English     ನಮ್ಮನ್ನು ಅನುಸರಿಸಿ:
 
ಇಲಾಖೆ ಮುಖಪುಟ > ನಮ್ಮ ಬಗ್ಗೆ > ಇಲಾಖೆ > ಅಪ್ರಮುಅಸಂ (ಅ.ಸಂ.ನಿ)
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಸಂಪನ್ಮೂಲ ನಿರ್ವಹಣೆ)

ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು
 
  • ಅರಣ್ಯ ಪ್ರದೇಶಗಳಲ್ಲಿ ಮರದ ದಿಮ್ಮಿಗಳು ಮತ್ತು ಎಲ್ಎಎಂಪಿಎಸ್ ಮತ್ತು ಗ್ರಾಮ ಅರಣ್ಯ ಸಮಿತಿಗಳು ಎನ್ಟಿಎಫ್ಪಿ ಸಂಗ್ರಹಿಸುವುದಕ್ಕೆ ಸಂಬಂಧಪಟ್ಟ ವಿಷಯಗಳು.
  • ಖನಿಜಗಳೂ ಸೇರಿದಂತೆ ಅರಣ್ಯ ಉತ್ಪನ್ನಗಳ ಮಾರಾಟ ಹಾಗೂ ಕೈಗಾರಿಕೆಗಳಿಗೆ ಸೂಕ್ತ ಬೆಲೆಗಳಿಗೆ ಅರಣ್ಯ ಉತ್ಪನ್ನಗಳನ್ನು ಹಂಚಿಕೆ ಮಾಡುವುದಕ್ಕೆ ಸಂಬಂಧಪಟ್ಟ ವಿಷಯಗಳು.
  • ಮರಮುಟ್ಟುಗಳ ಹಾಗೂ ಇತರ ಅರಣ್ಯ ಉತ್ಪನ್ನಗಳ ಗಣತಿ; ಎಫ್ಡಿಟಿ (ಡಿಸಿಬಿ) ಸೇರಿದಂತೆ ಬಾಕಿ ವಸೂಲಾತಿಗೆ ಸಂಬಂಧಿಸಿದ ವಿಷಯಗಳು.
  • ವಿವಿಧ ವರ್ಗಗಳ ಶ್ರೀಗಂಧಕ್ಕೆ ಚಿಲ್ಲರೆ ಮಾರಾಟ ದರಗಳನ್ನು ನಿಗದಿಪಡಿಸುವುದು ಮತ್ತು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಸಾರ್ವಜನಿಕರು, ದೇವಸ್ಥಾನಗಳು ಮತ್ತು ಧಾರ್ಮಿಕ ಸಂಘಸಂಸ್ಥೆಗಳಿಗೆ ಅವುಗಳನ್ನು ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದ ವಿಷಯಗಳು.
  • ವಿವಿಧ ವರ್ಗಗಳ ಮರಮುಟ್ಟುಗಳು, ಕಟ್ಟಿಗೆ, ಬಿದಿರು, ಬೆತ್ತಗಳು ಇತ್ಯಾದಿಗಳಿಗೆ ಚಿಲ್ಲರೆ ಮಾರಾಟ ದರಗಳನ್ನು ನಿಗದಿಪಡಿಸುವುದು ಮತ್ತು ಸಾರ್ವಜನಿಕರು, ದೇವಸ್ಥಾನಗಳು ಮತ್ತು ಧಾರ್ಮಿಕ ಸಂಘಸಂಸ್ಥೆಗಳ ಸ್ವಂತ ಉಪಯೋಗಕ್ಕಾಗಿ ಹಾಗೂ ಮೇದಾರರಿಗೆ, ಕುಶಲಕರ್ಮಿಗಳು, ಮುಂತಾದವರಿಗೆ ಅವುಗಳನ್ನು ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದ ವಿಷಯಗಳು.
  • ಅರಣ್ಯ ಉತ್ಪನ್ನಗಳಿಗೆ ಸೂಕ್ತ ದರಗಳನ್ನು ನಿಗದಿಪಡಿಸುವುದಕ್ಕೆ ಸಂಬಂಧಿಸಿದ ವಿಷಯಗಳು.
  • ರಾಜ್ಯದಲ್ಲಿನ ಮರ ಆಧಾರಿತ ಕೈಗಾರಿಕೆಗಳ ಮೇಲಿನ ರಾಜ್ಯ ಅಧಿಕಾರಸ್ಥ ಸಮಿತಿಯ ಸಭೆಗಳನ್ನು ಸಂಘಟಿಸುವುದೂ ಸೇರಿದಂತೆ ಸಾ ಮಿಲ್ಗಳು ಮತ್ತು ಇತರ ಮರ ಆಧಾರಿತ ಕೈಗಾರಿಕೆಗಳ ವಿಷಯಗಳಿಗೆ ಸಂಬಂಧಿಸಿದಂತೆ.
  • ಕರ್ನಾಟಕ ಅರಣ್ಯ ಕಾಯಿದೆ 1963, ಕರ್ನಾಟಕ ಅರಣ್ಯ ನಿಯಮಗಳು 1969 ಮತ್ತು ಕರ್ನಾಟಕ ಅರಣ್ಯ ಕೈಪಿಡಿ 1976ರಲ್ಲಿ ನಿರ್ದಿಷ್ಟಪಡಿಸಿರುವಂತೆ ಪುಸ್ತಕಗಳನ್ನು ಮುದ್ರಿಸುವ ಹಾಗೂ ವಿತರಿಸುವ ವಿಷಯಗಳಿಗೆ ಸಂಬಂಧಿಸಿದಂತೆ.
  • ಕರ್ನಾಟಕ ಅರಣ್ಯ ಕಾಯಿದೆ 1963 ಮತ್ತು ಕರ್ನಾಟಕ ಅರಣ್ಯ ನಿಯಮಗಳು 1969ರಲ್ಲಿ ನೀಡಲಾಗಿರುವ ಹಕ್ಕುಗಳು ಹಾಗೂ ವಿಶೇಷಾಧಿಕಾರಗಳಿಗೆ ಸಂಬಂಧಿಸಿದ ವಿಷಯಗಳು.
  • ಜಮೀನು ಮಾಲೀಕರು ತಮ್ಮ ಸ್ವಂತ ಉಪಯೋಗಕ್ಕಾಗಿ ಬೀಟೆ ಮರವನ್ನು ಉಳಿಸಿಕೊಳ್ಳಲು ಅನುಮತಿ ನೀಡುವುದಕ್ಕೆ ಸಂಬಂಧಿಸಿದ ವಿಷಯಗಳು.
  • ಅರಣ್ಯ ಪ್ರದೇಶಗಳಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದ ವಿಷಯಗಳು. ಕೇಂದ್ರ ಪ್ರಾಯೋಜಿತ ಯೋಜನೆಯಾದ “ಅರಣ್ಯ ನಿರ್ವಹಣೆ ಚುರುಕುಗೊಳಿಸುವಿಕೆ” ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ.
  • ಕರ್ನಾಟಕ ಅರಣ್ಯ ಸಂಹಿತೆಯ ಅಧ್ಯಾಯ-ಗಿರ 150ನೇ ಪ್ಯಾರಾದಂತೆ ಅಧೀನ ಕಛೇರಿಗಳು, ವೃತ್ತಗಳು, ವಿಭಾಗಗಳು, ಉಪ-ವಿಭಾಗಗಳು, ಮರಮುಟ್ಟುಗಳ ಮತ್ತು ಶ್ರೀಗಂಧ ದಾಸ್ತಾನು ಮಳಿಗೆಗಳ ತಪಾಸಣೆ.
  • ಅರಣ್ಯ ಪ್ರದೇಶಗಲಲ್ಲಿ ಕಾರ್ಯ ಯೋಜನಾ ನಿಯಮಗಳ ಅನುಷ್ಠಾನದ ಪರಿವೀಕ್ಷಣೆ ಮತ್ತು ಮೇಲ್ವಿಚಾರಣೆ.
  • ಅರಣ್ಯವನ್ನು ಬೆಂಕಿ, ರೋಗಗಳು ಹಾಗೂ ಕ್ರಿಮಿಗಳಿಂದ ರಕ್ಷಿಸುವ ವಿಷಯಗಳಿಗೆ ಸಂಬಂಧಿಸಿದಂತೆ.
  • ಸಂಧಪಟ್ಟವರಿಗೆ ಅವಶ್ಯಕ ಸಲಹೆ, ಮಾರ್ಗದರ್ಶನ, ಅಗತ್ಯವಾದ ಸಹಕಾರ ನೀಡುವುದು ಮತ್ತು ಅರಣ್ಯ ಸಂಪನ್ಮೂಲ ನಿರ್ವಹಣೆಗಳು ಅಂದರೆ ಇ-ಟಿಂಬರ್, ಇ-ಹರಾಜು, ಸಾ ಮಿಲ್ಗಳ ಪರವಾನಗಿಯನ್ನು ಆನ್ಲೈನ್ನಲ್ಲಿ ನವೀಕರಿಸುವುದು ಹಾಗೂ ಇ-ಪರ್ಮಿಟ್ಗಳಿಗೆ ಸಂಬಂಧಪಟ್ಟ ಅಂಶಗಳಿಗೆ ವಿಶೇಷ ಒತ್ತು ನೀಡಿ ತತ್ರಾಂಶ ಅಭಿವೃದ್ಧಿಯ ಮೇಲ್ವಿಚಾರಣೆ ವಹಿಸುವುದು ಹಾಗೂ ಅದನ್ನು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅನುಷ್ಠಾನಗೊಳಿಸುವುದು.
  • ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (ಎಫ್ಆರ್ಎಂ) ಕಚೇರಿಯನ್ನು ಸ್ಥಾಪಿಸುವ ವಿಷಯಗಳಿಗೆ ಸಂಬಂಧಿಸಿದಂತೆ.
  • ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (ಎಫ್ಆರ್ಎಂ) ಕಚೇರಿಯ ಕಾನೂನು ಮತ್ತು ಲೆಕ್ಕಪರಿಶೋಧನಾ ಅಂಶಗಳಿಗೆ ಸಂಬಂಧಿಸಿದ ವಿಷಯಗಳು.
  • ಅರಣ್ಯ ಸಿಬ್ಬಂದಿಯ ಪ್ರಯೋಜನಕ್ಕಾಗಿ ಅರಣ್ಯ ಧರ್ಮ ನಿಧಿಯ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳು.
 
Unit Officers
 
Schemes
   
 
 
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?