English     ನಮ್ಮನ್ನು ಅನುಸರಿಸಿ:
 
ನಾನು ಹೇಗೆ ಮುಖಪುಟ > ನಾನು ಹೇಗೆ > ಚಿಲ್ಲರೆ ಮಾರಾಟಕ್ಕಾಗಿ ಆರ್ಜಿತ ಮರಮುಟ್ಟು, ಬಿದಿರು, ಬೆತ್ತ, ಶ್ರೀಗಂಧ ಹಂಚಿಕೆ ಪಡೆಯಬೇಕೆ? > ಚಿಲ್ಲರೆ ದರದಲ್ಲಿ ಶ್ರೀಗಂಧ ಹಂಚಿಕೆ ಪಡೆಯಬೇಕೆ?
ಚಿಲ್ಲರೆ ದರದಲ್ಲಿ ಶ್ರೀಗಂಧ ಹಂಚಿಕೆ ಪಡೆಯಬೇಕೆ?

1. ಈಗಿನ ಶ್ರೀಗಂಧದ ಚಿಲ್ಲರೆ ಮಾರಾಟದ ದರಗಳೆಷ್ಟು?

2014-15ನೇ ಸಾಲಿಗೆ ದರಗಳು ಮರುಪರಿಶೀಲನೆಯಲ್ಲಿದೆ ಹಾಗೂ ಅವುಗಳನ್ನು ಸರ್ಕಾರವು ಅಧಿಸೂಚಿಸಿದ ನಂತರ ಪ್ರಕಟಿಸಲಾಗುವುದು.

2. ಶ್ರೀಗಂಧದ ಚಿಲ್ಲರೆ ಮಾರಾಟವನ್ನು ಯಾರು ಮಂಜೂರು ಮಾಡಬಹುದು?

ಸರ್ಕಾರದ ಆದೇಶ ಸಂಖ್ಯೆ ಎಎ.ಪಿಎ.ಜೆಐ. 102 ಎಎ.ಪಿಎ.ಎಸ್ಇ. 99, ದಿನಾಂಕ 04-09-2003ರಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಂಜೂರುಮಾಡಲ್ಪಟ್ಟಿರುವ ಹಣಕಾಸು ಅಧಿಕಾರದ ಪ್ರಕಾರ, ಕೆಳಕಂಡ ವರ್ಗಗಳ ಅರಣ್ಯ ಅಧಿಕಾರಿಗಳು ಶ್ರೀಗಂಧದ ಚಿಲ್ಲರೆ ಮಾರಾಟವನ್ನು ಮಂಜೂರು ಮಾಡಬಹುದು :

  ಡಿಸಿಎಫ್                       –    3 ಕೆಜಿ
 ಸಿಎಫ್                         –    10 ಕೆಜಿ
 ಎಪಿಸಿಸಿಎಫ್/ಸಿಸಿಎಫ್         –    – 20 ಕೆಜಿ
 ಪಿಸಿಸಿಎಫ್                   –    ಸಂಪೂರ್ಣ ಅಧಿಕಾರ

ಷರಾ : ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು, ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಸೀಮಿತಗೊಳಿಸಬಹುದು.

3. ಯಾವ ಆಧಾರದ ಮೇಲೆ ಶ್ರೀಗಂಧದ ಚಿಲ್ಲರೆ ಮಾರಾಟವನ್ನು ನಿರ್ಧರಿಸಲಾಗುತ್ತದೆ?

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕರಿಗಳ (ಅರಣ್ಯ ಪಡೆಯ ಮುಖ್ಯಸ್ಥರು) ಶಿಫಾರಸಿನ ಆಧಾರ ಮೇಲೆ ಸರ್ಕಾರವು ಶ್ರೀಗಂಧದ ಚಿಲ್ಲರೆ ಮಾರಾಟ ದರವನ್ನು ನಿಗದಿ ಮಾಡುತ್ತದೆ. ಈ ದರಗಳು ಹಿಂದಿನ ವರ್ಷದಲ್ಲಿ ಕ್ರಮವಾದ ಶ್ರೀಗಂಧ ದಾಸ್ತಾನು ಉಗ್ರಾಣಗಳಲ್ಲಿನ ವಿವಿಧ ವರ್ಗಗಳ ಶ್ರೀಗಂದದ ಹರಾಜು ಮಾರಾಟ ದರಗಳ ಮೇಲೆ ಆಧಾರಿತವಾಗಿರುತ್ತದೆ.

4. ಚಿಲ್ಲರೆ ದರದಲ್ಲಿ ಶ್ರೀಗಂಧವನ್ನು ಪಡೆಯಲು ಯಾರು ಅರ್ಹರಾಗಿರುತ್ತಾರೆ?

ಯಾವುದೇ ಸಾರ್ವಜನಿಕ ವ್ಯಕ್ತಿ/ಧಾರ್ಮಿಕ ಸಂಘಸಂಸ್ಥೆಗಳು/ಸಾರ್ವಜನಿಕ ವಲಯದ ಉದ್ದಿಮೆಗಳು/ಸಂಸ್ಥೆಗಳು ಚಿಲ್ಲರೆ ದರದಲ್ಲಿ ಶ್ರೀಗಂಧ ಪಡೆಯಲು ಅರ್ಜಿ ಸಲ್ಲಿಸಬಹುದು.

5. ಚಿಲ್ಲರೆ ದರದಲ್ಲಿ ಶ್ರೀಗಂಧಕ್ಕಾಗಿ ಅರ್ಜಿ ಸಲ್ಲಿಸಲು ಯಾರನ್ನು ಸಂಪರ್ಕಿಸಬೇಕು?

  • ಅವಶ್ಯಕತೆಯು 3 ಕೆಜಿಗಿಂತ ಕಡಿಮೆ ಇದ್ದಲ್ಲಿ – ತಮ್ಮ ನಿಯಂತ್ರಣದಲ್ಲಿ ಶ್ರೀಗಂಧ ದಾಸ್ತಾನು ಉಗ್ರಾಣ ಇರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಮೈಸೂರು, ಧಾರವಾಡ, ಶಿವಮೊಗ್ಗ ವಿಭಾಗಗಳು)
  • 3 ಕೆಜಿಗಿಂತ ಹೆಚ್ಚು ಹಾಗೂ 10 ಕೆಜಿಯ ವರೆಗೆ - ಅರಣ್ಯ ಸಂರಕ್ಷಣಾಧಿಕಾರಿಗಳು (ಮೈಸೂರು, ಧಾರವಾಡ ಮತ್ತು ಶಿವಮೊಗ್ಗ)
  • 10 ಕೆಜಿಗಿಂತ ಹೆಚ್ಚು – ಎಪಿಸಿಸಿಎಫ್ (ಎಫ್ಆರ್ಎಂ), ಅರಣ್ಯ ಭವನ, ಬೆಂಗಳೂರು.


 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?