ಶ್ರೀಗಂಧ ನೆಡುತೋಪುಗಳ ರಕ್ಷಣೆ ಮತ್ತು ಸ್ವಾಭಾವಿಕವಾಗಿ ಶ್ರೀಗಂಧ ಬೆಳೆದಿರುವ ಪ್ರದೇಶಗಳ ರಕ್ಷಣೆ ಮತ್ತು ನಿರ್ವಹಣೆ ಈ ಯೋಜನೆಯ ಪ್ರಧಾನ ಗುರಿಯಾಗಿದೆ. ಈ ಯೋಜನೆಯಡಿ ಬೆಳೆಸಲಾದ ನೆಡತೋಪುಗಳಿಗೆ ಚೈನ್ ಲಿಂಕ್ ಮೆಶ್ ಅಳವಡಿಸುವುದು, ಕಲ್ಲು/ಇಟ್ಟಿಗೆಗಳಿಂದ ತಡೆಗೋಡೆ ನಿರ್ಮಾಣ, ಹಗಲು-ರಾತ್ರಿ ಗಸ್ತುಕಾಯುವುದು, ಮಣ್ಣು ಮತ್ತು ತೇವಾಂಶ ಕ್ರಮಗಳು, ಶ್ರೀಗಂಧ ಬೀಜಗಳ ಬಿತ್ತನೆ, ಬೆಳೆಕು ನಿರ್ವಹಣೆಗೆ ರೆಂಬೆ-ಕೊಂಬೆ ಸವರುವುದು, ಬೆಂಕಿಯಿಂದ ರಕ್ಷಣೆ, ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ