ವನ್ಯಜೀವಿ ವಾಸಸ್ಥಳಗಳ ವಿಸ್ತಾರ ಕಡಿಮೆಯಾಗಿರುವುದು, ಭೂಮಿ ಬಳಕೆ ವಿಧಾನದಲ್ಲಿ ಬದಲಾವಣೆಗಳು, ಪರಿಣಾಮಕಾರಿ ಸಂರಕ್ಷಣಾ ಕ್ರಮಗಳ ಪರಿಣಾಮವಾಗಿ ವನ್ಯಜೀವಿ ಸಂಖ್ಯೆಯಲ್ಲಿ ಹೆಚ್ಚಳ ಮುಂತಾದ ವಿವಿಧ ಕಾರಣಗಳಿಂದಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಮನುಷ್ಯ-ಪ್ರಾಣಿ ಸಂಘರ್ಷ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮನುಷ್ಯ-ಪ್ರಾಣಿ ಸಂಘರ್ಷದ ಘಟನೆಗಳ ಪ್ರಮಾಣ ತಗ್ಗಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದಾಗ್ಯೂ, ಆಗಾಗ ಹಲವಾರು ಸಂಘರ್ಷದ ಪ್ರಕರಣಗಳು ವರದಿಯಾಗುತ್ತಿರುತ್ತವೆ. ವನ್ಯಜೀವಿಗಳಿಂದ ಬೆಳೆಹಾನಿಯಾಗಿದ್ದರೆ ಸಂತ್ರಸ್ತಗೊಂಡ ವ್ಯಕ್ತಿಗಳಿಗೆ ಸರ್ಕಾರ ನಷ್ಟ ಪರಿಹಾರ ಒದಗಿಸುತ್ತದೆ. ವನ್ಯಜೀವಿಗಳ ಕಾರಣದಿಂದ ಆದ ಬೆಳೆಹಾನಿಗೆ ಮಂಜೂರು ಮಾಡಿದ ನಷ್ಟ ಪರಿಹಾರವನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಉಪವಿಭಾಗ-2 (36) ರಲ್ಲಿ ವ್ಯಾಖ್ಯಾನಿಸಿರುವಂತೆ ವನ್ಯಜೀವಿಗಳು ವಿವಿಧ ಸರ್ಕಾರಿ ಆದೇಶಗಳ ಮೂಲಕ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ ಮತ್ತು ನಿರ್ಧರಿಸಲಾಗುತ್ತದೆ. ವನ್ಯಜೀವಿಗಳಿಂದ ಉಂಟಾದ ಬೆಳೆ ಹಾನಿಗಳಿಗೆ ನಷ್ಟ ಪರಿಹಾರ ಮಂಜೂರು ಮಾಡುವುದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳು ಈ ಕೆಳಗಿನಂತಿವೆ: 1. ಸಆ ಸಂ.: ಎಫ್‌ಇಇ 143 ಎಫ್‌ಡಬ್ಲ್ಯುಎಲ್‌ 2010 ದಿನಾಂಕ: 30-04-2011 2. ಸಆ ಸಂ.: ಎಫ್‌ಇಇ 109 ಎಫ್‌ಎಪಿ 2014 ದಿನಾಂಕ: 13-08-2014 3. ಸಆ ಸಂ.: ಎಫ್‌ಇಇ 130 ಎಫ್‌ಡಬ್ಲ್ಯುಎಲ್‌ 2016 ದಿನಾಂಕ: 30-04-2011


ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

 • ವನ್ಯಜೀವಿಗಳಿಂದ ಆಗುವ ಬೆಳೆಹಾನಿಗೆ ನಷ್ಟ ಪರಿಹಾರ ಪಾವತಿಗೆ ಸಂಬಂಧಿಸಿದ ಸರ್ಕಾರಿ ಆದೇಶಗಳು ಯಾವುವು?

  ಸರ್ಕಾರಿ ಆದೇಶ ಸಂಖ್ಯೆ ಎಫ್‌ಇಇ 143 ಎಫ್‌ಡಬ್ಲ್ಯುಎಲ್‌ 2010, ದಿನಾಂಕ 30-04-2011, ಸರ್ಕಾರಿ ಆದೇಶ ಸಂಖ್ಯೆ ಎಫ್‌ಇಇ 109 ಎಫ್‌ಎಪಿ 2014 ದಿನಾಂಕ 13-08-2014 ಮತ್ತು ಸರ್ಕಾರಿ ಆದೇಶ ಸಂಖ್ಯೆ ಎಫ್‌ಇಇ 130 ಎಫ್‌ಡಬ್ಲ್ಯುಎಲ್‌ 2016 ದಿನಾಂಕ 19-09-2016

 • ವನ್ಯಜೀವಿಗಳಿಂದ ಬೆಳೆಯಾನಿಯಾದರೆ ನಷ್ಟ ಪರಿಹಾರ ಪಡೆಯಲು ಯಾರು ಅರ್ಹರಾಗಿರುತ್ತಾರೆ?

  ಬೆಳೆ ಇದ್ದ ಜಮೀನು ಒತ್ತುವರಿ ಭೂಮಿಯಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ವನ್ಯಜೀವಿ/ಗಳು ಯಾರ ಬೆಳೆಯ ಮೇಲೆ ದಾಳಿ ಮಾಡಿವೆಯೋ ಆ ಭೂಮಿಯ ಮಾಲೀಕ/ ರೈತ/ ಅರ್ಜಿದಾರ ನಷ್ಟ ಪರಿಹಾರ ಪಡೆಯಲು ಅರ್ಹವಾಗಿರುತ್ತಾರೆ.

 • ವನ್ಯಜೀವಿಗಳಲ್ಲಿ ಯಾವುವು ಸೇರುತ್ತವೆ?

  ವನ್ಯಜೀವಿ ಎನ್ನುವ ಶಬ್ದವನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಉಪವಿಭಾಗ 2(36)ರಲ್ಲಿ ಒದಗಿಸಲಾಗಿರುವ ವ್ಯಾಖ್ಯಾನದ ಅನುಸಾರ ಅರ್ಥ ಮಾಡಿಕೊಳ್ಳಬೇಕು. ವ್ಯಾಖ್ಯಾನದ ಪ್ರಕಾರ, ‘ವನ್ಯಜೀವಿ’ ಅಂದರೆ ಅನುಸೂಚಿ I ರಿಂದ IV ರವರೆಗೆ ನಮೂದಿಸಲಾಗಿರುವ ಮತ್ತು ಅರಣ್ಯದಲ್ಲಿ ಕಂಡುಬರುವ ಯಾವುದೇ ಪ್ರಾಣಿ.

 • ಬೆಳೆಹಾನಿಯಾದರೆ ಎಷ್ಟು ನಷ್ಟ ಪರಿಹಾರವನ್ನು ಪಾವತಿಸಲಾಗುತ್ತದೆ?

  ಸರ್ಕಾರಿ ಆದೇಶ ಸಂಖ್ಯೆ: ಎಫ್‌ಇಇ 130 ಎಫ್‌ಡಬ್ಲ್ಯುಎಲ್‌ 2016 ದಿನಾಂಕ: 19-09-2016 ರಲ್ಲಿ ಹೇಳಲಾಗಿರುವ ನಷ್ಟಪರಿಹಾರ ದರಗಳ ಅನುಸಾರ, ಬೆಳೆ ಹಾನಿಗೆ ನಷ್ಟ ಪರಿಹಾರ ಪಾವತಿಸಲಾಗುತ್ತದೆ.

 • ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಯಾವುದಾದರೂ ನಿರ್ದಿಷ್ಟ ನಮೂನೆ ಇದೆಯೇ?

  ಇಲ್ಲ. ಅರ್ಜಿ ಸಲ್ಲಿಸಲು ಯಾವುದೇ ನಿರ್ದಿಷ್ಟ ನಮೂನೆ ಇಲ್ಲ. ಅದಾಗ್ಯೂ, ಅರ್ಜಿಯನ್ನು ಸ್ಫುಟವಾಗಿ ಬರೆದಿರಬೇಕು ಅಥವಾ ಬಿಳಿ ಹಾಳೆಯ ಮೇಲೆ ಟೈಪ್ ಮಾಡಿರಬೇಕು, ಹಾಗೂ ಕಾನೂನುಬದ್ಧ ಅರ್ಜಿದಾರನ ಸಹಿ ಅಥವಾ ಹೆಬ್ಬೆಟ್ಟು ಗುರುತನ್ನು ಹೊಂದಿರಬೇಕು.

 • ನಷ್ಟ ಪರಿಹಾರ ಕೋರಿ ಅರ್ಜಿಯನ್ನು ಯಾರಿಗೆ ಸಲ್ಲಿಸಬೇಕು?

  ಅರ್ಜಿಯನ್ನು ಸಂಬಂಧಪಟ್ಟ ಕಾನೂನುವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿಗೆ ಸಲ್ಲಿಸಬೇಕು.

 • ನಷ್ಟ ಪರಿಹಾರ ಕೋರಲು ಸಲ್ಲಿಸಬೇಕಾದ ದಾಖಲೆಗಳು ಯಾವುವು?

  ಎ. ಹಾನಿಗೀಡಾದ ಜಮೀನಿನ ಮಾಲೀಕತ್ವ ವಿವರಗಳು, ಸರ್ವೇ ನಂಬರ್‌ ಸೇರಿದಂತೆ ಪಹಣಿ ಪತ್ರ (ಆರ್‌ಟಿಸಿ) ಬಿ. ಆಧಾರ್ ಸಂಖ್ಯೆ ಸಿ. ಬೆಳೆಹಾನಿಗೆ ಸಂಬಂಧಿಸಿ ಕೃಷಿ ಇಲಾಖೆ ಜಾರಿ ಮಾಡಿದ ಪ್ರಮಾಣಪತ್ರ ಡಿ. ಹಾನಿಗೀಡಾದ ಬೆಳೆ/ ಘಟನೆ ನಡೆದ ಸ್ಥಳದ ಫೊಟೋಗಳು ಇ. ನಷ್ಟ ಪರಿಹಾರ ಪಾವತಿ ಮಾಡಬೇಕಿರುವ ಸಂತ್ರಸ್ತನ/ಭೂ ಮಾಲೀಕನ ಬ್ಯಾಂಕ್‌ ಖಾತೆ ವಿವರಗಳು.