ವಿಭಾಗದ ಬಗ್ಗೆ
ಕರ್ನಾಟಕ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಮತ್ತು ಯೋಜನೆಗಳು ಘಟಕವು ಜಿಲ್ಲಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುವ 30 ಸಾಮಾಜಿಕ ಅರಣ್ಯ ವಿಭಾಗಗಳನ್ನು ಒಳಗೊಂಡಿದೆ. ಈ ವಿಭಾಗಗಳು ರಾಜ್ಯದಾದ್ಯಂತ ಅರಣ್ಯೇತರ ಭೂಮಿಯನ್ನು ಹಸಿರಾಗಿಸುವ ಗುರಿಯನ್ನು ಹೊಂದಿರುವ ಅರಣ್ಯೀಕರಣ ಕಾರ್ಯಗಳನ್ನು ಕೈಗೊಳ್ಳುತ್ತವೆ. ನಾಲಾ-ಬಂಡ್.ಗಳು, ನದಿ ಪಾತ್ರಗಳು, ಶಾಲೆ / ಕಾಲೇಜು ಕಾಂಪೌಂಡ್.ಗಳು, ಸಾಂಸ್ಥಿಕ ಭೂಮಿಗಳು, ಗೋಮಾಳ ಭೂಮಿಗಳು ಮುಂತಾದ ಖಾಲಿ ಭೂಮಿಗಳಲ್ಲಿ ನೆಡುತೋಪುಗಳನ್ನು ಸಾಮಾನ್ಯವಾಗಿ ಬೆಳೆಸಲಾಗುತ್ತದೆ. ಅಂತಹ ಕೆಲಸಗಳ ಮೂಲಕ, ಸಾಮಾಜಿಕ ಅರಣ್ಯ ಘಟಕವು ನಿರುದ್ಯೋಗಿಗಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಘಟಕವು ರಾಜ್ಯದ ಎಲ್ಲಾ ಪ್ರಾದೇಶಿಕ ವಿಭಾಗಗಳಲ್ಲಿ ಹಲವಾರು ಅರಣ್ಯೀಕರಣ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಸಹ ಹೊಂದಿದೆ. ಇವುಗಳಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನ (ಮರ ಉದ್ಯಾನ), ದೈವಿವನ (ದೇವರಕಾಡು), ಔಷಧೀಯ ಸಸ್ಯ ಸಂರಕ್ಷಣಾ ಪ್ರದೇಶಗಳು ಮತ್ತು ಔಷಧೀಯ ಸಸ್ಯ ಅಭಿವೃದ್ಧಿ ಪ್ರದೇಶಗಳು (ಎಂಪಿಸಿಎ ಮತ್ತು ಎಂಪಿಡಿಎ), ಸಮೃದ್ಧ ಹಸಿರು ಗ್ರಾಮ ಯೋಜನೆ (SHGY), ತಾಲೂಕಿಗೊಂಡು ಹಸಿರು ಗ್ರಾಮ ಯೋಜನೆ (THGY), ಗ್ರಾಮ ಅರಣ್ಯ ಸಮಿತಿ ಯೋಜನೆಯ ಪುನರುಜ್ಜೀವನ (VFC) ಮತ್ತು ಕೇಂದ್ರ ಪ್ರಾಯೋಜಿತ ಯೋಜನೆ (CSS) ಸೇರಿವೆ. ಇದು ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್.ಟಿಪಿಸಿ) ರವರು ಒದಗಿಸುವ ಹಣದಿಂದ ಮರ ನೆಡುವ ಯೋಜನೆಯನ್ನು ಸಹ ಜಾರಿಗೊಳಿಸುತ್ತಿದೆ.