ಕೊಡಗಿನ ಕುಶಾಲನಗರದ ಅರಣ್ಯ ತರಬೇತಿ ಕೇಂದ್ರವನ್ನು 1960 (15-12-1960)ರಲ್ಲಿ ರಾಜ್ಯದ ವಿವಿಧ ಅರಣ್ಯ ವೃತ್ತಗಳಲ್ಲಿ ಅರಣ್ಯ ರಕ್ಷಕರ ಹುದ್ದೆಗೆ ಆಯ್ಕೆಯಾದ ಪರೀಕ್ಷಾರ್ಥಿಗಳ ನೇಮಕಾತಿ ತರಬೇತಿಗಾಗಿ ಸ್ಥಾಪನೆ ಮಾಡಲಾಯಿತು. 1960 ರಿಂದ 1996ವರೆಗೆ ಈ ತರಬೇತಿ ಕೇಂದ್ರದ ಆಡಳಿತ ಉ.ಅ.ಸಂ. ಮಡಿಕೇರಿ (ತಾ) ಇವರ ಅಡಿಯಲ್ಲಿತ್ತು.ಆನಂತರ, ಇದನ್ನು ಅರಣ್ಯ ಸಂರಕ್ಷಕರು, ತರಬೇತಿ ಮತ್ತು ಪ್ರವಾಸೋದ್ಯಮ, ಧಾರವಾಡ ಇವರ ವ್ಯಾಪ್ತಿಗೆ ತರಲಾಯಿತು ಮತ್ತು ಅಂತಿಮವಾಗಿ, 2006ರಿಂದ ಕುಶಾಲನಗರದ ಅರಣ್ಯ ತರಬೇತಿ ಕೇಂದ್ರದ ಆಡಳಿತವನ್ನು ಬೆಂಗಳೂರಿನ ಕಾಡುಗೋಡಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವ್ಯಾಪ್ತಿಗೆ ತರಲಾಯಿತು. ಆಡಳಿತ ಬ್ಲಾಕ್, 2 ತರಗತಿ ಕೋಣೆಗಳು (ಒಂದು ಹೊಸದು), ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, 2 ಡಾರ್ಮಿಟರಿಗಳು, 1 ಮಹಿಳೆಯರ ಹಾಸ್ಟೆಲ್, ಅಡುಗೆ ಮನೆ ಮತ್ತು ಊಟದ ಹಾಲ್ ನಂಥ ಸೌಕರ್ಯಗಳನ್ನು ಈ ತರಬೇತಿ ಕೇಂದ್ರ ಹೊಂದಿದೆ. ಇದು ಬಾಸ್ಕೆಟ್ ಬಾಲ್ ಕೋರ್ಟ್, ವಾಲಿಬಾಲ್ ಕೋರ್ಟ್, ಜಿಮ್ ಮತ್ತು ಆಟದ ಮೈದಾನ ಹಾಗೂ ಸಿಬ್ಬಂದಿ ವಸತಿ ಗೃಹಗಳನ್ನು ಕೂಡ ಹೊಂದಿದೆ. ಒಟ್ಟು 3056 ಅರಣ್ಯ ರಕ್ಷಕರು, 84 ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು 75 ಅರಣ್ಯ ವೀಕ್ಷಕರು ಈಗಾಗಲೇ ನೇಮಕಾತಿ ತರಬೇತಿಯನ್ನು ಈ ತರಬೇತಿ ಕೇಂದ್ರದಿಂದ ಪಡೆದಿದ್ದಾರೆ. ಪ್ರಸ್ತುತ 58 ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು ಮಾಜಣಿದಾರ ಪರೀಕ್ಷಾರ್ಥಿಗಳು ನೇಮಕಾತಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಕರು, ವಲಯ ಅರಣ್ಯ ಅಧಿಕಾರಿಗಳು, ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು ಅರಣ್ಯ ವೀಕ್ಷಕರಂಥ ಕರ್ತವ್ಯ ನಿರತ ಅಧಿಕಾರಿಗಳಿಗೆ ಅರಣ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಯಮಿತವಾಗಿ ಮರುಮನನ ಕೋರ್ಸ್ ಗಳನ್ನೂ ಕೂಡ ನಡೆಸಲಾಗುತ್ತಿದೆ. ಈ ಅರಣ್ಯ ತರಬೇತಿ ಕೇಂದ್ರಕ್ಕೆ ಸಹಾಯಕ ಅರಣ್ಯ ಸಂರಕ್ಷಕರು ಮುಖ್ಯಸ್ಥರಾಗಿದ್ದಾರೆ ಮತ್ತು 2 ವಲಯ ಅರಣ್ಯ ಅಧಿಕಾರಿಗಳು, 2 ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು ಅದರ ಆಡಳಿತಕ್ಕಾಗಿ ಸಚಿವಾಲಯ ಸಿಬ್ಬಂದಿ ನೆರವು ನೀಡುತ್ತಿದ್ದಾರೆ.

ಸೌಲಭ್ಯಗಳು

ಸ್ಥಳ

ಸಂಪರ್ಕ ವಿವರಗಳು
 • ಶ್ರೀಮತಿ. ಸೀಮಾ ಪಿ.ಎ.  
  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು
 •   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಅರಣ್ಯ ತರಬೇತಿ ಕೇಂದ್ರ, ಕುಶಾಲನಗರ
 •   acfkushal@gmail.com
 •   8276271223
 • ಶ್ರೀಮತಿ. ವಿನೀತಾ ಜಿ  
  ವಲಯ ಅರಣ್ಯಾಧಿಕಾರಿಗಳು
 •   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಅರಣ್ಯ ತರಬೇತಿ ಕೇಂದ್ರ, ಕುಶಾಲನಗರ
 •   acfkushal@gmail.com
 •   8276271223