English     ನಮ್ಮನ್ನು ಅನುಸರಿಸಿ:
 
ಅರಣ್ಯ ಮುಖಪುಟ > ಅರಣ್ಯ > ಅರಣ್ಯ ವಿಧಗಳು
ಅರಣ್ಯ ವಿಧಗಳು

ಕರ್ನಾಟಕವು ಭಾರತದಲ್ಲಿಯೇ ಅತ್ಯಂತ ಸುಂದರವಾದ ಅರಣ್ಯಗಳನ್ನು ಹೊಂದಿರುವ ರಾಜ್ಯವಾಗಿದೆ. ಅದು ಪಶ್ಚಿಮ ಘಟ್ಟಗಳ ನಿತ್ಯ ಹರಿದ್ವರ್ಣ ಕಾಡುಗಳಿಂದ ಹಿಡಿದು ಸಮತಟ್ಟಾದ ಪ್ರದೇಶಗಳಲ್ಲಿ ಕುರುಚಲು ಅಥವಾ ಮುಳ್ಳಿನ ಗಿಡಗಂಟೆಗಳಿಂದ ಕೂಡಿದ ಅರಣ್ಯಗಳನ್ನು ಹೊಂದಿದೆ.

 1. ನಿತ್ಯಹರಿದ್ವರ್ಣ ಹಾಗೂ ಅರೆ-ನಿತ್ಯಹರಿದ್ವರ್ಣ :

  ವರ್ಷದ ಎಲ್ಲಾ ಕಾಲದಲ್ಲೂ ಸಂಪೂರ್ಣವಾಗಿ ಅಥವಾ ಮುಖ್ಯವಾಗಿ ಹಸಿರು ಪದರವನ್ನು ಉಳಿಸಿಕೊಳ್ಳುವ ಮರಗಳನ್ನು ಹೊಂದಿರುವ ಅರಣ್ಯವು ನಿತ್ಯಹರಿದ್ವರ್ಣ ಕಾಡುಗಳು ಎಂದು ಮತ್ತು ಅರೆ-ಹರಿದ್ವರ್ಣ ಕಾಡುಗಳನ್ನು ಸಾಮಾನ್ಯವಾಗಿ ನಿತ್ಯಹರಿದ್ವರ್ಣ ಹಾಗೂ ತೇವಭರಿತ ಎಲೆ ಉದುರಿಸುವ ಕಾಡುಗಳ ನಡುವಿನ ಸ್ಥಿತ್ಯಂತರದ ಹಂತ ಎಂದು ಪರಿಗಣಿಸಲಾಗುತ್ತದೆ. ಈ ಅರಣ್ಯಗಳು ನಿತ್ಯ ಹರಿದ್ವರ್ಣ ಮರಗಳ ಜೊತೆಗೆ ವಿಶಿಷ್ಟ ಗುಣ ಲಕ್ಷಣಗಳನ್ನು ಹೊಂದಿರುವ ಅಂದರೆ ಕಡಿಮೆ ದಟ್ಟಣೆಯ ಕೊಂಬೆಗಳು, ಹೆಚ್ಚಿನ ಅವಲಂಬಿತ ರೆಂಬೆಗಳು, ದಪ್ಪವಾದ ಹಾಗೂ ಕಠಿಣ ತೊಗಟೆಗಳು ಮತ್ತು ದೊಡ್ಡ ಬುಡವನ್ನು ಹೊಂದಿರುವ ಎಲೆ ಉದುರುವ ನಿತ್ಯಹರಿದ್ವರ್ಣದ ಮರಗಳಿಂದ ಕೂಡಿದೆ. ಉದಾ : ಡಿಪ್ಟೆರೊಕಾರ್ಪಸ್ ಇಂಡಿಕಸ್, ಹೋಪಿಯಾ ಪರಿವ್ಫೆÇ್ಲೀರಾ, ಮೈರಿಸ್ಟಿಕಾ ಫೌನಾ, ಜಿಮ್ನಾಕ್ರಾಂಥೆರಾ ಕೆನಾರಿಕಾ, ವಟೇರಿಯಾ ಇಂಡಿಕಾ ಇತ್ಯಾದಿ.,

 2. ಸಮಶೀತೋಷ್ಣ ಎಲೆ ಉದುರುವ ಕಾಡು:

  ಸಮಶೀತೋಷ್ಣ ಎಲೆ ಉದುರುವ ಕಾಡುಗಳು ಸಾಧಾರಣ ಮಳೆ ಬೀಳುವ ಮತ್ತು ಉಷ್ಣಾಂಶ ಹೊಂದಿರುವ ಹಾಗೂ ಶೀತಲ ಚಳಿಗಾಲಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಇರುತ್ತದೆ. ಇವುಗಳು ವಾರ್ಷಿಕ ಮಳೆ ಪ್ರಮಾಣವು 100 ಸೆಮೀ. ಹಾಗೂ 150 ಸೆಮೀ. ನಡುವೆ ಇರುವ, ಸರಾಸರಿ ವಾರ್ಷಿಕ ತಾಪಮಾನವು 24 ಡಿಗ್ರಿ ಸೆಲ್ಸಿಯಸ್ನಿಂದ 27 ಡಿಗ್ರಿ ಸೆಲ್ಸಿಯಸ್ ಇರುವ ಮತ್ತು ತೇವಾಂಶ ಪ್ರಮಾಣವು ಶೇಕಡಾ 60 ರಿಂದ 80ರಷ್ಟಿರುವ ಪ್ರದೇಶದಲ್ಲಿನ ವಿಶಿಷ್ಟ ಮಳೆಗಾಲದ ಕಾಡುಗಳಾಗಿರುತ್ತವೆ. ಅವುಗಳು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ಪೂರ್ವ ಇಳಿಜಾರಿನಲ್ಲಿ, ಪರ್ಯಾಯ ದ್ವೀಪದ ಈಶಾನ್ಯ ಭಾಗಗಳಲ್ಲಿ ಸಂಭವಿಸುತ್ತದೆ. ಪರ್ಯಾಯ ದ್ವೀಪದ ತೇವಾಂಶಭರಿತ ಈಶಾನ್ಯ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ತೇಗವು (ಟೆಕ್ಟೊನ ಗ್ರಾಡಿಸ್) ವಾಣಿಜ್ಯವಾಗಿ ಅತ್ಯಂತ ಪ್ರಮುಖ ಪ್ರಬೇಧವಾಗಿದೆ. ಉದಾ : ಟರ್ಮಿನೇಲಿಯಾ, ಲಾರ್ಜರ್ಸ್ಟ್ರೋಮಿಯಾ, ಪ್ರೆಟರೋಕಾರ್ಪಸ್, ಗ್ಸೈಲಿಯಾ, ಟೆಕ್ಟೋನಾ ಹಾಗೂ ಅನೋಗೀಸಸ ಇತ್ಯಾದಿ.,

 3. ಎಲೆ ಉದುರುವ ಒಣ ಕಾಡು :

  ನೀರಿನ ಕೊರತೆಯಾಗುವುದರಿಂದ ಡಿಸೆಂಬರ್ನಲ್ಲಿ (ಉತ್ತರಾರ್ಧ ಗೋಳದಲ್ಲಿ) ಉಷ್ಣವಲಯದ ಎಲೆ ಉದುರುವ ಕಾಡುಗಳು ಎಲೆಗಳನ್ನು ಉದುರಿಸುತ್ತವೆ. ಈ ವಿಧಾನವು ತೇವಭರಿತ ಎಲೆ ಉದುರುವ ಕಾಡಿನ ಕೆಳ ದರ್ಜೆಯ ಅವತರಣಿಕೆಯಾಗಿರುತ್ತದೆ. ಇದು ದೇಶದ ತೇವಭರಿತ ಎಲೆ ಉದುರುವ ಕಾಡು (ಪೂರ್ವದಲ್ಲಿ) ಹಾಗೂ ಉಷ್ಣವಲಯದ ಮುಳ್ಳಿನ ಗಿಡಗಂಟೆಯ (ಪಶ್ಚಿಮದಲ್ಲಿ) ಕಾಡುಗಳ ನಡುವಿನ ವಿಶಾಲವಾದ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತದೆ. ಉದಾ : ಅಕೇಶಿಯಾ, ಹಾರ್ಡ್ವಿಕಿಸಿಯಾ, ಬೇವು, ಪೆÇಂಗಾಮಿಯಾ, ಸೋಮಿಡಾ ಆಲ್ಬಾಮ್, ಫಿಕಸ್ ಇತ್ಯಾದಿ.,

 4. ಕುಂಠಿತ ಬೆಳವಣಿಗೆಯ ಕುರುಚಲು ಮತ್ತು ಮುಳ್ಳು ಕಾಡು :

  ಈ ಕಾಡುಗಳು ಮಳೆಯು ತೀರಾ ಕಡಿಮೆ ಇರುವ ಪ್ರದೇಶಗಳಿಗೆ ಸೀಮಿತವಾಗಿವೆ. ಇಲ್ಲಿ ಮಳೆಯ ಕೊರತೆಯಿಂದಾಗಿ ಮರಗಳು ಒರಟು ಹುಲ್ಲುಗಳ ಹೊದಿಕೆಯಿಂದ ಕೂಡಿ ಗಿಡ್ಡವಾಗಿರುತ್ತವೆ. ಅಲ್ಲಲ್ಲಿ ವಿಶಿಷ್ಟ ಹೊಸೆದ ಹಾಗೂ ಮುಳ್ಳುಗಳ ವಿಧದ ಪೆÇದೆಗಳು ಹಾಗೂ ಒರಟು ತಾಳೆ ಮರಗಳೂ ಸೇರಿದಂತೆ ವಿಶಾಲವಾಗಿ ಚದುರಿದ ಅಕೇಶಿಯಾಗಳು, ಯೂಫೆÇೀರ್ಬಿಯಾಗಳಿಂದ ಕೂಡಿರುತ್ತವೆ. ಉದಾ : ಅಕೇಶಿಯಾ ಪ್ರಭೇದಗಳು, ಬಲಾನೈಟ್ಸ್ ರಾಕ್ಸ್ಬುರ್ಘಿ, ಕಾರ್ಡಿಯಾ ಮೈಕ್ಸಾ, ಕಪ್ಪಾರಿಸ್ ಎಸ್ಪಿಪಿ., ಪೆÇ್ರಸೊಪಿಸ್ ಎಸ್ಪಿಪಿ., ಅಜಾದಿರಚ್ತಾ ಇಂಡಿಕಾ, ಕಾಸಿಯಾ ಫಿಸ್ಟುಲಾ, ದಯೋಸ್ಪೈರೋಸ್ ಕ್ಲೊರೊಕ್ಸಿಲಾನ್, ಕ್ರಿಸ್ಸಾ ಕರಂಡಾಸ್ ಹಾಗೂ ಫೀನಿಕ್ಸ್ ಸಿಲ್ವೆಸ್ಟ್ರಿಸ್ ಇತ್ಯಾದಿ.,

 5. ವೃಕ್ಷ-ರಹಿತ :

  ಇವುಗಳು ಮುಖ್ಯವಾಗಿ ಹುಲ್ಲುಗಾವಲು ಹಾಗೂ ಬಂಜರು ನೆಲ.

 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?