ಅರಣ್ಯ ವಲಯದ ಬದಲಾಗುತ್ತಿರುವ ಪರಿಕಲ್ಪನೆಗಳು ಮತ್ತು ಗ್ರಹಿಕೆಗಳ ಸವಾಲುಗಳನ್ನು ಎದುರಿಸಲು ಉನ್ನತ ಮಟ್ಟದ ಕೇಂದ್ರೀಕೃತ ತರಬೇತಿ ಸಂಸ್ಥೆ ಸ್ಥಾಪಿಸುವ ಅಗತ್ಯವನ್ನು ಮನಗಾಣಲಾಯಿತು. ಆದ್ದರಿಂದ 1992ರಲ್ಲಿ ವಿಶ್ವ ಬ್ಯಾಂಕ್ ನೆರವಿನ ಅರಣ್ಯೀಕರಣ ಯೋಜನೆಯಡಿ ಧಾರವಾಡದ ಗುಂಗರಗಟ್ಟಿ ಸಮೀಪ ಕರ್ನಾಟಕ ರಾಜ್ಯ ಅರಣ್ಯ ತರಬೇತಿ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತು. ಇದು ಧಾರವಾಡ ನಗರದಿಂದ 12 ಕಿ.ಮೀ. ದೂರದಲ್ಲಿದೆ ಮತ್ತು ಇದು 42.16 ಹೆಕ್ಟೇರ್ ವಿಸ್ತಾರ ಪ್ರದೇಶದಲ್ಲಿ ವ್ಯಾಪಿಸಿದೆ. ಮುಖ್ಯ ಕಟ್ಟಡ ಮತ್ತು ಇತರ ಮೂಲ ಸೌಕರ್ಯಗಳನ್ನು 1996ರಲ್ಲಿ ಪೂರ್ಣಗೊಳಿಸಲಾಯಿತು ಮತ್ತು ಅದೇ ವರ್ಷ ಸೆಪ್ಟೆಂಬರ್ ನಿಂದ ತರಬೇತಿಯನ್ನು ಆರಂಭಿಸಲಾಯಿತು. ಗ್ರಾಮ ಅರಣ್ಯ ಸಮಿತಿಗಳು, ಕರ್ತವ್ಯನಿರತ ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳಿಗೆ ತರಬೇತಿ ನೀಡುವ ಉದ್ದೇಶದೊಂದಿಗೆ ಆರಂಭವಾದ ಈ ಸಂಸ್ಥೆ, ಇಂದು ತರಬೇತಿ ಘಟಕದ ಪ್ರಧಾನ ಕಚೇರಿಯಾಗಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಈ ತರಬೇತಿ ಸಂಸ್ಥೆಯನ್ನು 2015-16ರಲ್ಲಿ ಉನ್ನತೀಕರಿಸಲಾಯಿತು ಮತ್ತು ಕರ್ನಾಟಕ ಅರಣ್ಯ ಅಕಾಡೆಮಿ ಎಂದು ಮರುನಾಮಕರಣ ಮಾಡಲಾಯಿತು ಹಾಗೂ ಡೆಹ್ರಾಡೂನ್ ನ ಅರಣ್ಯ ಶಿಕ್ಷಣ ನಿರ್ದೇಶಕರ ನಿರ್ದೇಶನದ ಮೇರೆಗೆ ವಲಯ ಅರಣ್ಯ ಅಧಿಕಾರಿಗಳ ನೇರ ನೇಮಕಾತಿಗಾಗಿ 18 ತಿಂಗಳುಗಳ ನೇಮಕಾತಿ ತರಬೇತಿಯನ್ನು ಆರಂಭಿಸಲಾಯಿತು. 1ನೇ ಬ್ಯಾಚ್ ನ ವಲಯ ಅರಣ್ಯ ಅಧಿಕಾರಿಗಳ ತರಬೇತಿ ಕೋರ್ಸ್ 21.03.2016 ರಂದು ಆರಂಭವಾಯಿತು. ಕ.ರಾ.ಅ.ಅ.ಯ ನೇತೃತ್ವವನ್ನು 2 ಸ.ಅ.ಸಂ., 4 ವಲಯ ಅರಣ್ಯ ಸಂರಕ್ಷಣಾಧಿಕರು, 3 ಉ.ವ.ಅ.ಸಂ., 2 ಅರಣ್ಯ ರಕ್ಷಕರು, 1 ಅರಣ್ಯ ವೀಕ್ಷಕರು ಮತ್ತು ಆಡಳಿತಾತ್ಮಕವಾಗಿ ಮಂಜೂರು ಮಾಡಿದ ಸಚಿವಾಲಯ ಸಿಬ್ಬಂದಿ ಹುದ್ದೆಗಳ ಜೊತೆಯಲ್ಲಿ ಅ.ಪ್ರ.ಮು.ಅ.ಸಂ. ಮತ್ತು ನಿರ್ದೇಶಕರು, 1 ಉ.ಅ.ಸಂ. ಮತ್ತು ಜಂಟಿ ನಿರ್ದೇಶಕರು, 1 ಉ.ಅ.ಸಂ. ಮತ್ತು ಅ.ಪ್ರ.ಮು.ಅ.ಸಂ. ಇವರಿಗೆ ತಾಂತ್ರಿಕ ಸಹಾಯಕರು ವಹಿಸಿರುತ್ತಾರೆ. ಈ ಅಕಾಡೆಮಿ 5 ತರಗತಿ ಕೋಣೆಗಳೊಂದಿಗೆ ಮುಖ್ಯ ಕಟ್ಟಡ ಮತ್ತು ಎರಡು ಕಂಪ್ಯೂಟರ್ ಲ್ಯಾಬೊರೇಟರಿಗಳಿದ್ದು ಉಪನ್ಯಾಸ ತರಗತಿಗಳನ್ನು ನಡೆಸಲು ಎಲ್ಲ ಆಧುನಿಕ ಶಿಕ್ಷಣ ಸಲಕರಣೆಗಳೊಂದಿಗೆ ಆಧುನಿಕಗೊಳಿಸಲಾಗಿದೆ.ವಲಯ ಅಧಿಕಾರಿಗಳ ವಾಸ್ತವ್ಯಕ್ಕಾಗಿ ಪ್ರತ್ಯೇಕ ಕೃಷ್ಣಾ (ಪುರುಷರಿಗೆ) ಹಾಸ್ಟೆಲ್ ಮತ್ತು ಕಾವೇರಿ (ಮಹಿಳೆಯರಿಗೆ) ಹಾಸ್ಟೆಲ್ ಇದೆ. ಕರ್ತವ್ಯ ನಿರತ ಅಧಿಕಾರಿಗಳಿಗೆ ಮರುಮನನ ಕೋರ್ಸ್ ಗಳನ್ನು ನಡೆಸಲು 16 ಎಕ್ಸಿಕ್ಯೂಟಿವ್ ಹಾಸ್ಟೆಲ್ ಗಳಿವೆ. ಇಲ್ಲಿ 24 ಡಾರ್ಮಿಟರಿಗಳು ಮತ್ತು 8 ಬ್ಯಾರಕ್ ಗಳಿವೆ. ಇದರೊಂದಿಗೆ, 11 ಸಿಬ್ಬಂದಿ ವಸತಿಗೃಹಗಳಿವೆ. 04 ಮೆಸ್ ಹಾಲ್ ಗಳಿದ್ದು, ಇದರಲ್ಲಿ ಎರಡು ವಲಯ ಅರಣ್ಯ ಅಧಿಕಾರಿಗಳು ಮತ್ತು ಒಂದು ಉಪ ವಲಯ ಅರಣ್ಯ ಅಧಿಕಾರಿಗಳು ಕಮ್ ಮೋಜಣಿದಾರರಿಗೆ ಮರುಮನನ ಕೋರ್ಸ್ ತರಬೇತಿಗಾಗಿ ಇದೆ. ಉತ್ತಮವಾಗಿ ಅಭಿವೃದ್ಧಿಪಡಿಸಿದ ಕ್ರೀಡಾ ಮತ್ತು ಪರೇಡ್ ಗ್ರೌಂಡ್‌ಗಳು ಹಾಗೂ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಟೆನ್ನಿಸ್, ವಾಲಿಬಾಲ್, ಫುಟ್ಬಾಲ್ ಮುಂತಾದ ಆಟಗಳಿಗೆ ಸೌಲಭ್ಯಗಳಿವೆ ಮತ್ತು ಈಗ ಇಲ್ಲಿ ಜಿಮ್ ಮತ್ತು ಈಜುಕೊಳಗಳಿವೆ. ಕ.ರಾ.ಅ.ಅ. ಈವರೆಗೆ 135 ವಲಯ ಅರಣ್ಯ ಅಧಿಕಾರಿಗಳ 3 ಬ್ಯಾಚ್ ಗಳು, 860 ಪರೀಕ್ಷಾರ್ಥಿಗಳು ಇದ್ದ ಉಪವಲಯ ಅರಣ್ಯ ಅಧಿಕಾರಿಗಳ 8 ಬ್ಯಾಚ್ ಗಳು, 680 ಪರೀಕ್ಷಾರ್ಥಿಗಳು ಇದ್ದ ಅರಣ್ಯ ರಕ್ಷಕರ 7 ಬ್ಯಾಚ್ ಗಳು ಮತ್ತು 54 ಪರೀಕ್ಷಾರ್ಥಿಗಳು ಇದ್ದ ಅರಣ್ಯ ವೀಕ್ಷಕರ 1 ಬ್ಯಾಚ್ ಗೆ ಈವರೆಗೆ ತರಬೇತಿ ನೀಡಿದೆ. ಅರಣ್ಯ ಕಾನೂನು, ಬೆಂಕಿ ನಿರ್ವಹಣೆ, ಮಾನವ-ವನ್ಯಜೀವಿ ಸಂಘರ್ಷ, ಒಣ ವಲಯ ಅರಣ್ಯೀಕರಣ, ಎಂ.ನ.ರೇ.ಗಾ., ಆರ್.ಟಿ.ಐ., ಕೆ.ಸಿ.ಎಸ್.ಆರ್.‌ ನಂಥ ಹಲವು ವಿಷಯಗಳಲ್ಲಿ ಕರ್ತವ್ಯ ನಿರತ ಅಧಿಕಾರಿಗಳು ಹಾಗೂ ಸಚಿವಾಲಯ ಸಿಬ್ಬಂದಿಗಳಿಗೆ ಮರುಮನನ ತರಬೇತಿ ಕಾರ್ಯಕ್ರಮಗಳನ್ನು ಕೂಡ ಅಕಾಡೆಮಿ ನಡೆಸಿದೆ. ಪ್ರಸ್ತುತ 90 ಪರೀಕ್ಷಾರ್ಥಿಗಳಿರುವ 2 ವ.ಅ.ಅ. ಬ್ಯಾಚ್ ಗಳು ತರಬೇತಿ ಅಕಾಡೆಮಿಯಲ್ಲಿ ನೇಮಕಾತಿ ತರಬೇತಿ ನಡೆಸಲಾಗುತ್ತಿದೆ. ಪರೀಕ್ಷಾರ್ಥಿಗಳು ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಮಣಿಪುರಗಳಿಂದ ಬರುತ್ತಾರೆ. ಇವುಗಳಲ್ಲದೆ, 100 ಪರೀಕ್ಷಾರ್ಥಿಗಳನ್ನು ಒಳಗೊಂಡ ಉಪ ವ.ಅ. ಕಮ್ ಮೋಜಣಿದಾರರ 9ನೇ ಬ್ಯಾಚ್ ಮತ್ತು 45 ಪರೀಕ್ಷಾರ್ಥಿಗಳನ್ನು ಒಳಗೊಂಡ ಲಕ್ಷದ್ವೀಪದ ಫಾರೆಸ್ಟರ್ ಗಳು ಮತ್ತು ಅರಣ್ಯ ರಕ್ಷಕರು ಅಕಾಡೆಮಿಯಲ್ಲಿ ನೇಮಕಾತಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೀಗೆ ಪ್ರಸ್ತುತ 235 ಪರೀಕ್ಷಾರ್ಥಿಗಳು ಕ.ರಾ.ಅ.ಅ. ಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಸೌಲಭ್ಯಗಳು

ಸ್ಥಳ

ಸಂಪರ್ಕ ವಿವರಗಳು
 • ಶ್ರೀ. ವಿಜಯ್ ಲಾಲ್ ಮೀನಾ  
  ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
 •   ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, (ಮಾನವ ಸಂಪನ್ಮೂಲ ಅಭಿವೃದ್ಧಿ) ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಗುಂಗರಗಟ್ಟಿ,ಧಾರವಾಡ
 •   ccftraining@gmail.com
 •   8362486675
 • ಶ್ರೀಮತಿ. ಸೋನಾಲ್‌ ವ್ರಿಸ್ನಿ  
  ಉಪ ಅರಣ್ಯ ಸಂರಕ್ಷಣಾಧಿಕಾರಿಗಳು
 •   ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಗುಂಗರಘಟ್ಟಿ, ಧಾರವಾಡ
 •   dcfgugdwd@gmail.com
 •   08362486674
 • ಶ್ರೀ. ಸಂಜೀವ್ ಕುಮಾರ್ ಎಂ. ಅಗಸರ್  
  ವಲಯ ಅರಣ್ಯಾಧಿಕಾರಿಗಳು
 •   ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಗುಂಗರಘಟ್ಟಿ, ಧಾರವಾಡ
 •   sanjeevagasar@gmail.com
 •   7892877537
 • ಶ್ರೀ. ಚಂದ್ರಕಾಂತ್‌ ಡಿ. ಗೊಂದಲಿ  
  ವಲಯ ಅರಣ್ಯಾಧಿಕಾರಿಗಳು
 •   ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಗುಂಗರಘಟ್ಟಿ, ಧಾರವಾಡ
 •   gondhali123@gmail.com
 •   9449736618
 • ಶ್ರೀ. ಸಿದ್ದಲಿಂಗಪ್ಪ ಬಿ. ಪುಜಾರ್  
  ವಲಯ ಅರಣ್ಯಾಧಿಕಾರಿಗಳು
 •   ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಗುಂಗರಘಟ್ಟಿ, ಧಾರವಾಡ
 •   siddubpujar20@gmail.com
 •   7022116808
 • ಶ್ರೀ. ಲಕ್ಷ್ಮಣ ಪ. ಕಟ್ಟಿಮನಿ  
  ಉಪ ವಲಯ ಅರಣ್ಯಾಧಿಕಾರಿಗಳು
 •   ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಗುಂಗರಘಟ್ಟಿ, ಧಾರವಾಡ
 •   dcfgugdwd@gmail.com
 •   9482688284
 • ಶ್ರೀ. ಗಿರಿಧರ್ ಎನ್ ಅಗರ್ವಾಲೆ  
  ಅರಣ್ಯ ರಕ್ಷಕರು
 •   ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, (ಮಾನವ ಸಂಪನ್ಮೂಲ ಅಭಿವೃದ್ಧಿ) ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಗುಂಗರಗಟ್ಟಿ,ಧಾರವಾಡ
 •   ccftraining@gmail.com
 •   8362486675