A- A A+
ವನ್ಯಜೀವಿ ಸಾಮಾಗ್ರಿಗಳ ಆದ್ಯರ್ಪಣೆ- ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿರಿ
ಸಮುದಾಯ ಮೀಸಲು ಪ್ರದೇಶಗಳು

ರಾಜ್ಯಸರ್ಕಾರದಒಡೆತನದಯಾವುದೇಪ್ರದೇಶ, ವಿಶೇಷವಾಗಿ ರಾಷ್ಟ್ರೀಯ ಉದ್ಯಾನವನಗಳು ಅಥವಾ ಅಭಯಾರಣ್ಯಗಳ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಒಂದು ಸಂರಕ್ಷಿತಪ್ರದೇಶವನ್ನು ಇನ್ನೊಂದು ಸಂರಕ್ಷಿತಪ್ರದೇಶಕ್ಕೆ ಸಂಪರ್ಕಿಸುವಪ್ರದೇಶಗಳನ್ನು ಸರ್ಕಾರವು ಸ್ಥಳೀಯ ಸಮುದಾಯಗಳೊಂದಿಗೆ ಸಮಾಲೋಚಿಸಿ ಅಂತಹ ಪ್ರದೇಶಗಳಭೂಪ್ರದೇಶ/ಭೂದೃಶ್ಯಗಳು, ಕಡಲತಡಿಗಳು, ಸಸ್ಯಸಂಕುಲ, ಪ್ರಾಣಿಸಂಕುಲ ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಆ ಪ್ರದೇಶಗಳನ್ನು ಸಂರಕ್ಷಣಾ ಮೀಸಲು ಪ್ರದೇಶವೆಂದು ವನ್ಯಜೀವಿ (ಸಂರಕ್ಷಣಾಕಾಯ್ದೆ ೧೯೭೨ ರ ಕಲಂ ೩೬ ಬಿಅಡಿ ಅಧಿಸೂಚಿಸಬಹುದಾಗಿರುತ್ತದೆ. ಸದರಿ ಸಂರಕ್ಷಣಾ ಮೀಸಲುಗಳ ನಿರ್ವಹಣೆಯನ್ನು ವನ್ಯಜೀವಿ ಸಂರಕ್ಷಣಾಕಾಯ್ದೆ ೧೯೭೨ ರ ಕಲಂ ೩೬ ಬಿ ರ ಪ್ರಕಾರ ನಿರ್ವಹಣೆ ಮಾಡಲಾಗುತ್ತದೆ.

ನಮ್ಮ ಸಮುದಾಯ ಮೀಸಲು ಪ್ರದೇಶಗಳನ್ನು ಅನ್ವೇಷಿಸಿ

ಪರಿಚಯ
ಸ್ಥಳ ಮತ್ತು ವಿಸ್ತಾರ
ಮಹತ್ವ
ಭೂದೃಶ್ಯ
ಕೊಕ್ಕರೆ ಬೆಳ್ಳೂರು ಸಮುದಾಯ ಮೀಸಲು ಪ್ರದೇಶ

ಕೊಕ್ಕರೆ ಬೆಳ್ಳೂರು ಕರ್ನಾಟಕದ ಕಡಿಮೆ ಪ್ರಚಾರ ಪಡೆದಿರುವ ಸ್ಥಳಗಳಲ್ಲಿ ಒಂದಾಗಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿದೆ.ಇದು ಕರ್ನಾಟಕದ ಏಕೈಕ ಕೊಕ್ಕರೆಧಾಮ.ಈ ಪಕ್ಷಿ ವಾಸಸ್ಥಳವನ್ನು ಪಕ್ಷಿ ಧಾಮ ಎಂದು ಘೋಷಿಸದಿದ್ದರೂ ಸಹ, ಇದು ಪಕ್ಷಿ ವೀಕ್ಷಕರು, ಮಾಧ್ಯಮ ಮತ್ತು ಸಂದರ್ಶಕರ ಗಮನ ಸೆಳೆಯಿತು.ಈ ವಾಸಸ್ಥಳದ ಬಗ್ಗೆ ತಿಳಿದು ಬಂದಿರುವ ಒಂದಿಷ್ಟು ಮಾಹಿತಿ, ಕೇವಲ ಹೊಸ ಪ್ರಾಥಮಿಕ ಸಂಶೋಧನಾ ಲೇಖನಗಳು (ನಗುಲು ಮತ್ತು ರಾವ್‌, 1982, ನೇಗಿನಹಾಳ 1986, ಶ್ರೀಧರ 1992) ಮತ್ತು ಕೆಲವು ಜನಪ್ರಿಯ ವಾರ್ತಾಪತ್ರಿಕೆ ಮತ್ತು ಪತ್ರಿಕೆಗಳಲ್ಲಿನ ಲೇಖನಗಳಿಂದ ತಿಳಿದುಬಂದಿದೆ.ಗೂಡು ಕಟ್ಟುವ ಚಟುವಟಿಕೆ ಇರುವ ಮರಗಳ ಮಾಲೀಕರಿಗೆ ಪ್ರತಿ ವರ್ಷ ಅರಣ್ಯ ಇಲಾಖೆ (ವನ್ಯಜೀವಿ ಘಟಕ) ಪ್ರೋತ್ಸಾಹ ಧನವನ್ನು ನೀಡುತ್ತಿದೆ.ಈ ಮರಗಳಿಗೆ ಮೇಲುಕೋಟೆಯ ಮೇಲುಕೋಟೆ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿಗಳು ಸಂಖ್ಯೆ ನಮೂದಿಸುತ್ತಾರೆ ಮತ್ತು ನಿಗಾ ಇಡುತ್ತಾರೆ.ಕೊಕ್ಕರೆ ಬೆಳ್ಳೂರು ದೇಶದ ಅತಿ ಹಳೆಯ ಕೊಕ್ಕರೆ ಧಾಮಗಳಲ್ಲಿ ಒಂದಾಗಿದೆ ಮತ್ತು ಬಹುಶಃ ಜಾರ್ಡನ್ (1864) ಭೇಟಿ ನೀಡಿರುವ ಕೊಕ್ಕರೆ ಧಾಮವಾಗಿದೆ.ಬಹಳ ಹಿಂದಿನ ಕಾಲದಿಂದಲೇ ಇಲ್ಲಿ ಹಕ್ಕಿಗಳು ಸಂತಾನೋತ್ಪತ್ತಿ ಮಾಡುತ್ತಿದ್ದವು ಎನ್ನಲಾಗಿದೆ.ಇದು ಸ್ಪಾಟ್‌ ಬಿಲ್ಡ್ ಪೆಲಿಕನ್‌ (ಪೆಲಿಕನಾಸ್ ಫಿಲಿಪ್ಪೆನ್ಸಿಸ್‌) ಮತ್ತು ಪೇಂಟೆಡ್‌ ಸ್ಟಾರ್ಕ್ಸ್ (ಮಿಕ್ಟಿರಿಯಾ ಲ್ಯುಕೊಸೆಫಲ) ಹಕ್ಕಿಗಳ ಸಾಂಪ್ರದಾಯಿಕ ಗೂಡುಕಟ್ಟುವ ತಾಣವಾಗಿದೆ.ಇದನ್ನು ಹಳ್ಳಿಗರು ಸ್ವತಃ ತಾವೇ ರಕ್ಷಿಸಿದ್ದಾರೆ.ಹಕ್ಕಿಗಳ ಬೇಟೆ ಅಥವಾ ಮೊಟ್ಟೆಗಳನ್ನು ಸಂಗ್ರಹಿಸುವುದನ್ನು ಹಳ್ಳಿಯಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಸ್ಥಳ ಮತ್ತು ವಿಸ್ತಾರ

ಕೊಕ್ಕರೆ ಬೆಳ್ಳೂರು ಸಮುದಾಯದ ವಿಸ್ತೀರ್ಣ 772 ಎಕರೆ ಮತ್ತು 09 ಗುಂಟೆಗಳು. ದಿನಾಂಕ 14-9-2007ರ ಸರ್ಕಾರಿ ಆದೇಶ ಸಂಖ್ಯೆ FEE 218/ FWL /2007ರ ಮೂಲಕ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 (1972ರ 53) ವಿಭಾಗ 36(ಸಿ)(1)ರಡಿ ಕರ್ನಾಟಕ ಸರ್ಕಾರ ಕೊಕ್ಕರೆ ಬೆಳ್ಳೂರು ಗ್ರಾಮದ ಸಂಪೂರ್ಣ ಪ್ರದೇಶವನ್ನು ಸಮುದಾಯ ಮೀಸಲು ಎಂದು ಘೋಷಿಸಿತು.

ಮಹತ್ವ

ಇಲ್ಲಿ ಮನೆಗಳು ಮತ್ತು ಹಿತ್ತಲಿನ ನಡುವೆ ಬೆಳೆಯುವ ಮರಗಳ ಮೇಲೆ ಹಕ್ಕಿಗಳು ಗೂಡುಕಟ್ಟುತ್ತವೆ.ಈ ಪ್ರದೇಶ ಒಣ ಶುಷ್ಕ ಹವೆ ಹೊಂದಿದೆ, ಮತ್ತು ಇಲ್ಲಿ ಕೃಷಿ ಮಾಡಲಾಗುವ ಬಹಳಷ್ಟು ಜಮೀನು ಮಳೆಯನ್ನು ಅವಲಂಬಿಸಿದೆ.ಕೊಕ್ಕರೆಬೆಳ್ಳೂರಿನಲ್ಲಿ ಗೂಡು ಕಟ್ಟುವ ಹಕ್ಕಿಗಳಿಗೆ ಹಳ್ಳಿಯ 30 ಕಿ.ಮೀ. ವ್ಯಾಪ್ತಿಯೊಳಗೆ ಇರುವ ವಿವಿಧ ಗಾತ್ರದ ಒಟ್ಟು 70 ಕೆರೆಗಳು ಆಹಾರ ಒದಗಿಸುವ ಮೂಲವಾಗಿವೆ. ಹಳ್ಳಿಯ ಪಶ್ಚಿಮಕ್ಕೆ ಸುಮಾರು ಒಂದು ಕಿ.ಮೀ. ಹರಿಯುವ ಕಾವೇರಿ ನದಿಯ ಉಪನದಿ ಶಿಂಷಾ, ಕೂಡ ಪಕ್ಷಿಗಳಿಗೆ ಆಹಾರ ಒದಗಿಸುವ ತಾಣವಾಗಿವೆ.ಎಲ್ಲ ಕೆರೆಗಳು ಮಾನವ ನಿರ್ಮಿತವಾಗಿದ್ದು, ಮಾನ್ಸೂನ್‌ ನೀರನ್ನು ಹಿಡಿದಿಡಲು ತಗ್ಗು ಪ್ರದೇಶಗಳಲ್ಲಿ ಶತಮಾನದ ಹಿಂದೆ ನಿರ್ಮಿಸಿದ ಒಡ್ಡುಗಳಾಗಿವೆ.ಇದರ ಪರಿಣಾಮವಾಗಿ, ಈ ಕೆರೆಗಳು ನಿಶ್ಚಿತ ಋತುಮಾನ ಚಕ್ರಗಳನ್ನು ಹೊಂದಿದ್ದು, ಮಾನ್ಸೂನ್‌ನಲ್ಲಿ ಇವು ಭರ್ತಿಯಾಗುತ್ತವೆ ಮತ್ತು ಬೇಸಿಗೆಯ ಕೊನೆಗೆ ಸಂಪೂರ್ಣ ಬರಿದಾಗುತ್ತವೆ (ಸುಬ್ರಹ್ಮಣ್ಯ 1990).ಇದರಿಂದಾಗಿ ನಡೆದಾಡುವ ಹಕ್ಕಿಗಳ ಸಂತತಿ ಜನವರಿಯ ಬಳಿಕ ಹೆಚ್ಚುತ್ತದೆ, ಇದೇ ವೇಳೆ ಆಳದ ನೀರಿಗೆ ಇಳಿಯುವ ಹಕ್ಕಿಗಳ ಸಂತತಿ ಜನವರಿಗೆ ಮೊದಲು ಹೆಚ್ಚಿರುತ್ತದೆ.ಗೊಲ್ಲರದೊಡ್ಡಿ, ತೈಲೂರು ನಡೆದಾಡುವ ಹಕ್ಕಿಗಳು ಆಗಾಗ ಬರುವ ಪ್ರಮುಖ ಕೆರೆಗಳಾಗಿವೆ.ಗೊಲ್ಲರದೊಡ್ಡಿ ಕೆರೆ ಗೂಡು ಕಟ್ಟುವ ಮರಗಳಿಂದ 1 ಕಿ.ಮೀ. ಗಿಂತ ಕಡಿಮೆ ದೂರದಲ್ಲಿದೆ.ಈ ಪ್ರದೇಶದಲ್ಲಿ ರಾಗಿ, ನೆಲಗಡಲೆ, ತೊಗರಿ, ಬೀನ್ಸ್, ಕಬ್ಬು ಮತ್ತು ಭತ್ತ (ಕೆರೆ ನೀರು ಆಧರಿತ) ಮುಖ್ಯ ಬೆಳೆಗಳಾಗಿದ್ದು, ಕೃಷಿ ಗದ್ದೆಗಳಿಂದ ಹಳ್ಳಿ ಸುತ್ತುವರಿಯಲ್ಪಟ್ಟಿದೆ.

ಭೂದೃಶ್ಯ

ಇದು ದಕ್ಷಿಣ ಪ್ರಸ್ಥಭೂಮಿಯ ಒಣ ಪ್ರದೇಶದಲ್ಲಿದೆ ಮತ್ತು ಇಲ್ಲಿನ ಭೂಮಿ ಸ್ವಲ್ಪಮಟ್ಟಿಗೆ ಏರುತಗ್ಗುಗಳಿಂದ ಕೂಡಿದೆ.ಸುತ್ತಲಿನ ಪ್ರದೇಶದ ಮಣ್ಣು ಕೆಂಪು ಮರಳು ಮಿಶ್ರಿತ ಕಳಿಮಣ್ಣು.

ESZ.

--

ವಿಸಿಟರ್ ಕಾರ್ನರ್

ಮಾಡಬೇಕಾದ ಕೆಲಸಗಳುನೋಡಿ

1. ವಾಹನಗಳನ್ನು ನಿಧಾನವಾಗಿ ಚಾಲನೆ ಮಾಡಿ. 2. ಕಸದ ಡಬ್ಬಿಗಳನ್ನು ಬಳಸಿ. 3. ಪ್ಲ್ಯಾಸ್ಟಿಕ್‌ ಮುಕ್ತ ವಲಯ. 4. ಅರಣ್ಯ ಅಧಿಕಾರಿಗಳ ಸೂಚನೆಗಳು ಮತ್ತು ನಿಮಗೆ ಒದಗಿಸಿದ ಕೈಪಿಡಿಗಳಲ್ಲಿರುವ ಮಾಹಿತಿ ಹಾಗೂ ಸೂಚನಾ ಫಲಕಗಳಲ್ಲಿ ಬರೆದಿರುವ ನಿಯಮಗಳನ್ನು ಪಾಲಿಸಿ. 5. ಬಯೋಡಿಗ್ರೇಡೆಬಲ್‌ ವಸ್ತುಗಳನ್ನು ಬಳಸಿ

ತಲುಪುವುದು ಹೇಗೆನೋಡಿ

ರಸ್ತೆ ಮೂಲಕ:- ಕೊಕ್ಕರೆ ಬೆಳ್ಳೂರಿಗೆ ಉತ್ತಮ ಸಂಪರ್ಕವಿದೆ ಮತ್ತು ರಸ್ತೆಮಾರ್ಗದಲ್ಲಿ ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ 83 ಕಿಮೀ ದೂರದಲ್ಲಿದ್ದು, ಬೆಂಗಳೂರು-ಮೈಸೂರು ಹೆದಾರಿಯಲ್ಲಿರುವ ಅಡ್ಡರಸ್ತೆ ಮೂಲಕ ಹೋದರೆ ಕೊಕ್ಕರೆ ಬೆಳ್ಳೂರು ತಲುಪಬಹುದು. ರೈಲಿನ ಮೂಲಕ:- ಕೊಕ್ಕರೆ ಬೆಳ್ಳೂರು ತಲುಪಲು ಇರುವ ಸಮೀಪದ ರೈಲು ನಿಲ್ದಾಣಗಳು ಮದ್ದೂರು ಮತ್ತು ಮಂಡ್ಯ. ವಿಮಾನದ ಮೂಲಕ:- ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನವಾಗಿದ್ದು, ಸಮೀಪದ ದೇಶೀಯ ವಿಮಾನ ನಿಲ್ದಾಣ ಮೈಸೂರಿನಲ್ಲಿದೆ. ಮೈಸೂರು ಮತ್ತು ಬೆಂಗಳೂರಿನ ನಡುವೆ ಮಂಡ್ಯ ಮಾರ್ಗವಾಗಿ ದಿನವೂ ಹಲವಾರು ಬಸ್‌ಗಳು ಮತ್ತು ರೈಲುಗಳು ಸಂಚರಿಸುತ್ತವೆ.

ಭೇಟಿ ನೀಡಬಹುದಾದ ಸಮಯನೋಡಿ

ಸಮುದಾಯ ಮೀಸಲು ಪ್ರವಾಸೋದ್ಯಮಕ್ಕೆ ತೆರೆದಿರುತ್ತದೆ. ಬೆಳಗ್ಗೆ ಮತ್ತು ಸಂಜೆ ಪಕ್ಷಿಗಳನ್ನು ವೀಕ್ಷಿಸಲು ಅತ್ಯುತ್ತಮ ಸಮಯವಾಗಿದೆ. ಗ್ರಾಮಕ್ಕೆ ಭೇಟಿ ನೀಡಲು ಉತ್ತಮ ತಿಂಗಳುಗಳು ಡಿಸೆಂಬರ್‌ ಮತ್ತು ಜನವರಿ. ಈ ಅವಧಿಯಲ್ಲಿ ವಲಸೆ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಈ ಗ್ರಾಮಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತವೆ.

ಶುಲ್ಕಗಳು ಮತ್ತು ಅನುಮತಿಗಳುನೋಡಿ

ಅನ್ವಯಿಸುವುದಿಲ್ಲ.

ಬುಕಿಂಗ್ / ಕಾಯ್ದಿರಿಸುವಿಕೆನೋಡಿ

ಈ ಸಂರಕ್ಷಣಾ ಮೀಸಲಿನಲ್ಲಿ ಬುಕ್ಕಿಂಗ್‌ ಮತ್ತು ರಿಸರ್ವೇಶನ್‌ ಮೂಲಕ ಪ್ರವಾಸೋದ್ಯಮದ ಅವಕಾಶ ಇಲ್ಲ.

ಹವಾಮಾನನೋಡಿ

ಮಳೆಪ್ರಮಾಣ:ಈ ಪ್ರದೇಶ ನೈರುತ್ಯ ಮತ್ತು ಈಶಾನ್ಯ ಮಾರುತಗಳೆರಡರಿಂದಲೂ ಮಳೆ ಉಂಟಾಗುತ್ತದೆ. ನೈರುತ್ಯ ಮಾನ್ಸೂನ್‌ ಆಗಾಗ ಮಳೆಯೊಂದಿಗೆ ಜೂನ್‌ನಲ್ಲಿ ಆರಂಭವಾಗುತ್ತದೆ ಮತ್ತು ಸೆಪ್ಟೆಂಬರ್‌ವರೆಗೆ ಇರುತ್ತದೆ. ಈಶಾನ್ಯ ಮಾನ್ಸೂನ್‌ ಅಕ್ಟೋಬರ್‌ ಮತ್ತು ನವೆಂಬರ್‌ ನಡುವೆ ಮಳೆ ತರುತ್ತದೆ. ಸರಾಸರಿ ವಾರ್ಷಿಕ ಮಳೆ ಪ್ರಮಾಣ ಸುಮಾರು 700-800 ಮಿಮೀ. ತಾಪಮಾನ: ಕೊಕ್ಕರೆಬೆಳ್ಳೂರು ಸಮುದಾಯ ಮೀಸಲು 3 ಋತುಗಳೊಂದಿಗೆ ಮಧ್ಯಮ ಹವಾಮಾನ ಹೊಂದಿದೆ. a) ಬೇಸಿಗೆ - ಮಾರ್ಚ್‌ನಿಂದ ಮೇ. b) ಮಾನ್ಸೂನ್‌ - ಜೂನ್‌ನಿಂದ ಅಕ್ಟೋಬರ್‌. c) ಚಳಿಗಾಲ - ನವೆಂಬರ್‌ನಿಂದ ಫೆಬ್ರವರಿ. ತಾಪಮಾನ 15º ಸೆ. ನಿಂದ 30º ಸೆ. ವರೆಗೆ ವ್ಯತ್ಯಾಸವಾಗುತ್ತದೆ.

ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕನೋಡಿ

ಈ ಅಭಯಾರಣ್ಯ ಮೊಬೈಲ್‌ ಸಂಪರ್ಕ ವಲಯದೊಳಗೆ ಇದೆ. ಯಾವುದೇ ವಿಚಾರಣೆ/ ದೂರುಗಳನ್ನು ಇಮೇಲ್‌ ಐಡಿ dcfwlmys@gmail.com ಗೆ ಕಳುಹಿಸಬಹುದು.

ಪದೇಪದೆ ಕೇಳಲಾಗುವ ಪ್ರಶ್ನೆಗಳುನೋಡಿ

--

ಶಿಷ್ಟಾಚಾರ ಪಾಲನೆ ಮತ್ತು ನಿಷಿದ್ಧ ಚಟುವಟಿಕೆಗಳು ನೋಡಿ

ಮಾಡಿರಿ

--

ಮಾಡಬೇಡಿರಿ

ಹೀಗೆ ಮಾಡಬೇಡಿ 1.ಯೌವುದೇ ಪ್ಯಾಕೇಜಿಂಗ್‌, ಪ್ಲಾಸ್ಟಿಕ್‌ ಬಾಟಲಿಗಳು, ಇತರ ಯಾವುದೇ ಕಸವನ್ನು ಹೊರಗೆ ಎಸೆಯಬೇಡಿ 2.ಹಕ್ಕಿ ಗೂಡಿರುವ ಪ್ರದೇಶಗಳಲ್ಲಿ ಅನಗತ್ಯ ಮತ್ತು ಗದ್ದಲದ ಧ್ವನಿ ಮಾಡಬೇಡಿ 3.ಯಾವುದೇ ವನ್ಯಜೀವಿಗೆ ಕಿರುಕುಳ ನೀಡಬೇಡಿ 4.ಪಕ್ಷಿಗಳಿಗೆ ಕಿರಿಕಿರಿ ಮಾಡಬೇಡಿ, ಹರಳುಕಲ್ಲು/ಕಲ್ಲುಗಳನ್ನು ಎಸೆಯಬೇಡಿ, ಫೊಟೋ ತೆಗೆಯಲು ಓಡಬೇಡಿ. 5.ದಯವಿಟ್ಟು ನೀರನ್ನು ಕಲುಷಿತಗೊಳಿಸಬೇಡಿ. ಕಲುಷಿತ ನೀರು ಹಕ್ಕಿಗಳಿಗೆ ಹಾನಿಕಾರಕವಾಗಿರುತ್ತದೆ 6. ನಿಮ್ಮ ಸಾಕುಪ್ರಾಣಿಗಳನ್ನು (ನಾಯಿ, ಬೆಕ್ಕು ಇತ್ಯಾದಿ) ಮೀಸಲು ಪ್ರದೇಶದೊಳಗೆ ತರಬೇಡಿ. 7.ಅಭಯಾರಣ್ಯದೊಳಗಿರುವ ಹಣ್ಣುಗಳು, ಸಸ್ಯಗಳು ಮತ್ತು ಹೂವುಗಳನ್ನು (ಕಮಲ ಮತ್ತು ವಾಟರ್‌ ಲಿಲ್ಲಿ) ಕೀಳಬೇಡಿ.