ವೃತ್ತದ ಮುಖ್ಯಸ್ಥರು

ಶ್ರೀ. ಮಂಜುನಾಥ್ ಆರ್ ಚವಾಣ್ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ ವೃತ್ತ, ಆರನ್ಯ ಭವನ ಸಂಕೀರ್ಣ, ಧಾರವಾಡದ ಕೆಸಿ ಪಾರ್ಕ್ ಹತ್ತಿರ. ಪಿನ್ -580008
08362448501
cfdcdwd@yahoo.co.in

ವೃತ್ತದ ಬಗ್ಗೆ

ಧಾರವಾಡ ವೃತ್ತ, ಧಾರವಾಡ, ಗದಗ ಮತ್ತು ಹಾವೇರಿ ಈ ಮೂರು ಪ್ರಾದೇಶಿಕ ವಿಭಾಗಗಳನ್ನು ಒಳಗೊಂಡಿದೆ. ಈ ಹಿಂದೆ, ಒಂದು ಸ್ವತಂತ್ರ ವನ್ಯಜೀವಿ ಉಪ ವಿಭಾಗ ಇತ್ತು, ಅದು ರಾಣೆಬೆನ್ನೂರು ವನ್ಯಜೀವಿ ಉಪ ವಿಭಾಗ. 2018-19 ರಿಂದ, ಈ ಉಪ ವಿಭಾಗವನ್ನು ಹಾವೇರಿ ಅರಣ್ಯ ವಿಭಾಗದಲ್ಲಿ ಸೇರಿಸಲಾಗಿದೆ. ಇದರ ಜೊತೆಗೆ, ಧಾರವಾಡ ಸಾ.ಅ. ವಿಭಾಗ, ಗದಗ ಸಾ.ಅ. ವಿಭಾಗ ಮತ್ತು ಹಾವೇರಿ ಸಾ.ಅ. ವಿಭಾಗ ಈ ಮೂರು ಸಾಮಾಜಿಕ ಅರಣ್ಯೀಕರಣ ವಿಭಾಗಗಳು ಈ ವೃತ್ತದಲ್ಲಿವೆ. ಧಾರವಾಡ ವೃತ್ತದಲ್ಲಿರುವ ಕಾಡುಗಳು ಮೂಲತಃ ಒಣ ಎಲೆಯುದುರುವ, ಕುರುಚಲು ಮತ್ತು ಮುಳ್ಳುಪೊದೆ ಕಾಡು ವಿಧದವು. ಉತ್ತರ ಕನ್ನಡ ಜಿಲ್ಲೆಯ ಗಡಿಯೊಂದಿಗೆ ಸಂಪರ್ಕ ಹೊಂದಿರುವ ವೃತ್ತದ ಪಶ್ಚಿಮ ಭಾಗ ತೇಗದ ಮರಗಳನ್ನು ಹೊಂದಿರುವ ಒಣ ಎಲೆಯುದುರುವ ಕಾಡುಗಳನ್ನು ಹೊಂದಿದ್ದು, ಇವು ಸಾಕಷ್ಟು ಉತ್ತಮ ಸ್ಥಿತಿಯಲ್ಲಿವೆ. ಪೂರ್ವದ ಕಡೆ ಸಾಗಿದಂತೆ, ಅರಣ್ಯದ ಗುಣಮಟ್ಟ ಕುಸಿದು, ಕುರುಚಲು ಕಾಡಾಗಿ ಬದಲಾಗುತ್ತದೆ. ವೃತ್ತದ ಪೂರ್ವದ ತುತ್ತತುದಿ ಭಾಗಗಳಲ್ಲಿ, ಬಂಡೆಗಲ್ಲುಗಳ ನಡುವೆ ಮುಳ್ಳು ಪೊದೆ ಕಾಡುಗಳು ಕಂಡುಬರುತ್ತವೆ. ಗದಗ ಮತ್ತು ಹಾವೇರಿ ವಿಭಾಗದ ಒಣ ಎಲೆಯುದುರುವ ಕಾಡುಗಳ ಮಧ್ಯೆ, ಬಹುತೇಕ ಬಂಡೆಗಳು ಮತ್ತು ಬೆಟ್ಟದ ತುದಿಯಲ್ಲಿ ಹರ್ಡ್ವಿಕಿಯಾ ಮತ್ತು ಬೋಸ್‌ವೆಲ್ಲಿಯಾ ಅರಣ್ಯ ವಿಧಗಳೂ ಕೂಡ ಅಲ್ಲಲ್ಲಿ ಕಂಡುಬರುತ್ತವೆ.

ಧಾರವಾಡ ವೃತ್ತದ ನಕ್ಷೆ

ವಿಭಾಗಗಳು

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ