ವಿಭಾಗದ ಬಗ್ಗೆ
ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ನೇಮಕಾತಿ ಘಟಕ, ಭಾರತೀಯ ಅರಣ್ಯ ಸೇವೆ ಮತ್ತು ರಾಜ್ಯ ಅರಣ್ಯ ಸೇವೆ, ವಲಯ ಅರಣ್ಯ ಅಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ, ಮೋಜಣಿದಾರರು, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ, ಸಚಿವಾಲಯ ಸಿಬ್ಬಂದಿ, ಚಾಲಕರು ಮತ್ತು ಡಿ ಗ್ರೂಪ್ ನೌಕರರು ಸೇರಿದಂತೆ ಎಲ್ಲ ಸಿಬ್ಬಂದಿ ವಿಷಯಗಳ ಉಸ್ತುವಾರಿ ಹಾಗೂ ವಲಯ ಅರಣ್ಯ ಅಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ, ಮೋಜಣಿದಾರರು, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ, ಆನೆ ಮಾವುತರು ಮತ್ತು ಕಾವಾಡಿಗಳ ನೇರ ನೇಮಕಾತಿಯನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ದಿನಗೂಲಿ ಕಾರ್ಮಿಕರು ಮತ್ತು ಅನುಕಂಪ ಆಧಾರದಲ್ಲಿ ನೇಮಕವಾದವರ ಸೇವಾ ವಿಷಯಗಳನ್ನೂ ಸಹ ಈ ಘಟಕವು ನಿರ್ವಹಿಸುತ್ತದೆ.