ವೃತ್ತದ ಮುಖ್ಯಸ್ಥರು

ಶ್ರೀ. ಎಸ್.ಎಸ್.ಲಿಂಗರಾಜ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ ವೃತ್ತ, ಬಳ್ಳಾರಿ, ಕಲಮ್ಮ ರಸ್ತೆ, ಮೋಥಿ ಸರ್ಕಲ್, ಬಳ್ಳಾರಿ -583101
08392272001
ccfballary@gmail.com

ವೃತ್ತದ ಬಗ್ಗೆ

ಬಳ್ಳಾರಿ ನಾಲ್ಕು ಪ್ರಾದೇಶಿಕ ವಿಭಾಗಗಳನ್ನು ಹೊಂದಿದೆ, ಅವುಗಳೆಂದರೆ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ಕೊಪ್ಪಳ ವಿಭಾಗಗಳು. ಈ ವೃತ್ತದಲ್ಲಿ ನಾಲ್ಕು ಸಾಮಾಜಿಕ ಅರಣ್ಯೀಕರಣ ವಿಭಾಗಗಳಿವೆ, ಅವುಗಳೆಂದರೆ ಬಳ್ಳಾರಿ ಸಾ.ಅ. ವಿಭಾಗ, ಚಿತ್ರದುರ್ಗ ಸಾ.ಅ. ವಿಭಾಗ, ದಾವಣಗೆರೆ ಸಾ.ಅ. ವಿಭಾಗ ಮತ್ತು ಕೊಪ್ಪಳ ಸಾ.ಅ. ವಿಭಾಗ. ಬಳ್ಳಾರಿ ವೃತ್ತದಲ್ಲಿರುವ ಬಹುತೇಕ ಕಾಡುಗಳು ಒಣ ಎಲೆಯುದುರುವ ಮತ್ತು ಕುರುಚಲು ಕಾಡು ವಿಧದವು. ದಾವಣಗೆರೆ ವಿಭಾಗದ ಕೆಲವು ಭಾಗ ಮತ್ತು ಬಳ್ಳಾರಿ ವಿಭಾಗದ ಸಂಡೂರು ಪ್ರದೇಶಗಳು ಒಂದಿಷ್ಟು ಉತ್ತಮ ಒಣ ಮಿಶ್ರ ಎಲೆಯುದುರುವ ಕಾಡುಗಳನ್ನು ಹೊಂದಿವೆ. ಈ ವೃತ್ತದಲ್ಲಿ ನಾಲ್ಕು ವನ್ಯಜೀವಿ ಅಭಯಾರಣ್ಯಗಳಿವೆ: ಚಿತ್ರದುರ್ಗ ವಿಭಾಗದಲ್ಲಿ ಜೋಗಿಮಟ್ಟಿ ವ.ಜೀ.ಅ, ಬಳ್ಳಾರಿ ವಿಭಾಗದಲ್ಲಿ ದರೋಜಿ ಕರಡಿ ಅಭಯಾರಣ್ಯ ಮತ್ತು ಗುಡೇಕೋಟೆ ಕರಡಿ ಅಭಯಾರಣ್ಯ, ಮತ್ತು ದಾವಣಗೆರೆ ವಿಭಾಗದಲ್ಲಿ ರಂಗಯ್ಯನದುರ್ಗ ವ.ಜೀ.ಅ.

ಬಳ್ಳಾರಿ ವೃತ್ತದ ನಕ್ಷೆ