English     ನಮ್ಮನ್ನು ಅನುಸರಿಸಿ:
 
ವನ್ಯಜೀವಿ ಮುಖಪುಟ > ವನ್ಯಜೀವಿ > ಸಫಾರಿಗಳು ಮತ್ತು ಮೃಗಾಲಯ
ಸಫಾರಿಗಳು ಮತ್ತು ಮೃಗಾಲಯ

ಸಂಘಸಂಸ್ಥೆಗಳ ನೋಂದಣಿ ಕಾಯಿದೆ 1960ರ ಅಡಿಯಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರವು ನೋಂದಾಯಿಸಲ್ಪಟ್ಟಿರುತ್ತದೆ ಹಾಗೂ ಮೈಸೂರಿನ ಶ್ರೀ ಚಾಮರಾಜೇಂದ್ರ ಪ್ರಾಣಿಶಾಸ್ತ್ರ ಉದ್ಯಾನವನದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾರೀಖು 20-07-2002ರ ಸರ್ಕಾರದ ಆದೇಶದಂತೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಮಾನ್ಯಮಾಡಲ್ಪಟ್ಟಿರುವ ಕೆಳಕಂಡ ಎಂಟು ಮೃಗಾಲಯಗಳನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ನಿಯಂತ್ರಣದ ಅಡಿಯಲ್ಲಿ ತರಲಾಯಿತು.

 1. ಶ್ರೀ ಚಾಮರಾಜೇಂದ್ರ ಪ್ರಾಣಿಶಾಸ್ತ್ರ ಉದ್ಯಾನವನ, ಮೈಸೂರು
 2. ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬೆಂಗಳೂರು
 3. ಮಕ್ಕಳ ಉದ್ಯಾನ ಹಾಗೂ ಸಣ್ಣ ಮೃಗಾಲಯ, ಬಳ್ಳಾರಿ (ಸ್ಥಾಳಾಂತರದಲ್ಲಿದೆ)
 4. ಸಣ್ಣ ಮೃಗಾಲಯ, ಕಿತ್ತೂರು ರಾಣಿ ಚೆನ್ನಮ್ಮ ನಿಸರ್ಗಧಾಮ, ಭೂತರಾಮನಹಟ್ಟಿ. ಬೆಳಗಾವಿ
 5. ಇಂದಿರಾ ಪ್ರಿಯದರ್ಶಿನಿ ಪ್ರಾಣಿಸಂಗ್ರಹಾಲಯ, ಅನಗೋಡು, ದಾವಣಗೆರೆ
 6. ಮಕ್ಕಳ ಉದ್ಯಾನವನ-ಜೊತೆಗೆ ಸಣ್ಣ ಮೃಗಾಲಯ, ಬಿಂಕದಕಟ್ಟಿ, ಗದಗ
 7. ಮಕ್ಕಳ ಉದ್ಯಾನವನ-ಜೊತೆಗೆ ಸಣ್ಣ ಮೃಗಾಲಯ, ಕಲಬುರ್ಗಿ
 8. ಹುಲಿ ಮತ್ತು ಸಿಂಹ ಸಫಾರಿ, ತ್ಯಾವರೆಕೊಪ್ಪ ಶಿವಮೊಗ್ಗ

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ದರ್ಜೆಯ ಸದಸ್ಯ ಕಾರ್ಯದರ್ಶಿಯು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕನಾಗಿರುತ್ತಾರೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮುಖ್ಯ ಉದ್ದೇಶಗಳೆಂದರೆ :

 1. ಅವುಗಳು ಅಳಿದುಹೋಗುವುದರಿಂದ ರಕ್ಷಿಸುವ ಉದ್ದೇಶದಿಂದ ಭಾರತ ಹಾಗೂ ಪ್ರಪಂಚದ ಅಪಾಯದ ಅಂಚಿಲ್ಲಿರುವ ಪ್ರಾಣಿ ಪ್ರಬೇಧಗಳನ್ನು ಸೃಷ್ಠಿಸುವುದು ಹಾಗೂ ಕಾಪಾಡುವುದು ಹಾಗೂ ಮೃಗಾಲಯಗಳನ್ನು ಮರುಭರ್ತಿ ಮಾಡುವುದು ಮತ್ತು ಅರಣ್ಯದಲ್ಲಿ ಕುಗ್ಗಿರುವ ಪ್ರಾಣಿ ಸಂಕುಲವನ್ನು ಇದರ ಪರಿಣಾಮವಾಗಿ ಹೆಚ್ಚಿಸುವುದು.
 2. ವನ್ಯಜೀವಿ ಸಂರಕ್ಷಣೆಯ ಉದ್ದೇಶಗಳನ್ನು ನೇರವಾಗಿ ಜಾರಿಗೊಳಿಸಲು ವಸ್ತುಪ್ರದರ್ಶನ ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸುವುದರ ಮೂಲಕ ಜನಗಳಲ್ಲಿ ವನ್ಯಜೀವಿಗಳ ಬಗ್ಗೆ ಆಸಕ್ತಿ ಹಾಗೂ ಕಾಳಜಿಯನ್ನು ಹುಟ್ಟಿಸುವುದು.
 3. ಬಂಧನದಲ್ಲಿ ಹಾಗೂ ಅವುಗಳ ಪ್ರಾಕೃತಿಕ ಪರಿಸರಿದಲ್ಲಿ ಪ್ರಾಣಿಗಳ ಮತ್ತು ಪಕ್ಷಿಗಳ ಅಭ್ಯಾಸಗಳು ಹಾಗೂ ನಡವಳಿಕೆಗಳ ಅಧ್ಯಯನ ನಡೆಸುವುದು.
 4. ಖರೀದಿ ಅಥವಾ ವಿನಿಮಯದ ಮುಖಾಂತರ ಇತರ ಭಾರತದ ರಾಜ್ಯಗಳಿಂದ ಅಥವಾ ಹೊರ ದೇಶಗಳಿಂದ ಕರ್ನಾಟಕ ರಾಜ್ಯದ ಮೃಗಾಲಯಗಳಿಗೆ ಅವಶ್ಯವಿರುವ ಅಂತಹ ಪ್ರಾಣಿಗಳನ್ನು ಪಡೆದುಕೊಳ್ಳುವುದು.
 5. ಸಂಚಿಕೆಗಳು ಹಾಗೂ ನಿಯತಕಾಲಿಕೆಗಳು ಇತ್ಯಾದಿಗಳನ್ನು ಪ್ರಕಟಿಸುವುದರ ಮೂಲಕ ನಮ್ಮ ವನ್ಯ ಜೀವಿಗಳ ಬಗ್ಗೆ ತಿಳುವಳಿಕೆ ಹಾಗೂ ಮಾಹಿತಿಯನ್ನು ಹರಡುವುದು/ಹಂಚಿಕೊಳ್ಳುವುದು.
 6. ಮೃಗಾಲಯಗಳು, ಪ್ರಾಣಿಶಾಸ್ತ್ರ ಉದ್ಯಾನವನಗಳ ರೂಪುರೇಷೆಗಳನ್ನು ತಯಾರಿಸಲು ಹಾಗೂ ಅಭಿವೃದ್ಧಿಗಾಗಿ ತಾಂತ್ರಿಕ ಸಲಹೆ ಒದಗಿಸುವುದು.
 7. ಮೃಗಾಲಯಗಳು, ಪ್ರಾಣಿಶಾಸ್ತ್ರ ಉದ್ಯಾನವನಗಳಲ್ಲಿರುವ ಪ್ರಾಣಿಗಳ ವಿವಿಧ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುವುದು.

ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ನಿರ್ವಹಣೆ ಹಾಗೂ ಅಭಿವೃದ್ಧಿ ನಿಧಿಯಾದ ಒಟ್ಟು ರೂ.10.00 ಕೋಟಿಯನ್ನು (ಹತ್ತು ಕೋಟಿ ರೂಪಾಯಿಗಳು ಮಾತ್ರ) ಪ್ರವರ್ತಕ ನಿಧಿಯಾಗಿ 2003-04ರಿಂದ 3 ವರ್ಷಗಳಲ್ಲಿ ನೀಡಬೇಕಾಗಿತ್ತು. 2005-06ನೇ ಹಣಕಾಸು ವರ್ಷದ ಕೊನೆಯವರೆಗೆ ಸರ್ಕಾರವು ಪ್ರವರ್ತಕ ನಿಧಿಗೆ ರೂ.3.16 ಕೋಟಿಯನ್ನು ಬಿಡುಗಡೆ ಮಾಡಿದೆ. 2009-10ನೇ ಸಾಲಿನ ಮುಂಗಡಪತ್ರದಲ್ಲಿ ಸರ್ಕಾರವು ಮೃಗಾಲಯಗಳ, ಅಧ್ಯಕ್ಷರ ಹಾಗೂ ಸದಸ್ಯ-ಕಾರ್ಯದರ್ಶಿಗಳ ಕಛೇರಿಯ ವೆಚ್ಚದಲ್ಲಿನ ಕೊರತೆಯನ್ನು ನೀಗಿಸಲು 125 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?