A- A A+
2023-24 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ ಮತ್ತು ಅರಣ್ಯ ವೀಕ್ಷಕರ ಸಾಮಾನ್ಯ ವರ್ಗಾವಣೆಗಾಗಿ ಅಧಿಸೂಚನೆ. ದಿನಾಂಕ:19-05-2023 2023-24 ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ, ಅರಣ್ಯ ವೀಕ್ಷಕರ ಕಂಟಿಂಜೆಂಟ್‌ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ. ದಿನಾಂಕ:19-05-2023 ದಿನಾಂಕ: 15-05-2023 ರಿಂದ ದಿನಾಂಕ: 18-05-2023 ರವೆರಗೆ ಜರುಗಿಸಲಾಗುತ್ತಿರುವ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಯ ಸಮಾಲೋಚನೆಯ ದೈನಂದಿನ ವರದಿಗಳು. ಪೂರಕ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD, dated: 02-05-2023ಕ್ಕೆ ತಿದ್ದುಪಡಿ. ಸಮಾಲೋಚನಾ ಆದ್ಯತಾ ಪಟ್ಟಿ (ದಿನಾಂಕ, ಸಮಯ ಮತ್ತು ಸ್ಥಳದ ವಿವರದೊಂದಿಗೆ) ಯ ಕುರಿತು ಅಧಿಸೂಚನೆ 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 15-05-2023 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 12-05-2023
ಈ ಯೋಜನೆಯಡಿ ಸಾರ್ವಜನಿಕರಿಗೆ, ರೈತರಿಗೆ, ಸಂಘ ಸಂಸ್ಥೆಗಳಿಗೆ, ರಿಯಾಯಿತಿ ದರದಲ್ಲಿ ವಿತರಣೆ ಮಾಡುವ ಸಲುವಾಗಿ ಆಯಾ ಪ್ರದೇಶಗಳಿಗೆ ಹೊಂದಿಕೊಳ್ಳುವ ಆಯ್ದ ಜಾತಿಯ 6" x 9" ಮತ್ತು 8" x 12" ಪಾಲಿತಿನ್ ಚೀಲಗಳಲ್ಲಿ ಸಸಿಗಳನ್ನು ಬೆಳೆಸಿ ವಿತರಿಸಲಾಗುತ್ತದೆ

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

  • ಸಾವಿಸಬೆ ಅಡಿಯಲ್ಲಿ ಸಸಿಗಳನ್ನು ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆ ಏನು

    ಸಸಿ ನೆಡಲು ಇಚ್ಛಿಸಿರುವ ವ್ಯಕ್ತಿ ಸಮೀಪದ ಅರಣ್ಯ ಇಲಾಖೆಯ ನರ್ಸರಿಗೆ ಭೇಟಿ ನೀಡಬಹುದು ಮತ್ತು ಈ ಕೆಳಗಿನ ದರವನ್ನು ಪಾವತಿಸಿ ತಮ್ಮ ಆಯ್ಕೆಯ ಸಸಿಗಳನ್ನು ಪಡೆದುಕೊಳ್ಳಬಹುದು: • 5”x8” ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 5/- • 6”x9” ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 7/- • 8”x12” ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 10/- • 10”x16” ಪಾಲಿಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 71/- • 14”x20” ಪಾಲಿಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 109/-

  • ಒಂದು ವೇಳೆ ಅರ್ಜಿ ಸಲ್ಲಿಸಿದ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ ಏನು ಮಾಡಬೇಕು

    ಒಂದು ವೇಳೆ ಅರ್ಜಿದಾರ ಕೇಳಿರುವ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ, ನರ್ಸರಿಯ ಸಂಬಂಧಿತ ಉಸ್ತುವಾರಿ ಅಥವಾ ಸಿಬ್ಬಂದಿಯಿಂದ ಅದನ್ನು ಸೂಚಿಸುವ ಲಿಖಿತ ಅನುಮೋದನೆಯನ್ನು ಪಡೆದುಕೊಳ್ಳಬೇಕು. ಲಿಖಿತ ಅನುಮೋದನೆಯಲ್ಲಿ ಸಲ್ಲಿಸುವ ಮೂಲಕ, ಸಸಿಗಳು ಲಭ್ಯವಿರುವ ವಲಯ ಅಥವಾ ವಿಭಾಗದ ಇನ್ನೊಂದು ನರ್ಸರಿಯಿಂದ ಸಸಿಗಳನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಅರ್ಜಿದಾರ ಸಸಿಗಳನ್ನು ಪಡೆದುಕೊಳ್ಳಲು ವಿಫಲನಾದರೆ, ಅರಣ್ಯ ಇಲಾಖೆ ಆ ವರ್ಷ ಸಸಿಗಳನ್ನು ಬೆಳೆಸುತ್ತದೆ ಮತ್ತು ಮುಂದಿನ ಮಳೆಗಾಲಕ್ಕೆ ಸಸಿಗಳನ್ನು ಒದಗಿಸಲು ವ್ಯವಸ್ಥೆ ಮಾಡುತ್ತದೆ.

  • ನರ್ಸರಿಗಳಲ್ಲಿ ಸಸಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಹೇಗೆ

    aranya.gov.in ವೆಬ್‌ಸೈಟ್‌ನ ‘ಸೇವೆಗಳು’ ಮೆನುವಿನ ಅಡಿಯಲ್ಲಿರುವ ‘ಸಾರ್ವಜನಿಕ ಸೇವೆ’ ಉಪಮೆನುವಿನ “ಇ-ನರ್ಸರಿ”ಯಲ್ಲಿ ವಿವಿಧ ಪ್ರಭೇದಗಳ ಸಸಿಗಳ ಲಭ್ಯತೆಗೆ ಸಂಬಂಧಿಸಿದ ವಿವರಗಳನ್ನು ಒದಗಿಸಲಾಗಿದೆ.