ಪರಿವೇಶ್ ಒಂದು ವೆಬ್‌ ಆಧರಿತ, ಪಾತ್ರ ಆಧರಿತ ಕೆಲಸದ ಪ್ರಗತಿಯ ಅಪ್ಲಿಕೇಶನ್ ಆಗಿದ್ದು, ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಾಧಿಕಾರಗಳಿಂದ ಪರಿಸರ, ಅರಣ್ಯ, ವನ್ಯಜೀವಿ ಮತ್ತು ಸಿಆರ್‌ಝಡ್ ಅನುಮತಿಗಳನ್ನು ಪಡೆಯಲು ಪ್ರಸ್ತಾವನೆ ಸಲ್ಲಿಸುವವರು ಆನ್‌ಲೈನ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲು ಮತ್ತು ಅದರ ಪ್ರಗತಿಯನ್ನು ಗಮನಿಸಲು ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಸ್ತಾವನೆಗಳ ಸಂಪೂರ್ಣ ಜಾಡು ಅನುಸರಿಸುವಿಕೆ (ಟ್ರ್ಯಾಕಿಂಗ್‌) ಅನ್ನು ಯಾಂತ್ರೀಕೃತಗೊಳಿಸುತ್ತದೆ, ಹಾಗೂ ಇದರಲ್ಲಿ ಹೊಸ ಪ್ರಸ್ತಾವನೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವಿಕೆ, ಪ್ರಸ್ತಾವನೆಗಳ ವಿವರಗಳನ್ನು ತಿದ್ದುಪಡಿ ಮಾಡುವುದು/ನವೀಕರಿಸುವುದು ಮತ್ತು ಕೆಲಸದ ಪ್ರಗತಿಯ ಪ್ರತಿ ಹಂತದಲ್ಲಿ ಪ್ರಸ್ತಾವನೆಗಳ ಸ್ಥಿತಿಯನ್ನು ಪ್ರದರ್ಶಿಸುವುದು ಸೇರಿರುತ್ತವೆ.


ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ >>

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

 • ಪರಿವೇಶ್ ಎಂದರೆ ಏನು

  ಪರಿವೇಶ್ ಎಂದರೆ ಪ್ರೊ ಆಕ್ಟಿವ್ ಆ್ಯಂಡ್ ರೆಸ್ಪಾನ್ಸಿವ್‌ ಫೆಸಿಲಿಟೇಷನ್‌ ಬೈ ಇಂಟರಾಕ್ಟಿವ್‌, ವರ್ಚುವಸ್ ಆ್ಯಂಡ್‌ ಎನ್ವಿರಾನ್‌ಮೆಂಟಲ್‌ ಸಿಂಗಲ್‌ವಿಂಡೋ ಹಬ್‌. (ಪರಸ್ಪರ ಸಂವಹನದ, ಗುಣಾತ್ಮಕ ಮತ್ತು ಪರಿಸರ ಏಕಗವಾಕ್ಷ ಹಬ್‌ ಮೂಲಕ ಕ್ರಿಯಾಶೀಲ ಮತ್ತು ಪ್ರತಿಕ್ರಿಯಾಶೀಲ ಸೌಲಭ್ಯ)

 • ಪರಿವೇಶ್‌ದ ವ್ಯಾಪ್ತಿ ಏನು

  ಪರಿಸರ ಅನುಮತಿ ಮತ್ತು ಅರಣ್ಯ ಅನುಮತಿಗಳನ್ನು ಮೌಲ್ಯಮಾಪನ ಮತ್ತು ಪಡೆದುಕೊಳ್ಳುವುದಕ್ಕೆ ಪರಿವೇಶ್‌ ಏಕಗವಾಕ್ಷ ವ್ಯವಸ್ಥೆಯಾಗಿದೆ.

 • ಪರಿವೇಶ್‌ದ ಅನುಕೂಲಗಳು ಏನು

  ಈ ವಿನೂತನ ಕ್ರಮ ಸಚಿವಾಲಯದಲ್ಲಿ ಮೌಲ್ಯಮಾಪನ ಮತ್ತು ಪರಿಸರ ಅನುಮತಿ ನೀಡುವಿಕೆಯ ಒಟ್ಟಾರೆ ಪ್ರಕ್ರಿಯೆಯನ್ನು ಭಾರೀ ಪ್ರಮಾಣದಲ್ಲಿ ಸುಧಾರಿಸುತ್ತದೆ. ಇದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಐಎನ್‌ಜಿ ಅನುಮತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ. ಯೋಜನೆಯ ಪ್ರತಿಪಾದಕರು ತಮ್ಮ ಅರ್ಜಿಯ ಸ್ವೀಕೃತಿಯ ಬಗ್ಗೆ ಮೇಲ್‌ನಲ್ಲಿ ದೃಢೀಕರಣ ಸ್ವೀಕರಿಸುತ್ತಾರೆ ಅಥವಾ ಅರ್ಜಿಗೆ ಸಂಬಂಧಿಸಿ ಎತ್ತಲಾಗಿರುವ ಆಕ್ಷೇಪಗಳನ್ನು ಆನ್‌ಲೈನ್‌ನಲ್ಲಿ ಪಡೆಯುತ್ತಾರೆ ಮತ್ತು ಅಂಥ ಆಕ್ಷೇಪಗಳಿಗೆ ಆನ್‌ಲೈನ್‌ನಲ್ಲೇ ಉತ್ತರಿಸಬಹುದು. ಯೋಜನಾ ಪ್ರತಿಪಾದಕರು ವಿವಿಧ ಹಂತಗಳಲ್ಲಿ ತಮ್ಮ ಅರ್ಜಿಯ ಮುಂದುವರಿಕೆಯನ್ನು ಟ್ರ್ಯಾಕ್‌ ಕೂಡ ಮಾಡಬಹುದು ಮತ್ತು ತಮ್ಮ ಯೋಜನಾ ಪ್ರಸ್ತಾವನೆಯ ಬಗ್ಗೆ ತಜ್ಞ ಮೌಲ್ಯಮಾಪನ ಸಮಿತಿಯ ಅಭಿಪ್ರಾಯಗಳನ್ನು ಕೂಡ ನೋಡಬಹುದು. ಈ ಆನ್‌ಲೈನ್‌ ವ್ಯವಸ್ಥೆ ಹಿಂದಿನ ಪರಿಸರ ಪರಿಣಾಮ ಮೌಲ್ಯಮಾಪನ ವರದಿಗಳಿಗೂ ಪ್ರವೇಶ ಒದಗಿಸುತ್ತದೆ, ಇದು ಮೌಲ್ಯಯುತ ಮಾಹಿತಿ ಕಣಜವಾಗಿರುತ್ತದೆ.

 • ಪರಿಸರ ಪರಿಣಾಮ ಮೌಲ್ಯಮಾಪನ ಎಂದರೇನು

  ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ಎನ್ನುವುದು, ಅಭಿವೃದ್ಧಿ ಪ್ರಕ್ರಿಯೆಯ ಜೊತೆ ಪರಿಸರ ಆತಂಕಗಳನ್ನು ಯೋಜನೆಯ ಆರಂಭಿಕ ಹಂತದಲ್ಲೇ ಏಕೀಕೃತಗೊಳಿಸುವ ಮತ್ತು ಅಗತ್ಯ ಹಾನಿ ತಡೆ ಕ್ರಮಗಳನ್ನು ಶಿಫಾರಸು ಮಾಡುವ ಯೋಜನಾ ಸಾಧನವಾಗಿದೆ. ಇಐಎ ಎಂದರೆ ಮೂಲತಃ ಯೋಜನೆಯಿಂದ ಉಂಟಾಗಬಹುದಾದ ಪರಿಸರದ ಮೇಲಿನ ಪ್ರತಿಕೂಲ ಪರಿಣಾಮಗಳ ಮೌಲ್ಯಮಾಪನ.

 • ಇಐಎ ಅಧಿಸೂಚನೆಯನ್ನು ನೀಡಲು ಯಾರು ಸಂಬಂಧಿತ ಅಧಿಕಾರಿಯಾಗಿದ್ದಾರೆ ಮತ್ತು ಕಾಯ್ದೆಯ ನಿಯಮಗಳ ಜೊತೆಗೆ ಯಾವ ಕಾಯ್ದೆಯಡಿ ಇಐಎ ಅಧಿಸೂಚನೆ ಹೊರಡಿಸಲಾಗುತ್ತದೆ

  ಪರಿಸರ (ಸಂರಕ್ಷಣಾ) ಕಾಯ್ದೆ, 1986ರಡಿ ಇಐಎ ಅಧಿಸೂಚನೆಯನ್ನು ಜಾರಿ ಮಾಡುವುದಕ್ಕೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನೋಡಲ್‌ ಸಚಿವಾಲಯವಾಗಿರುತ್ತದೆ. ಪರಿಸರ ಸಂರಕ್ಷಣೆ ಮತ್ತು ಗುಣಮಟ್ಟ ಸುಧಾರಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟುವ ಮತ್ತು ನಿಯಂತ್ರಿಸುವ ಉದ್ದೇಶಕ್ಕಾಗಿ ಅಗತ್ಯ ಎಂದು ಕಂಡುಬರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅರಣ್ಯ (ಸಂರಕ್ಷಣಾ) ಕಾಯ್ದೆ 1986 (ಇಎಪಿ) ಇದರ ವಿಭಾಗ 3 ಅಧಿಕಾರ ನೀಡುತ್ತದೆ. ಈ ಉದ್ದೇಶ ಸಾಧಿಸಲು, ಯಾವುದೇ ಕೈಗಾರಿಕೆಗಳು, ಕಾರ್ಯಾಚರಣೆಗಳು ಅಥವಾ ಪ್ರಕ್ರಿಯೆಗಳು ಅಥವಾ ಕೈಗಾರಿಕೆಗಳು, ಕಾರ್ಯಾಚರಣೆಗಳು ಮತ್ತು ಪ್ರಕ್ರಿಯೆಗಳ ವರ್ಗಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಬಹುದು ಅಥವಾ ಕೆಲವು ಸುರಕ್ಷತಾ ಕ್ರಮಗಳಿಗೆ ಒಳಪಟ್ಟು ನಡೆಸಲು ಅನುಮತಿ ನೀಡಬಹುದು.

 • ಮೊದಲ ಇಐಎ ಅಧಿಸೂಚನೆ ಜಾರಿಯಾಗಿದ್ದು ಯಾವಾಗ

  ಇಐಎ ಅಧಿಸೂಚನೆ ಮೊದಲ ಬಾರಿಗೆ 27ನೇ ಜನವರಿ, 1994ರಂದು ಜಾರಿಗೆ ಬಂತು. ಇದರಡಿ ಪೂರ್ವಾನುಮತಿ ಅಗತ್ಯವಿರುವ 29 ವರ್ಗಗಳ ಯೋಜನೆಗಳು/ ಪ್ರಕ್ರಿಯೆಗಳನ್ನು ಪಟ್ಟಿ ಮಾಡಲಾಗಿದೆ. ಇದನ್ನು ಆನಂತರ 32 ವರ್ಗಗಳಿಗೆ ಅನ್ವಯಿಸಲಾಯಿತು.

 • ಇಐಎ ಅಧಿಸೂಚನೆ, 1994ಕ್ಕೆ ಅಳವಡಿಸಿಕೊಳ್ಳಲಾದ ಮಾನದಂಡ ಏನು

  ಹೂಡಿಕೆ ಮಾನದಂಡ ಆಧರಿಸಿ (ಮೂಲತಃ ಇದು ರೂ. 50 ಕೋಟಿ ಆಗಿತ್ತು, ನಂತರ ಇದನ್ನು 100 ಕೋಟಿಗೆ ಹೆಚ್ಚಿಸಲಾಯಿತು) ಯೋಜನೆಗಳು ಇಐಎ ಅಧಿಸೂಚನೆ, 1994ರ ಅನ್ವಯ ಪರಿಸರ ಅನುಮತಿ ಪಡೆದುಕೊಳ್ಳಬೇಕಿರುತ್ತದೆ, ಆದರೆ ಗಣಿಗಾರಿಕೆ ಯೋಜನೆಗಳು ಇದಕ್ಕೆ ಹೊರತಾಗಿರುತ್ತವೆ, ಗಣಿಗಾರಿಕೆಗೆ ಅಧಿಸೂಚನೆ ಅನ್ವಯವಾಗುವುದಕ್ಕೆ ಗುತ್ತಿಗೆ ಪಡೆದ ಪ್ರದೇಶ ಮತ್ತು ಖನಿಜದ ವಿಧ ಮಾನದಂಡವಾಗಿರುತ್ತದೆ.