English     ನಮ್ಮನ್ನು ಅನುಸರಿಸಿ:
 
ನಾನು ಹೇಗೆ ಮುಖಪುಟ > ನಾನು ಹೇಗೆ > ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ? > ಕಾಡು ಮೃಗಗಳಿಂದ ಉಂಟಾಗುವ ಗಾಯಗಳಿಗಾಗಿ
ಕಾಡು ಮೃಗಗಳಿಂದ ಉಂಟಾಗುವ ಗಾಯಗಳಿಗಾಗಿ

1. ಕಾಡು ಮೃಗಗಳಿಂದ ಮನುಷ್ಯನ ಸಾವು ಸಂಭವಿಸಿದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ನೀಡುವ ಬಗ್ಗೆ ಇರುವ ಸರ್ಕಾರಿ ಆದೇಶ ಯಾವುದು?

ಸರ್ಕಾರಿ ಆದೇಶ ಸಂಖ್ಯೆ:ಅಪಜೀ 143 ಎಫ್ಡಬ್ಲ್ಯೂಎಲ್ 2010 ದಿನಾಂಕ 03-08-2011 ಮತ್ತು  ಸರ್ಕಾರಿ ಆದೇಶ ಸಂಖ್ಯೆ:ಅಪಜೀ 128 ಎಫ್ಡಬ್ಲ್ಯೂಎಲ್ 2013 ದಿನಾಂಕ 15-09-2015 ಮತ್ತು ಸರ್ಕಾರಿ ಆದೇಶ ಸಂಖ್ಯೆ. ಅಪಜಿ 130 ಎಫ್ ಡಬ್ಲ್ಯುಎಲ್ 2016 ದಿನಾಂಕ 19-09-2016ರ ಸರ್ಕಾರಿ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಿ.

2. ಕಾಡು ಮೃಗಗಳಿಂದ ಮನುಷ್ಯನಿಗೆ ಗಾಯ ಉಂಟಾದ ಪ್ರಕರಣದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪಡೆಯಲು ಯಾರು ಅರ್ಹರಾಗಿರುತ್ತಾರೆ?

ಆತನು ಅರಣ್ಯ ಪ್ರದೇಶದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲದೇ ಇದ್ದಲ್ಲಿ ಕಾಡು ಮೃಗದಿಂದ ಗಾಯಗೊಳ್ಳುವ ವ್ಯಕ್ತಿಗೆ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಮಂಜೂರು ಮಾಡಲಾಗುವುದು.

ಸ್ಪಷ್ಟನೆ : ಕಾಡು ಮೃಗ ಎಂಬುದು ಯಾವುದನ್ನು ಒಳಗೊಂಡಿರುತ್ತದೆ ಎಂಬುದನ್ನು ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ಸೆಕ್ಷನ್ 2 (36)ರಲ್ಲಿ ಹೇಳಿರುವ ವಿವರಣೆಗೆ ಅನುಗುಣವಾಗಿ ಅರ್ಥೈಸಿಕೊಳ್ಳಬೇಕು. ಈ ವಿವರಣೆಯ ಪ್ರಕಾರ ‘ಕಾಡು ಮೃಗ’ ಎಂದರೆ ಷೆಡ್ಯೂಲ್ I ರಿಂದ Iಗಿ ರಲ್ಲಿ ನಿರ್ದಿಷ್ಟಪಡಿಸಿರುವ ಹಾಗೂ ಸ್ವಭಾವದಲ್ಲಿ ಕ್ರೂರವಾದುದೆಂದು ಕಂಡುಬರುವ ಯಾವುದೇ ಪ್ರಾಣಿ.

3. ಕಾಡು ಮೃಗದ ದಾಳಿಯಿಂದ ಮನುಷ್ಯನು ಗಾಯಗೊಳ್ಳುವ ಪ್ರಕರಣದಲ್ಲಿ ಎಷ್ಟು ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ನೀಡಲಾಗುತ್ತದೆ?

ಶಾಶ್ವತ ವಿಕಲತೆಯ ಪ್ರಕರಣದಲ್ಲಿ ಗರಿಷ್ಠ 20,000/- ರೂಪಾಯಿಗಳ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ನೀಡಲಾಗುತ್ತದೆ.

4. ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪ್ರತಿಪಾದಿಸಲು ಅರ್ಜಿ ಸಲ್ಲಿಸಲು ಯಾವುದಾದರೂ ನಿಗದಿತ ನಮೂನೆ ಇದೆಯೇ?

ಇಲ್ಲ. ಅರ್ಜಿ ಸಲ್ಲಿಸಲು ಯಾವುದೇ ನಿಗದಿತ ನಮೂನು ಇರುವುದಿಲ್ಲ. ಆದಾಗ್ಯೂ, ಭಾದಿತ ವ್ಯಕ್ತಿಯ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ಗುರುತನ್ನು ಹೊಂದಿರುವ ಅರ್ಜಿಯನ್ನು ಓದಲು ಸಾಧ್ಯವಾಗುವಂತೆ ಖಾಲಿ ಕಾಗದದ ಮೇಲೆ ಸ್ಪಷ್ಟವಾಗಿ ಬರೆದಿರಬೇಕು ಅಥವಾ ಬೆರಳಚ್ಚು ಮಾಡಿರಬೇಕು. ಅರ್ಜಿಯನ್ನು ಹುಲಿ ತಂತ್ರಾಂಶದ ಮುಖಾಂತರ ಸಹ ಸಲ್ಲಿಸಬಹುದಾಗಿರುತ್ತದೆ. Click Here.

5. ಅರ್ಜಿಯ ಜೊತೆ ಯಾವ ಯಾವ ದಾಖಲಾತಿಗಳನ್ನು ಲಗತ್ತಿಸಬೇಕು?

ಕಾಡು ಮೃಗದ ದಾಳಿಯಿಂದ ವ್ಯಕ್ತಿಯು ಗಾಯಗೊಳ್ಳುವ ಪ್ರಕರಣದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪಡೆಯಲು ಅರ್ಜಿಯ ಜೊತೆ ಲಗತ್ತಿಸಬೇಕಾದ ದಾಖಲಾತಿಗಳೆಂದರೆ :
ವೈದ್ಯರಿಂದ ಚಿಕಿತ್ಸೆ ಪಡೆದಿರುವ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ.
ಕಾಡು ಮೃಗದ ದಾಳಿಯಿಂದ ಗಾಯಗೊಳಗಾದ ವ್ಯಕ್ತಿಯ ಛಾಯಾಚಿತ್ರ.

6. ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪ್ರತಿಪಾದಿಸಲು ಯಾರಿಗೆ ಅರ್ಜಿ ಸಲ್ಲಿಸಬೇಕು?

ಅರ್ಜಿಯನ್ನು ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗೆ ಸಲ್ಲಿಸಬೇಕು.

7. ಕಾಡು ಮೃಗದ ದಾಳಿಯಿಂದ ವ್ಯಕ್ತಿಯು ಗಾಯಗೊಳ್ಳುವ ಪ್ರಕರಣದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಮಂಜೂರು ಮಾಡಲು ಯಾರಿಗೆ ಅಧಿಕಾರ ನೀಡಲಾಗಿದೆ?

ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ 5000/- ರೂಪಾಯಿಗಳವರೆಗೆ ಮಂಜೂರು ಮಾಡಲು ಅಧಿಕಾರ ನೀಡಲಾಗಿದೆ. ಕಾಡು ಮೃಗದ ದಾಳಿಯಿಂದ ಮನುಷ್ಯನು ಗಾಯಗೊಳ್ಳುವ ಪ್ರಕರಣದಲ್ಲಿ ಗರಿಷ್ಠ 20,000 ರೂಪಾಯಿಗಳ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಮಂಜೂರು ಮಾಡಲು ವ್ಯಾಪ್ತಿ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿಗೆ ಅಧಿಕಾರ ನೀಡಲಾಗಿದೆ.

8. ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ನೀಡುವಲ್ಲಿ ವಿಳಂಬವೇಕೆ?

ಕೆಲವು ಸಂದರ್ಭಗಳಲ್ಲಿ ಆ ಉದ್ದೇಶಕ್ಕಾಗಿ ಸಾಕಷ್ಟು ನಿಧಿಯ ಅಲಭ್ಯತೆಯ ಕಾರಣದಿಂದಾಗಿ ವಿಳಂಬವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವೈದ್ಯರಿಂದ ವೈದ್ಯಕೀಯ ಪ್ರಮಾಣಪತ್ರ ಪಡೆಯುವಂತಹ ಪ್ರಕ್ರಿಯಾ ಕಾರಣಗಳಿಂದಾಗಿ ಸಹ ವಿಳಂಬವಾಗುತ್ತದೆ.


ಅರ್ಜಿ ನಮೂನೆ ಸಲ್ಲಿಕೆ ಪ್ರಕ್ರಿಯೆಗಾಗಿ ಇಲ್ಲಿ ಕ್ಲಿಕ್ ಮಾಡಿ


 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?