಬದುಕಿ ಉಳಿಯುವ ಪ್ರತಿ ಸಸಿಗೆ ರೂ. 30/- • ಸಸಿ ನೆಟ್ಟ ಬಳಿಕ ಮೂರು ವರ್ಷ ಪೂರೈಸುವ ಪ್ರತಿ ಸಸಿಗೆ ರೂ. 40/- 2017-18ಕ್ಕಿಂತ ಮುಂಚೆ ನೆಡಲಾದ ಸಸಿಗಳಿಗೆ ಸಂಬಂಧಿಸಿ, ಈ ಕೆಳಗಿನ ಅನುಸೂಚಿಯ ಪ್ರಕಾರ ಮೂರು ವರ್ಷಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ: • ಸಸಿ ನೆಟ್ಟ ಒಂದು ವರ್ಷಗಳವರೆಗೆ ಬದುಕಿ ಉಳಿಯುವ ಪ್ರತಿ ಸಸಿಗೆ ರೂ. 10/- • ಸಸಿ ನೆಟ್ಟ ಎರಡು ವರ್ಷಗಳವರೆಗೆ ಬದುಕಿ ಉಳಿಯುವ ಪ್ರತಿ ಸಸಿಗೆ ರೂ. 15/- • ಸಸಿ ನೆಟ್ಟ ಬಳಿಕ ಮೂರು ವರ್ಷ ಪೂರೈಸುವ ಪ್ರತಿ ಸಸಿಗೆ ರೂ. 20/-

  • ಯಾವ ಪ್ರಭೇದಗಳು ಪ್ರೋತ್ಸಾಹಧನಕ್ಕೆ ಅರ್ಹವಲ್ಲ

    ಯೂಕಲಿಪ್ಟಸ್, ಅಕೇಶಿಯಾ, ಸಿಲ್ವರ್‌ ಓಕ್ (ಒಂದು ವೇಳೆ ಕಾಫಿ ಎಸ್ಟೇಟ್‌ನಲ್ಲಿ ನೆಟ್ಟರೆ), ಕಾಸುರಿನಾ, ಕಾಸಿಯಾ ಸಿಯಾಮಿಯಾ (ಸೀಮೆತಂಗಡಿ), ಗ್ಲಿರಿಸಿಡಿಯಾ, ಸೆನ್ಸಬನಿಯಾ, ಇರಿಥ್ರಿನಾ, ರಬ್ಬರ್‌, ಸುಬಾಬುಲ್‌, ತೆಂಗು, ಅಡಿಕೆ, ಕಿತ್ತಳೆ, ಹಾಗೂ ಎಲ್ಲ ವಿಧದ ನಿಂಬೆ ಪ್ರಭೇದಗಳು ಮತ್ತು ಕಸಿ ಮಾಡಿದ ಮಾವು.

  • ಪ್ರೋತ್ಸಾಹಧನದ ವಿತರಣೆಗೆ ಇರುವ ಪ್ರಕ್ರಿಯೆ ಏನು

    ಪ್ರತಿ ವರ್ಷ, ಕೃಅಪ್ರೋಯೋ ಅಡಿಯಲ್ಲಿ ರೈತರು ಸಸಿಗಳನ್ನು ನೆಟ್ಟಿರುವ ಪ್ರದೇಶಗಳನ್ನು ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು/ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ನೆಟ್ಟ ಸಸಿಗಳ ಬದುಕುಳಿದಿರುವಿಕೆ ಮತ್ತು ಬೆಳವಣಿಗೆಗೆ ಸಂಬಂಧಿಸಿದ ವಿವರಗಳನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಅವರಿಗೆ ಸಂಬಂಧಿಸಿದ ವಲಯ/ ಅರಣ್ಯ ವಿಭಾಗದ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ, ಅಲ್ಲಿಂದ ಪ್ರೋತ್ಸಾಹಧನ ಪಾವತಿ ಮಾಡುವಂತೆ ಕೋರಿ ಸಮಗ್ರ ವರದಿಯನ್ನು ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ. ಪ್ರಧಾನ ಕಚೇರಿಯಲ್ಲಿ ವರದಿಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಪ್ರೋತ್ಸಾಹಧನ ಮೊತ್ತವನ್ನು ಘಟಕ ಕಚೇರಿಗಳಿಗೆ ವಿತರಣೆ ಮಾಡಲಾಗುತ್ತದೆ, ಅವರು ಫಲಾನುಭವಿಯ ಬ್ಯಾಂಕ್‌ ಖಾತೆ ಸಂಖ್ಯೆ, ಬ್ಯಾಂಕ್‌ನ ಹೆಸರು, ಐಎಫ್‌ಎಸ್‌ಸಿ ಕೋಡ್, ಮುಂತಾದ ವಿವರಗಳ ಆಧಾರದಲ್ಲಿ ಬಿಲ್‌ಗಳನ್ನು ಸಿದ್ಧಪಡಿಸುತ್ತಾರೆ ಮತ್ತು ಸರ್ಕಾರದ ಖಜಾನೆಗೆ ಸಲ್ಲಿಸುತ್ತಾರೆ. ಆನಂತರ, ಇಸಿಎಸ್‌ ಮೂಲಕ ಖಜಾನೆಯಿಂದ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಚೆಕ್‌ಗಳನ್ನು ವರ್ಗಾವಣೆ ಮಾಡಲಾಗುತ್ತದೆ.

  • ಕೃಅಪ್ರೋಯೋ ಅನುಷ್ಠಾನಗೊಳಿಸುವಲ್ಲಿ ಅರಣ್ಯ ಇಲಾಖೆಗೆ ಯಾವುದೇ ಸಂಘಟನೆ ಅಥವಾ ಎನ್‌ಜಿಒ ನೆರವಾಗಬಹುದೇ

    ಕೃಅಪ್ರೋಯೋ ಇದರಲ್ಲಿ ಅರಣ್ಯ ಇಲಾಖೆಗೆ ನೆರವು ನೀಡಲು ಬಯಸುವ ಸ್ವಯಂಸೇವಾ ಸಂಘಟನೆಗಳು, ಎನ್‌ಜಿಒಗಳು, ವಿಎಫ್‌ಸಿಗಳು, ಪರಿಸರ ಅಭಿವೃದ್ಧಿ ಸದಸ್ಯರು ಮುಂತಾದವರು ಸಂಬಂಧಪಟ್ಟ ವಿಭಾಗೀಯ ಅರಣ್ಯ ಕಚೇರಿಗಳಲ್ಲಿ ತಮ್ಮನ್ನು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಂಡ ನಂತರ ಅವರು ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಭೇಟಿ ನೀಡಬೇಕು ಮತ್ತು ಕೃಅಪ್ರೋಯೋ ಬಗ್ಗೆ ರೈತರಿಗೆ ವಿವರವಾದ ಮಾಹಿತಿ ನೀಡಬೇಕು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮತ್ತು ಸೂಚಿತ ಕಾರ್ಯವಿಧಾನದಂತೆ ಇಲಾಖೆಯೊಂದಿಗೆ ನೋಂದಣಿ ಮಾಡಿಕೊಳ್ಳಲು ಅವರು ರೈತರಲ್ಲಿ ಪ್ರೇರಣೆ ಮೂಡಿಸಬೇಕು. ಅವರು ಸಸಿ ನೆಡುವುದಕ್ಕೆ ಮುಂಚೆ ಮತ್ತು ನಂತರ, ಗುಂಡಿ ತೋಡುವುದು, ಸಸಿ ನೆಡುವುದು, ವ್ಯವಸಾಯ ಕಾರ್ಯಾಚರಣೆಗಳು ಮುಂತಾದ ತಾಂತ್ರಿಕ ಮಾಹಿತಿಗಳನ್ನೂ ಒದಗಿಸಬೇಕು. ನರ್ಸರಿಗಳಿಂದ ಸಸಿಗಳನ್ನು ಸಂಗ್ರಹಿಸಲು ಮತ್ತು ತಮ್ಮ ಭೂಮಿಯಲ್ಲಿ ಸರಿಯಾದ ಸಮಯದಲ್ಲಿ, ಅಂದರೆ ಮುಂಗಾರು ಅವಧಿಯಲ್ಲಿ ಅವುಗಳನ್ನು ನೆಡಲು ಅವರು ರೈತರಿಗೆ ಸಲಹೆ ನೀಡಬೇಕು. ಸಸಿ ನೆಡುವಿಕೆ ಕಾರ್ಯದ ಮೌಲ್ಯಮಾಪದ ಅವಧಿಯಲ್ಲಿ ಅವರು ಅರಣ್ಯ ಇಲಾಖೆ ಅಧಿಕಾರಿಗಳು/ ಸಿಬ್ಬಂದಿಗೆ ಸಹಾಯವನ್ನೂ ಅವರು ಮಾಡಬೇಕು. ಕೃಅಪ್ರೋಯೋ ಅನುಷ್ಠಾನದಲ್ಲಿ ಅರಣ್ಯ ಇಲಾಖೆಗೆ ನೆರವಾಗುವ ಸ್ವಯಂಸೇವಾ ಸಂಘಟನೆಗಳು, ಎನ್‌ಜಿಒಗಳು, ವಿಎಫ್‌ಸಿಗಳು ಮುಂತಾದವರಿಗೆ ಈ ಕೆಳಗಿನ ಅನುಸೂಚಿಯ ಪ್ರಕಾರ ನಾಲ್ಕು ವರ್ಷಗಳಲ್ಲಿ ವಿತರಿಸಲಾದ ಪ್ರತಿ ಸಸಿಗೆ ರೂ. 5/- ಒಟ್ಟು ಮೊತ್ತವನ್ನು ಪಾವತಿಸಲಾಗುತ್ತದೆ. • ಫಲಾನುಭವಿಯ ಭೂಮಿಯಲ್ಲಿ ಸಸಿ ನೆಡುವ ವರ್ಷ – ರೂ. 2/- ನೆಟ್ಟ ಪ್ರತಿ ಸಸಿಗೆ • ಸಸಿ ನೆಟ್ಟ ಬಳಿಕ ಒಂದು ವರ್ಷ ಪೂರ್ಣಗೊಂಡಾಗ – ರೂ. 1/- ಬದುಕಿ ಉಳಿದ ಪ್ರತಿ ಸಸಿಗೆ • ಸಸಿ ನೆಟ್ಟ ಬಳಿಕ ಎರಡು ವರ್ಷ ಪೂರ್ಣಗೊಂಡಾಗ – ರೂ. 1/- ಬದುಕಿ ಉಳಿದ ಪ್ರತಿ ಸಸಿಗೆ • ಸಸಿ ನೆಟ್ಟ ಬಳಿಕ ಮೂರು ವರ್ಷ ಪೂರ್ಣಗೊಂಡಾಗ – ರೂ.1/- ಬದುಕಿ ಉಳಿದ ಪ್ರತಿ ಸಸಿಗೆ