English     ನಮ್ಮನ್ನು ಅನುಸರಿಸಿ:
 
ಜೆ.ಎಫ್.ಪಿ.ಎಮ್ ಮತ್ತು ಕೃಷಿ ಅರಣ್ಯ ಮುಖಪುಟ > ಜೆ.ಎಫ್.ಪಿ.ಎಮ್ ಮತ್ತು ಕೃಷಿ ಅರಣ್ಯ > ಗ್ರಾಮ ಅರಣ್ಯ ಸಮಿತಿ
ಗ್ರಾಮ ಅರಣ್ಯ ಸಮಿತಿಗಳು (ವಿ.ಎಫ್.ಸಿ)

ಗ್ರಾಮ ಅರಣ್ಯ ಸಮಿತಿಗಳ ರಚನೆ

ಗ್ರಾಮದ ಭಾಗಕ್ಕೆ, ಗ್ರಾಮವೊಂದಕ್ಕೆ ಅಥವಾ ಆಯ್ದ ಗ್ರಾಮಗಳ ಗುಂಪಿಗೆ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಗುವುದು. ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಯಲ್ಲಿರುವ ಹಾಗೂ ಅರಣ್ಯ ಸಂರಕ್ಷಣೆ, ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಆಸಕ್ತಿ ಹೊಂದಿರುವ ಪ್ರತಿ ವಯಸ್ಕ ಸದಸ್ಯನು ಗ್ರಾಮ ಅರಣ್ಯ ಸಮಿತಿಯ ಸಾಮಾನ್ಯ ಸಭೆಯ ಸದಸ್ಯನಾಗಲು ಅರ್ಹನಾಗಿರುತ್ತಾನೆ. 2/- ರೂಪಾಯಿಗಳನ್ನು ಗ್ರಾಮ ಅರಣ್ಯ ಸಮಿತಿಯ ಸದಸ್ಯ ಕಾರ್ಯದರ್ಶಿಗೆ ಸಂದಾಯಮಾಡಿ ಆತನು/ಆಕೆಯು ತನ್ನನ್ನು ಗ್ರಾಮ ಅರಣ್ಯ ಸಮಿತಿಯ ಸದಸ್ಯನಾಗಿ/ಳಾಗಿ ನೋಂದಾಯಿಸಿಕೊಳ್ಳಬಹುದು.

ಗ್ರಾಮ ಅರಣ್ಯ ಸಮಿತಿಗಳ ಸ್ಥಾಪನೆ

  • ಗ್ರಾಮ ಅರಣ್ಯ ಸಮಿತಿಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ, ಜೆಎಫ್ಪಿಎಂ ಯೋಜನೆಯಲ್ಲಿ ಪಲ್ಗೊಳ್ಳಲು ಆಸಕ್ತಿ ಹೊಂದಿರುವ ಗ್ರಾಮಸ್ಥರು ಕೆಲವು ಪ್ರವರ್ತಕರನ್ನು ನೇಮಿಸಿಕೊಳ್ಳಬಹುದು. ಪ್ರವರ್ತಕರುಗಳು ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳನ್ನು (ಆರ್ಎಫ್ಓ) ಸಂಪರ್ಕಿಸಬೇಕು ಹಾಗೂ ಆಸಕ್ತ ಗ್ರಾಮಸ್ಥರ ಪಟ್ಟಿಯೊಂದಿಗೆ ಜೆಎಫ್ಪಿಎಂ ಕಾರ್ಯಕ್ರಮದಲ್ಲಿ ಭಾಗವಹಿಸುವ ತಮ್ಮ ಉದ್ದೇಶವನ್ನು ಘೋಷಣೆ ಮಾಡಬೇಕು.
  • ಗ್ರಾಮ ಅರಣ್ಯ ಸಮಿತಿಯನ್ನು ಕ್ರಮವಾದ ಉಪ ಅರಣ್ಯ ಸಂರಕ್ಷಾಣಾಧಿಕಾರಿಗಳು (ಪ್ರಾಂತೀಯ) ಕರ್ನಾಟಕ ಅರಣ್ಯ ಕಾಯಿದೆಯ ಅಡಿಯಲ್ಲಿ ಸಂಘಗಳಾಗಿ ನೋಂದಾಯಿಸುತ್ತಾರೆ.

ಗ್ರಾಮ ಅರಣ್ಯ ಸಮಿತಿಯ ಆಡಳಿತ ಮಂಡಳಿ

ಗ್ರಾಮ ಅರಣ್ಯ ಸಮಿತಿಯ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ನಡೆಸಲು ಪ್ರತಿ ನೋಂದಾಯಿತ ಗ್ರಾಮ ಅರಣ್ಯ ಸಮಿತಿಗೆ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ಇರುತ್ತದೆ. ಜೆಎಫ್ಪಿಎಂ ಕಾರ್ಯವಿಧಾನಕ್ಕೆ ಬದ್ಧರಾಗಿರುವ, ಸಮುದಾಯದಲ್ಲಿ ಒಂದು ಹಂತದ ಗೌರವ, ನಂಬಿಕೆ ಹಾಗೂ ವಿಶ್ವಾಸಾರ್ಹತೆ ಹೊಂದಿರುವ ಹಾಗೂ ಗ್ರಾಮ ಅರಣ್ಯ ಸಮಿತಿಯ ಕಾರ್ಯ ಚಟುವಟಿಕೆಗಳಿಗೆ ತಮ್ಮ ಸಮಯ ಮೀಸಲಿಡಲು ಇಚ್ಛಿಸುವ ವ್ಯಕ್ತಿಗಳು ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ. ಅವರು ಗ್ರಾಮ ಅರಣ್ಯ ಸಮಿತಿಯ ಸದಸ್ಯರುಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಾರೆ ಹಾಗೂ ಗ್ರಾಮ ಅರಣ್ಯ ಸಮಿತಿಯ ಸೂಕ್ತ ಆಡಳಿತಕ್ಕೆ ಹಾಗೂ ಕ್ರಿಯಾಶೀಲ ಕಾರ್ಯಾಚರಣೆಗೆ ಜವಾಬ್ದಾರರಾಗಿರುತ್ತಾರೆ.

ಈ ಸಮಿತಿಯ ರಚನೆಯು ಕೆಳಕಂಡಂತಿರುತ್ತದೆ :

1. ಅಧ್ಯಕ್ಷರು 1
2. ಚುನಾಯಿತ ಸದಸ್ಯರು
ಪಜಾ/ಪಪಂ 2 - ಕನಿಷ್ಠ 1 ಮಹಿಳಾ ಸದಸ್ಯರು
ಭೂರಹಿತ ಕಾರ್ಮಿಕರು 2 – ಕನಿಷ್ಠ 1 ಮಹಿಳಾ ಸದಸ್ಯರು
ಗ್ರಾಮ ಕುಶಲಕರ್ಮಿಗಳು ಎನ್ಟಿಎಫ್ ಸಂಗ್ರಹಣೆದಾರರು 2 – ಕನಿಷ್ಠ 1 ಮಹಿಳಾ ಸದಸ್ಯರು
ಸಾಮಾನ್ಯ ವರ್ಗ 4 – ಕನಿಷ್ಠ 2 ಮಹಿಳಾ ಸದಸ್ಯರು
3 ಪದನಿಮಿತ್ತ ಸದಸ್ಯರು
ಗ್ರಾಮ ಲೆಕ್ಕಾಧಿಕಾರಿ 1
ಗ್ರಾಮ ಪಂಚಾಯಿತಿ ಕಾರ್ಯದರ್ಶಿ 1
ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ 1
ಸದಸ್ಯ ಕಾರ್ಯದರ್ಶಿ 1
ಒಟ್ಟು 15

ನಿರ್ವಹಣಾ ರೂಪುರೇಷೆ ಮತ್ತು ಪರಸ್ಪರ ಒಡಂಬಡಿಕೆಯ (ಎಂಓಯು) ಜ್ಞಾಪನ ಎಂದರೇನು?

ತನ್ನ ಎಲ್ಲಾ ಸದಸ್ಯರುಗಳು, ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಇತರ ಎಲ್ಲಾ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಗ್ರಾಮ ಅರಣ್ಯ ಸಮಿತಿಯು ತಯಾರಿಸುವ ಗ್ರಾಮ ಅರಣ್ಯ ಸಮಿತಿಯ ಕಾರ್ಯಚಟುವಟಿಕೆಗಳ ವಿವರವಾದ ಕ್ರಮಗಳ ರೂಪುರೇಷೆಗಳನ್ನು ನಿರ್ವಹಣಾ ರೂಪುರೇಷೆ ಎಂದು ಕರೆಯಲಾಗುತ್ತದೆ. ನಿರ್ವಹಣಾ ರೂಪುರೇಷೆಯು 10 ವರ್ಷಗಳ ಅವಧಿಗೆ ಕಾರ್ಯರೂಪದಲ್ಲಿರುತ್ತದೆ ಹಾಗೂ ಅನುಮೋದಿತ ಕಾರ್ಯಗಳ ರೂಪುರೇಷೆಗೆ ಹೊಂದಾಣಿಕೆಯಾಗುವಂತೆ 5 ವರ್ಷಗಳ ನಂತರ ಪುನರ್ವಿಮರ್ಶೆ ಮಾಡಲ್ಪಡುತ್ತದೆ.

ಜೆಎಫ್ಪಿಎಂ ಕಾರ್ಯಚಟುವಟಿಕೆಗಳಲ್ಲಿ ಅಧಿಕೃತ ಹಾಗೂ ಕಾನೂನುಬದ್ಧವಾಗಿ ಪರಸ್ಪರರು ನಿಬಂಧಿಸಲ್ಪಟ್ಟಿರುವ ಸಹಭಾಗಿತ್ವದ ಕರಾರು ಪರಸ್ಪರ ಒಡಂಬಡಿಕೆಯ ಜ್ಞಾಪನವಾಗಿರುತ್ತದೆ.

ಗ್ರಾಮ ಅರಣ್ಯ ಸಮಿತಿಯ ಕರ್ತವ್ಯ ಮತ್ತು ಜವಾಬ್ದಾರಿಗಳೇನು?

  • ಗ್ರಾಮ ಅರಣ್ಯ ಸಮಿತಿಯು ಅಂತಹ ಉದ್ದೇಶಗಳಿಗಾಗಿ ಗುರುತಿಸಲ್ಪಟ್ಟಿರುವ ಪ್ರದೇಶಗಳಿಗೆ ನಿರ್ವಹಣಾ ರೂಪುರೇಷೆಗಳನ್ನು ತಯಾರಿಸಲು ಸಹಕರಿಸತಕ್ಕದ್ದು.
  • ನಿರ್ವಹಣಾ ರೂಪುರೇಷೆಗಳಲ್ಲಿ ಸೇರಿಸಲ್ಪಟ್ಟಿರುವ ಬೀಳು ಭೂಮಿಗಳ ರಕ್ಷಣೆ, ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆ ತಯಾರಿಸಲು ಗ್ರಾಮ ಅರಣ್ಯ ಸಮಿತಿಯು ಅರಣ್ಯ ಇಲಾಖೆಗೆ ಸಹಕಾರ ನೀಡತಕ್ಕದ್ದು.
  • ಗ್ರಾಮ ಅರಣ್ಯ ಸಮಿತಿಯು ನಿರ್ವಹಣಾ ರೂಪುರೇಷೆ ಮತ್ತು ಪರಸ್ಪರ ಒಡಂಬಡಿಕೆಯ (ಎಂಓಯು) ಜ್ಞಾಪನಪತ್ರದ ಪ್ರಕಾರ ತನ್ನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಹಾಗೂ ಜೆಎಫ್ಪಿಎಂ ಪ್ರದೇಶಗಳ ನಿರ್ವಹಣೆಯಲ್ಲಿ ಮುಖ್ಯ ಪತ್ರ ವಹಿಸಬೇಕು.
  • ಜೆಎಫ್ಪಿಎಂ ಉದ್ದೇಶಕ್ಕಾಗಿ ಸೇರ್ಪಡೆಗೊಳಿಸಲಾಗಿರುವ ಯಾವುದೇ ಸರ್ಕಾರಿ ಭೂಮಿಯ ಅಭಿವೃದ್ಧಿಯಲ್ಲಿ ಸಹಾ ಗ್ರಾಮ ಅರಣ್ಯ ಸಮಿತಿಯು ಮುಖ್ಯ ಪಾÀತ್ರ ವಹಿಸಬೇಕು. ಅರಣ್ಯೀಕರಣ ಪ್ರಕರಣಗಳಲ್ಲಿ ಗ್ರಾಮ ಅರಣ್ಯ ಸಮಿತಿಯು ಭೂಮಿಯ ಗುರುತಿಸುವಿಕೆ, ಪ್ರಬೇಧಗಳ ಆಯ್ಕೆ, ರಕ್ಷಣಾ ವಿಧಾನ ಇವುಗಳಿಗೆ ಸಹಕರಿಸಬೇಕು ಹಾಗೂ ನೆಡುತೋಪುಗಳ ರಕ್ಷಣೆ ಮತ್ತು ನಿರ್ವಹಣೆಗೆ ಅಗತ್ಯವಾದ ಸಹಾಯ ಹಾಗೂ ಸಹಕಾರವನ್ನು ಸಹಾ ನೀಡಬೇಕು. ಪ್ರಮುಖವಾಗಿ ತನ್ನ ಸದಸ್ಯರುಗಳು ಅಥವಾ ತನ್ನ ಸಂಪನ್ಮೂಲಗಳಿಂದ ಗ್ರಾಮ ಅರಣ್ಯ ಸಮಿತಿಯು ನೇಮಿಸಿಕೊಂಡಿರುವ ವೇತನ ಪಡೆಯುವ ಕಾವಲುಗಾರರ ಮೂಲಕ ಮೂರು ವರ್ಷಗಳ ನಂತರ ಅಂತಹ ಭೂಮಿಗಳ ಮೆಲೆ ಬೆಳೆಸಿರುವ ಅರಣ್ಯಗಳು ಮತ್ತು ನೆಡುತೋಪುಗಳ ಪೂರ್ಣ ಪ್ರಮಾಣದ ರಕ್ಷಣೆಗೆ ಗ್ರಾಮ ಅರಣ್ಯ ಸಮಿತಿಯು ಸಂಪೂರ್ಣ ಜವಾಬ್ದಾರನಾಗಿರುತ್ತದೆ.
  • ಒತ್ತುವರಿಗಳು, ಕಾಡ್ಗಿಚ್ಚುಗಳು, ಕಾನೂನು ಬಾಹಿರ ಮರ ಕಡಿತ, ಅರಣ್ಯೋತ್ಪನ್ನಗಳ ಕಳ್ಳಸಾಗಣೆ ಹಾಗೂ ಕಾಡುಪ್ರಾಣಿಗಳ ಕಳ್ಳಬೇಟೆ ಮುಂತಾದವುಗಳನ್ನು ತಡೆಗಟ್ಟುವುದರ ಮೂಲಕ ಅರಣ್ಯ ಸಂಪೂನ್ಮೂಲಗಳನ್ನು ಅಭಿವೃದ್ಧಿಪಡಿಸಲು ಮತ್ತು ಮೇಯಿಸುವಿಕೆಯನ್ನು ನಿಯಂತ್ರಿಸುವುದು ಹಾಗೂ ಅಂತಹ ಇತರ ಕಾರ್ಯಗಳ ಮೂಲಕ ಅರಣ್ಯಗಳನ್ನು ಸಮೃದ್ಧಗೊಳಿಸಲು ಗ್ರಾಮ ಅರಣ್ಯ ಸಮಿತಿಯು ಮುಖ್ಯ ಪಾತ್ರ ವಹಿಸತಕ್ಕದ್ದು.
  • ನಿರ್ವಹಣಾ ರೂಪುರೇಷೆಯನ್ನು ಅನುಷ್ಠಾನಗೊಳಿಸಲು ಗ್ರಾಮ ಅರಣ್ಯ ಸಮಿತಿಯು ಸರ್ಕಾರ, ಅರಣ್ಯ ಅಭಿವೃದ್ಧಿ ಸಂಸ್ಥೆ ಹಾಗೂ ಇತರ ಅಭಿವೃದ್ಧಿ ಸಂಸ್ಥೆಗಳಿಂದ ನಿಧಿಯನ್ನು ಪಡೆದುಕೊಳ್ಳತಕ್ಕದ್ದು.

ಅರಣ್ಯೀಕರಣ ಚಟುವಟಿಕೆಗಳಲ್ಲಿ ಜನರ ಸಕ್ರಿಯ ಭಾಗವಹಿಸುವಿಕೆಗಾಗಿ, ಭಾರತ ಸರ್ಕಾರದ ಮಾರ್ಗಸೂಚಿಗಳಂತೆ, ಒಂದು ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ ಎಂಬ ಯೋಜನೆಯನ್ನು ಮಂಜೂರು ಮಾಡಲಾಗಿದೆ.

ಇದು ತಮ್ಮ ವ್ಯಾಪ್ತಿಯ ಅಳಿದುಹೋಗಿರುವ ಅರಣ್ಯ ಪ್ರದೇಶಗಳ ರಕ್ಷಣೆ ಹಾಗೂ ನಿರ್ವಹಣೆಗಾಗಿ ರೂಪುರೇಷೆ ತಯಾರಿಕೆ ಹಾಗೂ ನಿರ್ವಹಣಾ ರೂಪುರೇಷೆಯ ಜಾರಿಯಂತಹ ಅರಣ್ಯ ನಿರ್ವಹಣೆಯ ವಿವಿಧ ಅಂಶಗಳೊಂದಿಗೆ ಸಂಯೋಜಿತವಾಗಿರುವ ಗ್ರಾಮ ಅರಣ್ಯ ಸಮಿತಿಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

2005-06ರ ಅವಧಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳನ್ನು ಸ್ಥಾಪಿಸಲು ಗುರುತಿಸಲ್ಪಟ್ಟಿರುವ ಗ್ರಾಮಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?