English     ನಮ್ಮನ್ನು ಅನುಸರಿಸಿ:
 
ಜೆ.ಎಫ್.ಪಿ.ಎಮ್ ಮತ್ತು ಕೃಷಿ ಅರಣ್ಯ ಮುಖಪುಟ > ಜೆ.ಎಫ್.ಪಿ.ಎಮ್ ಮತ್ತು ಕೃಷಿ ಅರಣ್ಯ > ಮರ ಪಟ್ಟಾ
ಮರ ಪಟ್ಟಾ (ಸಆ ಸಂಖ್ಯೆ ಎಫ್ಇಇ 50 ಎಫ್ಎಪಿ 2000 ದಿನಾಂಕ : 19/6/2002)

ಪ್ರಸ್ತಾವನೆ

ಈ ಯೋಜನೆಯು ನಗರ ಪ್ರದೇಶಗಳೂ ಸೇರಿದಂತೆ ರಸ್ತೆಬದಿಗಳು, ಕಾಲುವೆ ದಡಗಳು ಹಾಗೂ ಅದೇ ರೀತಿಯ ಇತರ ಸ್ಥಳಗಳಲ್ಲಿ ಮರಗಳ ರಕ್ಷಣೆ, ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಹಾಗೂ ಫಲಾನುಭವಿಗಳು/ಸದಸ್ಯರು/ಸಂಘಸಂಸ್ಥೆಗಳು ಹಾಗೂ ಅರಣ್ಯ ಇಲಾಖೆಯ ಮಧ್ಯೆ ಅರಣ್ಯ ಉತ್ಪನ್ನವನ್ನು ಹಂಚಿಕೊಳ್ಳುವ ಉದ್ದೇಶಕ್ಕಾಗಿ ಇರುತ್ತದೆ.

  1. ಕಾನೂನುಬದ್ಧವಾಗಿ ರಚಿತವಾದ ಅಥವಾ ಉದ್ದೇಶಿತ ಅರಣ್ಯಗಳ ಹೊರಗೆ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಿಂದ ನಿರ್ವಹಿಸಲ್ಪಡುತ್ತಿರುವ ಅರಣ್ಯ ಇಲಾಖೆಯ ವಶದಲ್ಲಿರುವ ರಸ್ತೆಬದಿಗಳು, ಕಾಲುವೆ ದಡಗಳಲ್ಲಿ ಬೆಳೆಸಿರುವ ಮರಗಳು ಈ ಉದ್ದೇಶಕ್ಕಾಗಿ ಲಭ್ಯವಿರುತ್ತವೆ.
  2. ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ನೆರೆಯ ಭೂಮಾಲೀಕರಿಗೆ “ಮರ ಪಟ್ಟಾಗಳನ್ನು” ಮಂಜೂರು ಮಾಡಲು ಉದ್ದೇಶಿಸಲಾಗಿದೆ.
  3. ಗ್ರಾಮೀಣ ಪ್ರದೇಶಗಳಲ್ಲಿ ಪಟ್ಟಾ ಯೋಜನೆಗೆ ಮರಗಳಿಗೆ ಹೊಂದಿಕೊಂಡಿರುವ ಖಾಸಗಿ ಜಮೀನುಗಳು ಅರ್ಹವಾಗಿಲ್ಲದಿದ್ದಲ್ಲಿ ಅಥವಾ ಯಾವುದೇ ವ್ಯಕ್ತಿಯು “ಮರ ಪಟ್ಟಾ” ಸೌಲಭ್ಯವನ್ನು ಪಡೆದುಕೊಳ್ಳಲು ಇಚ್ಛಿಸದಿದ್ದಲ್ಲಿ, ಅವುಗಳ ನಿರ್ವಹಣಾ ಜವಾಬ್ದಾರಿಯನ್ನು ಗ್ರಾಮ ಅರಣ್ಯ ಸಮಿತಿಗೆ ವಹಿಸಲಾಗುತ್ತದೆ. ಗ್ರಾಮ ಅರಣ್ಯ ಸಮಿತಿಯೂ ಸಹಾ ಇಚ್ಛಿಸದೇ ಇದ್ದ ಪಕ್ಷದಲ್ಲಿ ಅರಣ್ಯ ಇಲಾಖೆಯು ಮರಗಳನ್ನು ನಿರ್ವಹಿಸತಕ್ಕದ್ದು. ನಗರ ಪ್ರದೇಶಗಳಲ್ಲಿ ವ್ಯಕ್ತಿಗಳು ಯೋಜನೆಯನ್ನು ಪಡೆದುಕೊಳ್ಳಲು ಇಚ್ಛಿಸದಿದ್ದಲ್ಲಿ, ಅರಣ್ಯ ಇಲಾಖೆಯು ನಿರ್ವಹಿಸುತ್ತದೆ.
  4. ಮರ ಪಟ್ಟಾ ಹೊಂದಿರುವವರಿಗೆ/ಗ್ರಾಮ ಅರಣ್ಯ ಸಮಿತಿಗೆ ಹುಣಿಸೆ, ಹಿಪ್ಪೆ, ಮಾವು, ನೇರಳೆ, ಆಲ, ಅರಳಿ, ಹೊಂಗೆ, ಬೇವು, ಬಾಗೆ, ಸಿಸೂ, ಹಲಸು ಮುಂತಾದ ನಿಧಾನವಾಗಿ ಬೆಳೆಯುವ ಪ್ರಬೇಧಗಳಿಗೆ ಪ್ರತಿ ಮರಕ್ಕೆ ಸಾಂಕೇತಿಕ ಬಾಡಿಗೆಯಾದ 10/- ರೂಪಾಯಿಗಳನ್ನು (ಒಂದು ಬಾರಿ ಪಾವತಿ) ವಿಧಿಸಲಾಗುವುದು.
  5. ಮರ ಪಟ್ಟಾ ಹೊಂದಿರುವವರಿಗೆ/ಗ್ರಾಮ ಅರಣ್ಯ ಸಮಿತಿಗೆ ನೀಲಗಿರಿ, ಸರ್ವೆ, ಅಕೇಶಿಯಾ ಮುಂತಾದ ಶೀಘ್ರವಾಗಿ ಬೆಳೆಯುವ ಪ್ರಬೇಧಗಳಿಗೆ ಪ್ರತಿ ಮರಕ್ಕೆ ಸಾಂಕೇತಿಕ ಬಾಡಿಗೆಯಾದ 5/- ರೂಪಾಯಿಗಳನ್ನು (ಒಂದು ಬಾರಿ ಪಾವತಿ) ವಿಧಿಸಲಾಗುವುದು.
  6. ಗ್ರಾಮೀಣ ಪ್ರದೇಶಗಳ ಪ್ರಕರಣಗಳಲ್ಲಿ ಭೂಮಿ ಮಾಲೀಕತ್ವ ಹೊಂದಿರುವ ಇಲಾಖೆ/ಏಜೆನ್ಸಿ, ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರೊಂದಿಗೆ ಚರ್ಚಿಸಿದ ನಂತರ ವಲಯ ಅರಣ್ಯಾಧಿಕಾರಿಗಳು ಉದ್ದೇಶಿತ ಮರ ಪಟ್ಟಾ ಹೊಂದುವವರ ಪಟ್ಟಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಳಿಸುತ್ತಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸೂಚನೆಯಡಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮರ ಪಟ್ಟಾ ಪ್ರಮಾಣಪತ್ರವನ್ನು ನೀಡುತ್ತಾರೆ. ನಗರ ಪ್ರದೇಶಗಳ ಪ್ರಕರಣಗಳಲ್ಲಿ ಭೂಮಿ ಮಾಲೀಕತ್ವ ಹೊಂದಿರುವ ಇಲಾಖೆ/ಏಜೆನ್ಸಿ ಮತ್ತು ಲಭ್ಯವಿದ್ದಲ್ಲಿ ವೃಕ್ಷ ವಾರ್ಡನ್ಗಳೊಂದಿಗೆ ಚರ್ಚಿಸಿದ ನಂತರ ವಲಯ ಅರಣ್ಯಾಧಿಕಾರಿಗಳು ಉದ್ದೇಶಿತ ಮರ ಪಟ್ಟಾ ಹೊಂದುವವರ ಪಟ್ಟಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಳಿಸುತ್ತಾರೆ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸೂಚನೆಯಡಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮರ ಪಟ್ಟಾ ಪ್ರಮಾಣಪತ್ರವನ್ನು ನೀಡುತ್ತಾರೆ.
  7. ಮರಗಳನ್ನು ತನ್ನ ಖರ್ಚಿನಲ್ಲಿ ನಿರ್ವಹಣೆ ಮಾಡಿದ ಪಕ್ಷದಲ್ಲಿ, ಮರಗಳ ಉಪಯೋಗಕರ ಭಾಗಗಳು ಹಾಗೂ ಎನ್ಟಿಎಫ್ಪಿ/ಫಲಗಳನ್ನು ಮರ ಪಟ್ಟಾ ಹೊಂದಿರುವವನು ಉಚಿತವಾಗಿ ಬಳಸಿಕೊಳ್ಳಬಹುದು.
  8. ಸಂಬಂಧಪಟ್ಟ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಲಿಖಿತ ಪೂರ್ವಾನುಮತಿಯಿಲ್ಲದೆ ಮರಗಳನ್ನು ಕಡಿಯುವಂತಿಲ್ಲ. ಕಡಿಯುವ ಅನುಮತಿಯು ಸ್ಥಳೀಯ ಹಾಗೂ ವೃಕ್ಷವೃದ್ಧಿ ಮತ್ತು ಪಾಲನೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಇರತಕ್ಕದ್ದು. ಅಂತಹ ಅನುಮತಿಯನ್ನು ನೀಡಿದಾಗ, ಉತ್ಪನ್ನವನ್ನು ಮರ ಪಟ್ಟಾ ಹೊಂದಿರುವವರು ಮತ್ತು ಸರ್ಕಾರವು 75:25ರ ಅನುಪಾತದಲ್ಲಿ ಹಂಚಿಕೊಳ್ಳತಕ್ಕದ್ದು. ಅನುಮತಿ ನೀಡುವುದು ಮರ ಪಟ್ಟಾ ಹೊಂದಿರುವವರು ಪ್ರದೇಶದಲ್ಲಿ ಮತ್ತೆ ಸಸಿ ನೆಡುವುದಕ್ಕೆ ಒಪ್ಪಿಕೊಳ್ಳುವುದಕ್ಕೆ ಹಾಗೂ ಆತನ ಮತ್ತು ಸಂಬಂಧಪಟ್ಟ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಡುವೆ ಒಪ್ಪಂದವಾದ ರೀತಿಗೆ ಸಹಾ ಒಳಪಟ್ಟಿರುತ್ತದೆ.
  9. ಈ ಯೋಜನೆ ಅಡಿಯಲ್ಲಿ ಮರಗಳನ್ನು ಎಣಿಕೆ, ಪಟ್ಟಿ ಮಾಡಲಾಗುವುದು ಹಾಗೂ ಮರ ಪಟ್ಟ ಹೊಂದಿರುವವರಿಗೆ ಹಸ್ತಾಂತರಿಸಲಾಗುವುದು.
  10. “ಮರ ಪಟ್ಟಾ” ಯೋಜನೆಯ ಮಂಜೂರು ಅಥವಾ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲಾ ವ್ಯಾಜ್ಯಗಳನ್ನು ಸಂಬಂಧಪಟ್ಟ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿಗಳಿಗೆ ಒಪ್ಪಿಸತಕ್ಕದ್ದು ಹಾಗೂ ಅವರ ನಿರ್ಧಾರ ಮರ ಪಟ್ಟಾ ಹೊಂದಿರುವವರು/ಗ್ರಾಮ ಅರಣ್ಯ ಸಮಿತಿಗೆ ಅಂತಿಮವಾಗಿರುತ್ತದೆ ಹಾಗೂ ಅದಕ್ಕೆ ಬದ್ಧರಾಗಿರತಕ್ಕದ್ದು.

ಅರಣ್ಯ ಉತ್ಪನ್ನಗಳನ್ನು ಹಂಚಿಕೊಳ್ಳುವುದು

ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು/ಸದಸ್ಯರು/ಸಂಘಸಂಸ್ಥೆಗಳು ಕರ್ನಾಟಕ ಅರಣ್ಯ ಇಲಾಖೆಯ (ಕೆಎಫ್ಡಿ) ವಶದಲ್ಲಿರುವ ಮರಗಳಲ್ಲಿನ ಶೇಕಡಾ 100%ಷ್ಟು ಉಪಯುಕ್ತ ಉತ್ಪನ್ನಗಳಿಗೆ ಹಕ್ಕುದಾರರಾಗಿರುತ್ತಾರೆ. ಅಂತಿಮ ಕಟಾವಿನ ಫಲವನ್ನು ಫಲಾನುಭವಿಗಳು/ಸದಸ್ಯರು/ಸಂಘಸಂಸ್ಥೆಗಳು ಹಾಗೂ ಸರ್ಕಾರವು 75:25ರ ಅನುಪಾತದಲ್ಲಿ ಹಂಚಿಕೊಳ್ಳತಕ್ಕದ್ದು.


 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?