English     ನಮ್ಮನ್ನು ಅನುಸರಿಸಿ:
 
ಅರಣ್ಯ ಮುಖಪುಟ > ಸ್ಕೀಮ್ಸ್ ಮತ್ತು ಯೋಜನೆಗಳು > ರೂಪುರೇಷೆ ಯೋಜನೆಗಳು
ರೂಪುರೇಷೆ ಯೋಜನೆಗಳು
1. 2406-01-004-0-01 - ಅರಣ್ಯ ಸಂಶೋಧನೆ - ಎಪಿಸಿಸಿಎಫ್ ಸಂಶೋಧನೆ
Theಈ ಯೋಜನೆಯ ಮುಖ್ಯ ಉದ್ದೇಶವೆಂದರೆ ವೃಕ್ಷ ಸಂರಕ್ಷಣೆಯ ಸ್ಥಳಗಳನ್ನು ಸ್ಥಾಪಿಸುವುದು ಹಾಗೂ ನಿರ್ವಹಿಸುವುದು, ಕಸಿಮಾಡಿದ ಹಣ್ಣಿನ ತೋಟಗಳನ್ನು ಬೆಳೆಸುವುದು ಹಾಗೂ ನಿರ್ವಹಿಸುವುದು, ವೃಕ್ಷವೃದ್ಧಿಯ ಸಂಶೋಧನಾ ಸ್ಥಳಗಳು, ಪ್ರಬೇಧಗಳ ಪ್ರಯೋಗ ಸ್ಥಳಗಳು, ಗಿಡಬಳ್ಳಿ ಚೌಕಟ್ಟು ಹಾಗೂ ಗೊಬ್ಬರ ಪ್ರಯೋಗ ಸ್ಥಳಗಳು ಮತ್ತು ಬೀಜ ಅಭಿವೃದ್ಧಿ. ಬೀಜಾಂಕುರ ಸಸ್ಯಗಳನ್ನು ಬೆಳೆಸಲು ಉತ್ತಮ ಗುಣಮಟ್ಟದ ಬೀಜಗಳನ್ನು ಗುರುತಿಸಲಾಗುತ್ತದೆ ಹಾಗೂ ಪೂರೈಸಲಾಗುತ್ತದೆ. ಇದಲ್ಲದೆ, ತೋಟದ ಅರಣ್ಯ ಹಾಗೂ ಕಸಿ ಮಾಡಿದ ಹುಣಿಸೆ, ಹಲಸು ಮತ್ತು ಇತರ ಪ್ರಬೇಧಗಳ ಬೀಜಾಂಕುರ ಸಸಿಗಳ ಬಗ್ಗೆ ಸಂಶೋಧನಾ ಕಾರ್ಯ ಕೈಗೊಂಡು ಅವುಗಳನ್ನು ಬೆಳೆಸಿ ರೈತರಿಗೆ ಪೂರೈಸಲಾಗುವುದು.
2. 2406-01-00ಎಸ್-0-02 ಸಂಸ್ಥೆ ಕಾರ್ಯ ಯೋಜನೆ - ಎಪಿಸಿಸಿಎಫ್ ಡಬ್ಲ್ಯೂಪಿ
ಮೀಸಲು ಅರಣ್ಯವನ್ನು ರಕ್ಷಿಸುವುದು ಅರಣ್ಯ ಇಲಾಖೆಯ ಪ್ರಮುಖ ಕಾರ್ಯವಾಗಿರುತ್ತದೆ. ಈ ಉದ್ದೇಶಕ್ಕಾಗಿ ಮೀಸಲು ಅರಣ್ಯಗಳನ್ನು ಸರ್ವೆ ಮಾಡಲಾಗುತ್ತದೆ ಹಾಗೂ ಆರ್ಎಫ್ ಕಲ್ಲುಗಳನ್ನು ನೆಡುವುದರ ಅಥವಾ ಕಲ್ಲುಗಳ ದಿಬ್ಬಗಳನ್ನು ನಿರ್ಮಿಸುವುದರ ಮೂಲಕ ಭೂ ಪ್ರದೇಶದ ಮೇಲೆ ಅವುಗಳನ್ನು ಗುರುತು ಮಾಡಲಾಗುತ್ತದೆ. ಕಂದಾಯ ಇಲಾಖೆಯಿಂದ ವಶಕ್ಕೆ ಪಡೆದುಕೊಂಡ ಸಿ ಮತ್ತು ಡಿ ವರ್ಗದ ಭೂಮಿಯನ್ನೂ ಸಹಾ ಸರ್ವೆ ಮಾಡಲಾಗುತ್ತದೆ ಮತ್ತು ಭೂ ಪ್ರದೇಶದ ಮೇಲೆ ಅವುಗಳನ್ನು ಗುರುತು ಮಾಡಲಾಗುತ್ತದೆ. ಜೊತೆಗೆ, ಮೀಸಲು ಅರಣ್ಯಗಳ ಭಾಗದ ಎಲ್ಲೆಗಳನ್ನೂ ಸಹಾ ಸರ್ವೆ ಮಾಡಲಾಗುತ್ತದೆ ಹಾಗೂ ಗುರುತು ಮಾಡಲಾಗುತ್ತದೆ. ಮರಗಳ ಬೆಳವಣಿಗೆಯನ್ನು ಗಣತಿ ಮಾಡಲು ಮೀಸಲು ಅರಣ್ಯಗಳ ಭಾಗಗಳಲ್ಲಿ ಮಾದರಿ ಸಮೀಕ್ಷೆ ಸಹಾ ಕೈಗೊಳ್ಳಲಾಗುತ್ತದೆ.
3. 2406-01-013-0-01 – ಅರಣ್ಯ ಇಲಾಖೆಯ ಗಣಕೀಕರಣ - ಎಪಿಸಿಸಿಎಫ್ ಸಿ ಮತ್ತು ಐ ನೇತೃತ್ವದಲ್ಲಿ
ಈ ಯೋಜನೆಯ ಅಡಿಯಲ್ಲಿ ಅರಣ್ಯ ಇಲಾಖೆಯ ಇಲಾಖಾ ಲೆಕ್ಕಪತ್ರಗಳು ಹಾಗೂ ಇತರ ಅಂಕಿ ಅಂಶಗಳ ಮಾಹಿತಿಗಳನ್ನು ಗಣಕೀಕೃತಗೊಳಿಸಲು ಗಣಕಯಂತ್ರ ಮೂಲಸೌಕರ್ಯವನ್ನು ಒದಗಿಸಲಾಗುವುದು. ಎಂಐಎಸ್ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಎಲ್ಎಂಎಸ್ ಹಾಗೂ ಎಫ್ಎಂಎಸ್ ತತ್ರಾಂಶಗಳನ್ನು ತಯಾರಿಸಿದೆ ಹಾಗೂ ಅವುಗಳನ್ನು ಅರಣ್ಯ ಭವನದ ಸರ್ವರ್ನಲ್ಲಿ ಅಳವಡಿಸಿದೆ. ಈ ಯೋಜನೆಯ ಅಡಿಯಲ್ಲಿ ತತ್ರಾಂಶವನ್ನು ಉಪಯೋಗಿಸಲು ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
4. 2406-01-101-0-04 ಪಶ್ಚಿಮ ಘಟ್ಟಗಳ ಕಾರ್ಯಪಡೆ
ಪಶ್ಚಿಮ ಘಟ್ಟಗಳ ಜೈವಿಕ ಪರಿಸರ ವ್ಯವಸ್ಥೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸಂಬಂಧಪಟ್ಟ ಕಾರ್ಯಚಟುವಟಿಕೆಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ಪಶ್ಚಿಮ ಘಟ್ಟಗಳ ಕಾರ್ಯಪಡೆ ಎಂಬ ಹೆಸರಿನ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ.
5. 2406-01-101-0ಎಸ್– ಅವನತಿ ಹೊಂದಿರುವ ಅರಣ್ಯಗಳ ಅಭಿವೃದ್ಧಿ - ಎಪಿಸಿಸಿಎಫ್ ಅಭಿವೃದ್ಧಿ
ವಿವಿಧ ರೀತಿಯ ಜೈವಿಕ ಒತ್ತಡದಿಂದಾಗಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅರಣ್ಯ ಪ್ರದೇಶವು ಅವನತಿ ಹೊಂದಿರುತ್ತದೆ ಹಾಗೂ ಈ ಯೋಜನೆಯ ಅಡಿಯಲ್ಲಿ ಅಂತಹ ಪ್ರದೇಶಗಳನ್ನು ನಿಭಾಯಿಸಲಾಗುವುದು. ಈ ಯೋಜನೆಯ ಅಡಿಯಲ್ಲಿ ಕಾಡು ಬೆಳೆಸುವಿಕೆ ಹಾಗೂ ಇತರ ವಿವಿಧ ಕ್ರಮಗಳಾದ ರಕ್ಷಣೆ, ಪುನರುಜ್ಜೀವನ ಹಾಗೂ ಮಣ್ಣು ಮತ್ತು ಜಲ ಸಂರಕ್ಷಣೆಯ ಮೂಲಕ ಅವನತಿ ಹೊಂದಿರುವ ಕಾಡುಗಳನ್ನು ಪುನಶ್ಚೇತನಗೊಳಿಸಲಾಗುವುದು. ಎಲ್ಲೆಲ್ಲಿ ಸಾಕಷ್ಟು ಬೇರಿನ ಭದ್ರ ಮೂಲವಿದೆಯೋ ಅಂತಹ ಪ್ರದೇಶಗಳನ್ನು ಜೈವಿಕ ಒತ್ತಡದಿಂದ ರಕ್ಷಿಸುವುದರ ಮೂಲಕ ಪ್ರಾಕೃತಿಕ ಪುನರುಜ್ಜೀವನವನ್ನು ಪೆÇ್ರೀತ್ಸಾಹಿಸಲಾಗುತ್ತದೆ. ಪರ್ಯಾಯವಾಗಿ ಇತರ ಪ್ರದೇಶಗಳಲ್ಲಿ ನೆಡುತೋಪುಗಳನ್ನು ಬೆಳೆಸಬೇಕಾಗುತ್ತದೆ. ಈ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಗತಗೊಳಿಸಲಾಗಿದೆ.
6. 2406-01-101-2-10 – ನಗರ ಪ್ರದೇಶಗಳನ್ನು ಹಸಿರಾಗಿಸುವುದು - ಎಪಿಸಿಸಿಎಫ್ ಅಭಿವೃದ್ಧಿ
ಈ ಯೋಜನೆಯ ಅಡಿಯಲ್ಲಿ ನಗರ ಪ್ರದೇಶಗಳಲ್ಲಿ ಹೂವು ಬಿಡುವ ಮತ್ತು ಹಣ್ಣುಗಳನ್ನು ಹೊಂದುವ ಸಸ್ಯಗಳನ್ನು ನೆಡಲು ಚಿಂತಿಸಲಾಗಿದೆ. ರಾಜ್ಯದ ಪಟ್ಟಣಗಳು ಹಾಗೂ ನಗರಗಳಲ್ಲಿ ವೃಕ್ಷ ಉದ್ಯಾನ ಹಾಗೂ ಮಾರ್ಗ ಬದಿಯ ನೆಡುತೋಪುಗಳನ್ನು ಸ್ಥಾಪಿಸಲಾಗುವುದು. ನಗರ ಪ್ರದೇಶದ ವಾಸಿಗಳಿಗೆ ಸಸ್ಯ ಸಸಿಗಳನ್ನು ಸಹಾ ಪೂರೈಸಲಾಗುವುದು.
7. 2406-01-101-2-11 – ಅರಣ್ಯ ರಕ್ಷಣೆ - ಪಿಸಿಸಿಎಫ್ (ಹೆಚ್ಓಎಫ್ಎಫ್) ಹಾಗೂ ಎಪಿಸಿಸಿಎಫ್ (ಹೆಚ್ಕ್ಯೂ ಮತ್ತು ಸಿ)
ಈ ಯೋಜನೆಯು, ರಕ್ಷಣಾ ಸಿಬ್ಬಂದಿಯು ಸಂಘಟಿತ ಕಳ್ಳಸಾಗಣೆ ಹಾಗೂ ಅರಣ್ಯ ಸಿಬ್ಬಂದಿಯ ಮೇಲೆ ಆಕ್ರಮಣವನ್ನು ಹತ್ತಿಕ್ಕಲು ನೆರವಾಗುವಂತೆ ವಾಹನಗಳು, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳು, ಸಲಕರಣೆಗಳು ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತದೆ. ಅರಣ್ಯ ಸಂಪತ್ತನ್ನು ರಕ್ಷಿಸಲು ಹಾಗೂ ವನ್ಯಮೃಗಗಳ ಕಳ್ಳಬೇಟೆಯನ್ನು ತಡೆಯಲು ಆಯಕಟ್ಟಿನ ಸ್ಥಳಗಳಲ್ಲಿ ಅರಣ್ಯ ಅಧಿಕಾರಿಗಳು ಮತ್ತು ದಿನಗೂಲಿ ಕೆಲಸಗಾರರು ರಕ್ಷಣೆ/ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸಂಘಟಿಸಲು ಅವಕಾಶಮಾಡಿಕೊಡುತ್ತದೆ.
8. 2406-01-101-2-20 ಅರಣ್ಯ ಸಂಪತ್ತನ್ನು ರಕ್ಷಿಸಲು 13ನೇ ಹಣಕಾಸು ಆಯೋಗದ ಅನುದಾನಗಳು - ಪಿಸಿಸಿಎಫ್ (ಹೆಚ್ಓಎಫ್ಎಫ್)ಹಾಗೂ ಎಪಿಸಿಸಿಎಫ್ (ಹೆಚ್ಕ್ಯೂ)
9.2406-01-101-2-23 – ಔಷದೀಯ ಸಸ್ಯಗಳ ಸಂರಕ್ಷಣಾ ಪ್ರದೇಶಗಳ ನಿರ್ವಹಣೆ ಹಾಗೂ ಔಷದೀಯ ಸಸ್ಯಗಳ ಅಭಿವೃದ್ಧಿ ಪ್ರದೇಶಗಳು - ಪಿಸಿಸಿಎಫ್ (ಹೆಚ್ಓಎಫ್ಎಫ್) ಹಾಗೂ ಎಪಿಸಿಸಿಎಫ್ (ಹೆಚ್ಕ್ಯೂ)
ಈ ಯೋಜನೆಯ ಅಡಿಯಲ್ಲಿ ಔಷಧೀಯ ಸಸ್ಯಗಳ ಮತ್ತು ಸಂರಕ್ಷಣಾ ಪ್ರದೇಶಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಹಾಗೂ ಅಪರೂಪದ ಮತ್ತು ಅಪಾಯದ ಅಂಚಿನಲ್ಲಿರುವ ಪ್ರಬೇಧಗಳ ಅಭಿವೃದ್ಧಿಗಾಗಿ 13 ಔಷಧೀಯ ಸಸ್ಯಗಳ ಸಂರಕ್ಷಣಾ ಪ್ರದೇಶಗಳನ್ನು (ಎಂಪಿಸಿಎ) ಮತ್ತು ಔಷಧೀಯ ಸಸ್ಯಗಳ ಅಭಿವೃದ್ಧಿ ಪ್ರದೇಶಗಳನ್ನು (ಎಂಪಿಡಿಎ) ನಿರ್ವಹಿಸಲು ಉದ್ದೇಶಿಸಲಾಗಿದೆ.
10. 2406-01-101-2-24 – ಶ್ರೀಗಂಧ ನೆಡುತೋಪುಗಳನ್ನು ಬೆಳೆಸುವುದು - ಪಿಸಿಸಿಎಫ್ ಅಭಿವೃದ್ಧಿ
ಪಾರಂಪರಿಕ ಶ್ರೀಗಂಧ ಪ್ರದೇಶಗಳಲ್ಲಿ ಶ್ರೀಗಂಧದ ತೋಪುಗಳು ಮತ್ತು ಪ್ರಾಕೃತಿಕ ಶ್ರೀಗಂಧ ಹೊಂದಿರುವ ಪ್ರದೇಶಗಳನ್ನು ನಿರ್ವಹಿಸುವುದು ಹಾಗೂ ರಕ್ಷಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
11. 2406-01-101-2-26 ದೇವರಕಾಡುಗಳ (ದೈವೀವನಗಳು) ಅಭಿವೃದ್ಧಿ ಮತ್ತು ರಕ್ಷಣೆ - ಪಿಸಿಸಿಎಫ್ (ಹೆಚ್ಓಎಫ್ಎಫ್) ಹಾಗೂ ಎಪಿಸಿಸಿಎಫ್ (ಹೆಚ್ಕ್ಯೂ)
ದೇವರಕಾಡು ಅರಣ್ಯಗಳು ತುಂಬಾ ವಿಶಿಷ್ಟವಾದವು ಹಾಗೂ ಧಾರ್ಮಿಕ ಮತ್ತು ಜೈವಿಕ-ವ್ಯವಸ್ಥೆಯ ದೃಷ್ಠಿಯಿಂದ ಪ್ರಮುಖವಾದವು. ಪವಿತ್ರ ತೋಪುಗಳಾಗಿ, ಅವುಗಳು ಕಲುಷಿತವಾಗದ ಸ್ಥಿತಿಯಲ್ಲಿ ಅಮೂಲ್ಯವಾದ ಜೈವಿಕ-ವ್ಯವಸ್ಥೆಗಳನ್ನು ಸಂರಕ್ಷಿಸಲು ಮತ್ತು ಯಾವುದೇ ಅಡೆತಡೆ ಇಲ್ಲದೆ ಅವುಗಳು ತಮ್ಮ ಸ್ವಾಭಾವಿಕವಾದ ವಿಕಸನ ಕ್ರಿಯೆಯನ್ನು ಹೊಂದಲು ಅನುಕೂಲವಾಗುವಂತೆ ಈ ಯೋಜನೆಯನ್ನು ಆರಂಭಿಸಲಾಗಿದೆ.
ಇದಲ್ಲದೆ ಈ ಯೋಜನೆಯ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ದೈವೀವನದ ಅಭಿವೃದ್ಧಿ ಮತ್ತು ರಕ್ಷಣೆಯನ್ನು ಕೈಗೆತ್ತಿಕೊಳ್ಳಲಾಗಿದೆ.
12. 2406-01-101-2-29 - ಬೆಂಗಳೂರು ಹಾಗೂ ಇತರ ನಗರ ಪ್ರದೇಶಗಳಲ್ಲಿ ಒತ್ತುವರಿ ತಡೆಯುವಿಕೆ ಮತ್ತು ಅರಣ್ಯ ಭೂಮಿಗಳ ಕ್ರೋಢೀಕರಣ- ಪಿಸಿಸಿಎಫ್ (ಹೆಚ್ಓಎಫ್ಎಫ್) ಹಾಗೂ ಎಪಿಸಿಸಿಎಫ್ (ಎಲ್ಆರ್)
ಆದ್ಯತೆಯ ಆಧಾರದ ಮೇಲೆ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿನ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕು ಹಾಗೂ ಭವಿಷ್ಯದಲ್ಲಿ ಒತ್ತುವರಿಯನ್ನು ತಡೆಗಟ್ಟಲು ಶೀಘ್ರ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿರುತ್ತದೆ. ನಗರ ಭೂಮಿಗಳ ಮೌಲ್ಯ ಹೆಚ್ಚುತ್ತಿರುವುದರಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಆರ್ಸಿಸಿ ಕಂಬಗಳನ್ನು ಹೊಂದಿರುವ ಪರಸ್ಪರ ಜೋಡಣೆಯ ಜಾಲವಿರುವ ಬೇಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಕಾಂಪೌಂಡ್ ಗೋಡೆ ಅವಶ್ಯಕ. ಬೇಲಿ/ಗೋಡೆಯನ್ನು ಅರಣ್ಯ ಭೂಮಿಯ ಸುತ್ತಲೂ ನಿರ್ಮಿಸಬೇಕು.
13. 2406-01-102-2-18 ರಸ್ತೆ ಬದಿಯ ನೆಡುತೋಪು - ಎಪಿಸಿಸಿಎಫ್ ಅಭಿವೃದ್ಧಿ
2000ನೇ ಇಸವಿಯಿಂದ ರಸ್ತೆಗಳ ಅಗಲೀಕರಣದ ಉದ್ದೇಶಕ್ಕಾಗಿ ಬಹಳಷ್ಟು ಮರಗಳನ್ನು ಕಡಿಯಲಾಗಿದೆ. ಆದ್ದರಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ತುರ್ತಾಗಿ ರಸ್ತೆ ಬದಿಯ ನೆಡುತೋಪುಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಈ ಉದ್ದೇಶಕ್ಕಾಗಿ ಕರ್ನಾಟಕ ಅರಣ್ಯ ಇಲಾಖೆಯು ರಸ್ತೆ ಬದಿಯ ನೆಡುತೋಪುಗಳನ್ನು ಬೆಳೆಸುವುದಕ್ಕೆ ಹೊಸ ಯೋಜನೆಯೊಂದನ್ನು ಕಾರ್ಯಗತಗೊಳಿಸಿದೆ. ರಸ್ತೆ ಬದಿಯ ನೆಡುತೋಪು ಕಾರ್ಯಕ್ರಮದ ಅಡಿಯಲ್ಲಿ ಸಾಮಾನ್ಯವಾದ ರಸ್ತೆ ಬದಿ ಸಸಿ ನೆಡುವ ಕಾಮಗಾರಿಯಷ್ಟೇ ಅಲ್ಲದೆ ಎಸ್ಸಿಪಿ ಮತ್ತು ಟಿಎಸ್ಪಿ ಉಪಾಂಗ ಕಾಮಗಾರಿಗಳನ್ನೂ ಸಹಾ ಕೈಗೆತ್ತಿಕೊಳ್ಳಲಾಗಿದೆ. ಇದರಡಿಯಲ್ಲಿ ಎಸ್ಸಿ/ಎಸ್ಟಿ ಕಾಲೋನಿಗಳಿಗೆ ಹೊಂದಿಕೊಂಡಿರುವ ರಸ್ತೆ ಬದಿಗಳುದ್ದಕ್ಕೂ ಸಸಿಗಳನ್ನು ನೆಡಲಾಗುವುದು. ಅದೇ ಪ್ರಕಾರ ಟಿಎಸ್ಪಿ ಉಪಾಂಗದಡಿಯಲ್ಲಿ ಬುಡಕಟ್ಟು ಕಾಲೋನಿಗಳಿಗೆ ಹೊಂದಿಕೊಂಡಿರುವ ರಸ್ತೆಗಳುದ್ದಕ್ಕೂ ಸಸಿಗಳನ್ನು ನೆಡಲಾಗುವುದು.
14. 2406-01-102-2-19 - ಗ್ರಾಮ ಅರಣ್ಯ ಸಮಿತಿಗಳು - ಎಪಿಸಿಸಿಎಫ್ ಯೋಜನೆಗಳು
ಡಿಎಫ್ಐಡಿ ನೆರವಿನ ಪಶ್ಚಿಮ ಘಟ್ಟಗಳ ಅರಣ್ಯೀಕರಣ ಮತ್ತು ಪರಿಸರ ಅಭಿವೃದ್ಧಿ ಕಾರ್ಯಕ್ರಮದ ಹಾಗೂ ಜೆಬಿಐಸಿ ನೆರವಿನ ಪೂರ್ವ ಕರ್ನಾಟಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ 3788 ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಗಿದೆ. ಈ ಯೋಜನೆಗಳು ಹಾಗೂ ಕಾರ್ಯಕ್ರಮಗಳು ನಿಂತುಹೋಗಿದ್ದರಿಂದ ಹಣಕಾಸಿನ ಕೊರತೆಯಿಂದಾಗಿ ಗ್ರಾಮ ಅರಣ್ಯ ಸಮಿತಿಗಳು ನಿಷ್ಕ್ರಿಯವಾಗಿದ್ದವು. ಗ್ರಾಮ ಅರಣ್ಯ ಸಮಿತಿಗಳಿಗೆ ಸಹಾಯ ನೀಡಲು ಈ ಯೋಜನೆಯನ್ನು 2013-14ರಲ್ಲಿ ಪ್ರಾರಂಭಿಸಲಾಯಿತು.
15. 2406-01-102-2-22 - ಸಾರ್ವಜನಿಕ ವಿತರಣೆಗೆ ಸಸಿಗಳನ್ನು ಬೆಳೆಸುವುದು - ಎಪಿಸಿಸಿಎಫ್ ಅಭಿವೃದ್ಧಿ
ಸಾರ್ವಜನಿಕರು ಹಾಗೂ ರೈತರು ಗಿಡ ನೆಡುವುದನ್ನು ಪ್ರೋತ್ಸಾಹಿಸಲು, ಹಿಡುವಳಿ ಜಮೀನಿನಲ್ಲಿ ನೆಡಲು, ಇಲಾಖೆಯು ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದೆ. ಈ ಉದ್ದೇಶಕ್ಕಾಗಿ ಸೂಕ್ತ ಸ್ಥಳೀಯ ಪ್ರಭೇದಗಳನ್ನು ಆಯ್ದುಕೊಳ್ಳಲಾಗಿದೆ ಹಾಗೂ ಇಲಾಖೆಯು ಪ್ರತಿ ವರ್ಷ 41 x 6”, 5” x 8”, ಮತ್ತು 81 x 12” ಗಾತ್ರದ ಸಸಿಗಳನ್ನು ಬೆಳೆಸುತ್ತಿದೆ.

ಎರಡನೆಯದಾಗಿ, ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಭೂ ಪ್ರದೇಶದ ಶೇಕಡ 33%ರಷ್ಟು ಭಾಗ ವೃಕ್ಷ ಹೊದಿಕೆಯನ್ನು ಹೊಂದಿರಬೇಕು. ಗುರಿಯನ್ನು ಸಾಧಿಸಲು ಇಲಾಖೆಯು ಹಲವಾರು ಅರಣ್ಯೀಕರಣ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದೆ. ಅರಣ್ಯೀಕರಣದ ಗುರಿಯು ಹೆಚ್ಚಾಗಿರುವುದರಿಂದ ಇದನ್ನು ರೈತರು, ಸಾರ್ವಜನಿಕರು ಹಾಗೂ ಸರ್ಕಾರೇತರ ಸಂಸ್ಥೆಗಳ ಐಚ್ಛಿಕ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ಸಾಧಿಸಬಹುದು.

ವೃಕ್ಷ ಹೊದಿಕೆಯನ್ನು ಹೆಚ್ಚಿಸುವ ಉದಾತ್ತ ಕಾರ್ಯಕ್ಕೆ ರೈತರ ಹಾಗೂ ಸಾರ್ವಜನಿಕರ ಸಹಕಾರವನ್ನು ಪಡೆಯುವುದಕ್ಕೆ ಕರ್ನಾಟಕ ಸರ್ಕಾರವು “ಕೃಷಿ ಅರಣ್ಯ ಪೆÇ್ರೀತ್ಸಾಹ ಯೋಜನೆ” ಯನ್ನು ಆರಂಭಿಸಿದೆ. ಕಾರ್ಯಕ್ರಮದ ಮಾರ್ಗಸೂಚಿಗಳಂತೆ ರೈತರು, ಸಾರ್ವಜನಿಕರು ಹಾಗೂ ಸರ್ಕಾರೇತರ ಸಂಸ್ಥೆಗಳು ಸಸಿಗಳನ್ನು ರಿಯಾಯಿತಿ ದರದಲ್ಲಿ ತಮ್ಮ ಹತ್ತಿರದ ಇಲಾಖೆಯ ಸಸಿ ಬೆಳೆಸುವ ಕೇಂದ್ರಗಳಿಂದ (ನರ್ಸರಿ) ಪಡೆಯಬಹುದು. ಪಡೆದುಕೊಂಡ ಅಂತಹ ಸಸಿಗಳನ್ನು ತಮ್ಮ ಭೂಮಿಗಳಲ್ಲಿ ನೆಡಬೇಕು ಮತ್ತು ಪೆÇೀಷಿಸಬೇಕು ಹಾಗೂ ಅಂತಹ ಪ್ರಕರಣಗಳಲ್ಲಿ ಪ್ರತಿ ಉಳಿದುಕೊಳ್ಳುವ ಗಿಡಗಳಿಗೆ ಅವರು ಸರ್ಕಾರದಿಂದ ಪೆÇ್ರೀತ್ಸಾಹಧನ ಪಡೆಯಬಹುದು. ಪೆÇ್ರೀತ್ಸಾಹಧನ ಪಡೆಯುವುದರ ಜೊತೆಗೆ ಅಂತಹ ಸಸ್ಯಗಳಿಂದ ಬರುವ ಯಾವುದೇ ಉತ್ಪನ್ನಗಳನ್ನು ಅವರುಗಳು ಉಪಯೊಗಿಸಿಕೊಳ್ಳಲು ಹಕ್ಕುಳ್ಳವರಾಗಿರುತ್ತಾರೆ.

16. 2406-01-102-2-25 – ಪರಿಸರ ಪ್ರವಾಸೋದ್ಯಮ - ಪಿಸಿಸಿಎಫ್ (ಡಬ್ಲ್ಯೂಎಲ್)
ಕರ್ನಾಟಕದಲ್ಲಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಫುಲವಾದ ಅವಕಾಶಗಳಿವೆ. ಪ್ರವಾಸೋದ್ಯಮ ಸಾಮರ್ಥ್ಯವುಳ್ಳ ಅರಣ್ಯ ಪ್ರದೇಶಗಳಲ್ಲಿ ಹಾಗೂ ಸುತ್ತಮುತ್ತ ಶಿಬಿರ ಹಾಗೂ ಪ್ರಕೃತಿ ಪ್ರವಾಸೋದ್ಯಮಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
17. 2406-01-102-2-34 - ಸಮೃದ್ಧ ಹಸಿರು ಗ್ರಾಮ ಯೋಜನೆ - ಯೋಜನೆಗಳು
ಲಭ್ಯವಿರುವ ಪ್ರಾಕೃತಿಕ ಸಂಪತ್ತುಗಳ ಸ್ವಾವಲಂಬನೆ ಸಾಧಿಸಲು ಹಾಗೂ ವೃಕ್ಷ ಹೊದಿಕೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಗ್ರಾಮವಾಸಿಗಳ ಅವಶ್ಯಕತೆಗಳನ್ನು ಪೂರೈಸಲು ಸಣ್ಣ ಕಟ್ಟಿಗೆ, ಮೇವು, ಹಸಿರು ಎಲೆಗಳನ್ನು ಒದಗಿಸಲು ಹಾಗೂ ಜೈವಿಕ ಇಂಧನ ಘಟಕ, ಔಷಧೀಯ ವನಗಳು ಮುಂತಾದವುಗಳನ್ನು ಸ್ಥಾಪಿಸಲು, ಕುಶಲಕರ್ಮಿಗಳಿಗೆ ಬಿದಿರು ಹಾಗೂ ಇತರ ಕಚ್ಚಾ ಸಾಮಗ್ರಿಗಳನ್ನು ಒದಗಿಸಲು ಪ್ರತಿ ಅರಣ್ಯ ವಿಭಾಗದಲ್ಲಿ ಕನಿಷ್ಠ ಒಂದು ಗ್ರಾಮವನ್ನು ದತ್ತು ಪಡೆಯಲು ಪ್ರಸ್ತಾವಿಸಲಾಗಿದೆ. ಭೂ ಜಲವನ್ನು ಸುಧಾರಿಸಲು ಅರಣ್ಯೀಕರಣ ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳನ್ನೂ ಸಹಾ ಕೈಗೆತ್ತಿಕೊಳ್ಳಲು ಪ್ರಸ್ತಾವಿಸಲಾಗಿದೆ.
18. 2406-01-102-2-35 - ವೃಕ್ಷ ಉದ್ಯಾನವನ - ಪಿಸಿಸಿಎಫ್ ಹೆಚ್ಓಎಫ್ಎಫ್ ಹೆಚ್ಕ್ಯೂ
ನಗರ ಪ್ರದೇಶಗಳ ಜನರಿಗೆ ಉತ್ತಮ ಪರಿಸರವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಸ್ಥಳೀಯ ನಾಗರಿಕರಿಗೆ ಉತ್ತಮ ಪರಿಸರ ಸೌಲಭ್ಯಗಳನ್ನು ಒದಗಿಸಲು ಈ ಯೋಜನೆಯ ಅಡಿಯಲ್ಲಿ ಬೆಂಗಳೂರು ನಗರದ ಸಮೀಪ 4 ನಗರ ಅರಣ್ಯ ಉದ್ಯಾನವನಗಳನ್ನು ಮತ್ತು ಪ್ರತಿ ಜಿಲ್ಲಾ ಕೆಂದ್ರದ ಸಮೀಪ ಅಂತಹ 29 ನಗರ ಅರಣ್ಯ ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
19. 2406-01-102-2-36- ಮಗುವಿಗೊಂದು ಮರ ಶಾಲೆಗೊಂದು ವನ - ಎಪಿಸಿಸಿಎಫ್ ಅಭಿವೃದ್ಧಿ
ಶಾಲಾ ಮಕ್ಕಳಲ್ಲಿ ಜೈವಿಕ ವೈವಿಧ್ಯ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಲು ಹಾಗೂ ಅವರನ್ನು ಗಿಡ ನೆಡಲು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಶೈಕ್ಷಿಣಿಕ ಸಂಸ್ಥೆಗಳ ಸುತ್ತಮುತ್ತಲಿನ ಲಭ್ಯವಿರುವ ರಕ್ಷಿತ ಪ್ರದೇಶವನ್ನು ಗುರುತಿಸಲಾಗುವುದು. ನೆಡುತೋಪುಗಳನ್ನು ಬೆಳೆಸಲು ಶಾಲಾ ಅಧಿಕಾರಿಗಳಿಗೆ ಹಣ್ಣು ಬಿಡುವ, ಹೂವು ಬಿಡುವ ಹಾಗೂ ನೆರಳು ನೀಡುವ ಮರಗಳ ಸಸಿಗಳನ್ನು ಪೂರೈಸಲಾಗುವುದು. ಪ್ರೈಮರಿ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳವರೆಗಿನ ಶಾಲೆಗಳನ್ನು ಒಳಗೊಂಡಿರುತ್ತದೆ. ಶಾಲಾ ಮಕ್ಕಳಿಗೆ ಐಚ್ಛಿಕ ಆಧಾರದ ಮೇಲೆ ತಮ್ಮ ಮನೆಯ ಅಂಗಳದಲ್ಲಿ ಅಥವಾ ಜಮೀನಿನಲ್ಲಿ ನೆಡಲು ಸಸಿಗಳನ್ನು ವಿತರಿಸಲಾಗುವುದು.
20. 2406-01-789-0-00-ವಿಶೇಷ ಉಪಾಂಗ ಯೋಜನೆ - ಎಪಿಸಿಸಿಎಫ್ ಅಭಿವೃದ್ಧಿ
ತಮ್ಮ ಜಮೀನುಗಳಲ್ಲಿ ಹಾಗೂ ಎಸ್ಸಿ ನೆಲೆಗಳಲ್ಲಿ ಹಣ್ಣು ಬಿಡುವ ಮರಗಳ ಸಸಿಗಳನ್ನು ನೆಡಲು ಎಸ್ಸಿ ಕುಟುಂಬಗಳನ್ನು ಮೇಲೆತ್ತುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ, ಸೌರ ದೀಪಗಳು, ಸರಳ ಒಲೆ ಹಾಗೂ ಎಲ್.ಪಿ.ಜಿ. ಸ್ಟವ್ಗಳು, ಮತ್ತು ಸ್ಥಳೀಯ ಕುಶಲಕರ್ಮಿಗಳಿಗೆ ಬಿದಿರು ಹಾಗೂ ಬೆತ್ತವನ್ನು ಪೂರೈಸುವುದು, ಜೈವಿಕ ಅನಿಲ ಘಟಗಳನ್ನು ಸ್ಥಾಪಿಸುವುದು ಇತ್ಯಾದಿ ಸೌಲಭ್ಯಗಳನ್ನೂ ಸಹಾ ನೀಡಲಾಗುತ್ತದೆ.
21. 2406-01-796-0-00 - ಬುಡಕಟ್ಟು ಉಪ ಯೋಜನೆ - ಎಪಿಸಿಸಿಎಫ್ ಅಭಿವೃದ್ಧಿ
ತಮ್ಮ ಜಮೀನುಗಳಲ್ಲಿ ಹಾಗೂ ಎಸ್ಸಿ ನೆಲೆಗಳಲ್ಲಿ ಹಣ್ಣು ಬಿಡುವ ಮರಗಳ ಸಸಿಗಳನ್ನು ನೆಡಲು ಎಸ್ಸಿ ಕುಟುಂಬಗಳನ್ನು ಮೇಲೆತ್ತುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ, ಸೌರ ದೀಪಗಳು, ಸರಳ ಒಲೆ ಹಾಗೂ ಎಲ್.ಪಿ.ಜಿ. ಸ್ಟೌಗಳು, ಮತ್ತು ಸ್ಥಳೀಯ ಕುಶಲಕರ್ಮಿಗಳಿಗೆ ಬೊಂಬು ಹಾಗೂ ಬಿದಿರನ್ನು ಪೂರೈಸುವುದು, ಜೈವಿಕ ಅನಿಲ ಘಟಗಳನ್ನು ಸ್ಥಾಪಿಸುವುದು ಇತ್ಯಾದಿ ಸೌಲಭ್ಯಗಳನ್ನೂ ಸಹಾ ನೀಡಲಾಗುತ್ತದೆ.
22. 2406-01-800-0-14- ಹುಲಿ ಮೀಸಲು ಮತ್ತು ರಾಷ್ಟ್ರೀಯ ಉದ್ಯಾನವನಗಳಿಂದ ಕುಟುಂಬಗಳ ಐಚ್ಛಿಕ ಪುನರ್ವಸತಿ - ಪಿಸಿಸಿಎಫ್ ಡಬ್ಲ್ಯೂಎಲ್
ವನ್ಯಜೀವಿ (ರಕ್ಷಣೆ) ಕಾಯಿದೆ 1972 ರ ನಿಯಮಗಳ ಅನ್ವಯ ಹುಲಿ ಮೀಸಲುಗಳನ್ನು (ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯ ಒಳಗೊಂಡಿರುವ) ಅತಿಕ್ರಮಿಸುವಂತಿಲ್ಲ. ಕಂದಾಯ ಭೂಮಿಗಳಿಗೆ ಕಂದಾಯ ಇಲಾಖೆಯು ನಿಗದಿಪಡಿಸಿರುವ ಹಣವನ್ನು (ಭೂ ಸ್ವಾಧೀನಕ್ಕೆ) ನೀಡುವುದರ ಜೊತೆಗೆ ಪುನರ್ವಸತಿ ಪ್ಯಾಕೇಜ್ ನೀಡುವುದರ ಮೂಲಕ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯಗಳ ಒಳಗೆ ವಾಸಿಸುತ್ತಿರುವ ಕುಟುಂಬಗಳನ್ನು ಐಚ್ಛಿಕವಾಗಿ ರಕ್ಷಿತ ಪ್ರದೇಶದ (ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯ) ಹೊರಗಡೆಗೆ ಸ್ಥಳಾಂತರಿಸಬೇಕು. ಈ ಯೋಜನೆಯ ಅಡಿಯಲ್ಲಿ ಎಸ್ಸಿ ಮತ್ತು ಎಸ್ಟಿ ಕುಟುಂಬಗಳ ಪುನರ್ವಸತಿಯನ್ನು ಕೈಗೆತ್ತಿಕೊಳ್ಳಲಾಗಿದೆ.
23. 2406-01-800-0-15-ಮನುಷ್ಯ-ಪ್ರಾಣಿಗಳ ನಡುವಿನ ಸಂಘರ್ಷವನ್ನು ನಿವಾರಿಸಲು ದೂರಗಾಮಿ ಕ್ರಮಗಳು : ಪಿಸಿಸಿಎಫ್ ಡಬ್ಲ್ಯೂಎಲ್
ಮಳೆಯ ಕೊರತೆಯಿಂದಾಗಿ ವನ್ಯಜೀವಿ ವಲಯ ಪ್ರದೇಶಗಳಲ್ಲಿ ಮೇವು ಮತ್ತು ನೀರಿನ ತೀವ್ರ ಕೊರತೆಯ ಸಮಸ್ಯೆ ಉಂಟಾಗಿದೆ. ಈ ಅಂಶಗಳು ಮನುಷ್ಯ-ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಮನುಷ್ಯ-ಪ್ರಾಣಿಗಳ ನಡುವಿನ ಸಂಘರ್ಷ ಬೆಂಗಳೂರು, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ಹೆಚ್ಚು ಕಂಡುಬರುತ್ತಿದ್ದು ಇದನ್ನು ತಡೆಯಲು ಈ ಯೋಜನೆಯನ್ನು 2013-14ರಲ್ಲಿ ಆರಂಭಿಸಲಾಯಿತು.
24. 2406-02-110-0-01-ವನ್ಯಜೀವಿಗಳ ಪ್ರಕೃತಿ ಸಂರಕ್ಷಣೆ
ಮುಖ್ಯವಾಗಿ ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ಬೆಂಗಳೂರು ಹಾಗೂ ಇತರ ಕೆಲವು ಪ್ರದೇಶಗಳಲ್ಲಿ ಆನೆಗಳ ಹಾವಳಿಯು ಹೆಚ್ಚಾಗುತ್ತಿದೆ. ಆನೆಗಳ ಹಾವಳಿಯನ್ನು ತಡೆಯಲು ಈ ಯೋಜನೆಯ ಅಡಿಯಲ್ಲಿ ರಕ್ಷಣಾ ಕ್ರಮಗಳಾದ ಆನೆ ವಿರೋಧಿ ಕಂದಕಗಳನ್ನು ತೋಡುವುದು, ಅರಣ್ಯ ಪ್ರದೇಶ ಮತ್ತು ಕೃಷಿ ಭೂಮಿಗಳ ನಡುವೆ ಸೌರ ಬೇಲಿ ನಿರ್ಮಾಣ ಮುಂತಾದವುಗಳನ್ನು ಕೈಗೆತ್ತಿಕೊಳ್ಳಲಾಗಿದೆ.
25. 2406-02-110-0-49-ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಪುನರ್ವಸತಿ - ಪಿಸಿಸಿಎಫ್ ಡಬ್ಲ್ಯೂಎಲ್
ಈ ಯೋಜನೆಯ ಉದ್ದೇಶವೆಂದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಕುಟುಂಬಗಳನ್ನು ಪುನರ್ವಸತಿಗೊಳಿಸಲು ನೆರವು ನೀಡುವುದು.
26. 2406-02-110-0-50- Development of Newly declared Sanctuaries and Conservation Reserves - ಪಿಸಿಸಿಎಫ್ ಡಬ್ಲ್ಯೂಎಲ್
ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಇತೀಚಿನ ವರ್ಷಗಳಲ್ಲಿ ಹೆಚ್ಚಿನ ಮೀಸಲು ಅರಣ್ಯ ಪ್ರದೇಶಗಳನ್ನು ರಕ್ಷಿತ ಪ್ರದೇಶ ಜಾಲದೊಳಗೆ ತರಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರವು ಇತ್ತೀಚಿಗೆ ಹೆಚ್ಚಿನ ಅರಣ್ಯ ಪ್ರದೇಶಗಳನ್ನು ಅಭ್ಯಯಾರಣ್ಯಗಳೆಂದು ಗುರುತಿಸಿದೆ ಹಾಗೂ ಘೋಷಿಸಿದೆ. ಈ ಯೋಜನೆಯ ಅಡಿಯಲ್ಲಿ ಬರುವ ನಿಧಿಯನ್ನು ಮುಖ್ಯವಾಗಿ ಅಪಾಯದ ಅಂಚಿನಲ್ಲಿರುವ ಪ್ರಬೇಧಗಳ ಸಂರಕ್ಷಣೆ, ಅವಾಸಸ್ಥಾನ ಅಭಿವೃದ್ಧಿ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ.
27. 4406-01-070-0-02-ಕಟ್ಟಡಗಳು
ಕಟ್ಟಡಗಳ ನಿರ್ಮಾಣ, ವೆಚ್ಚದ ಬಂಡವಾಳ, ಈಗ ಪ್ರಗತಿಯಲ್ಲಿರುವ ನೀರು ಹರಿಯುವ ಮಾರ್ಗಗಳ ಕಾಮಗಾರಿಯ ಮುಕ್ತಾಯ, ಕಾಂಪೌಂಡ್ ಗೋಡೆಗಳ ಮತ್ತು ಇತರ ಮೂಲಭೂತ ಸೌಕರ್ಯಗಳ ನಿರ್ಮಾಣ ಈ ಯೋಜನೆಯ ಉದ್ದೇಶವಾಗಿರುತ್ತದೆ.
28. 4406-01-070-0-03- ಮಂಚೂಣಿ ಸಿಬ್ಬಂದಿಗೆ ವಸತಿಗೃಹಗಳ ನಿರ್ಮಾಣ - ಪಿಸಿಸಿಎಫ್ (ಹೆಚ್ಓಎಫ್ಎಫ್) ಹಾಗೂ ಎಪಿಸಿಸಿಎಫ್ (ಎಲ್ಆರ್)
ಹಂತಹಂತವಾಗಿ ಮಂಚೂಣಿ ಸಿಬ್ಬಂದಿಗೆ ಹೊಸ ವಸತಿಗೃಹಗಳನ್ನು ನಿರ್ಮಾಣ ಮಾಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಸಿಬ್ಬಂದಿಗಳು ತಮ್ಮ ಮಕ್ಕಳಿಗೆ ಮೂಲ ಶಿಕ್ಷಣ ನೀಡಲು ಅನುಕೂಲವಾಗುವಂತೆ ಪ್ರೌಢಶಾಲೆವರೆಗಿನ ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿರುವ ವಸತಿಗೃಹಗಳನ್ನು ಅರಣ್ಯ ಕೇಂದ್ರಸ್ಥಾನಗಳು ಅಥವಾ ಹೋಬಳಿ ಕೆಂದ್ರಸ್ಥಾನಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
29. 2406-01-102-2-81-ಕರ್ನಾಟಕ ಸಮರ್ಥ ಅರಣ್ಯ ನಿರ್ವಹಣೆ ಮತ್ತು ಜೈವಿಕ ವೈವಿಧ್ಯ ಸಂರಕ್ಷಣಾ ಯೋಜನೆ ಮತ್ತು4406-01-102-2-81 - ಕರ್ನಾಟಕ ಸಮರ್ಥ ಅರಣ್ಯ ನಿರ್ವಹಣೆ ಮತ್ತು ಜೈವಿಕ ವೈವಿಧ್ಯ ಯೋಜನೆ - ಎಪಿಸಿಸಿಎಫ್ ಯೋಜನೆಗಳು
ಬಡತನವನ್ನು ಕಡಿಮೆ ಮಾಡಲು ಹಾಗೂ ಪ್ರದೇಶದಲ್ಲಿ ಜೈವಿಕ ವೈವಿಧ್ಯವನ್ನು ರಕ್ಷಿಸಲು, ಕರ್ನಾಟಕ ರಾಜ್ಯದಲ್ಲಿ ಜಂಟಿ ಅರಣ್ಯ ಯೋಜನೆ ಹಾಗೂ ನಿರ್ವಹಣೆ (ಜೆಎಫ್ಪಿಎಂ) ಮೂಲಕ ಅರಣ್ಯೀಕರಣಗೊಳಿಸುವುದರಿಂದ ಅಳಿದುಹೋಗಿರುವ ಅರಣ್ಯಗಳನ್ನು ಪುನರ್ ಸ್ಥಾಪಿಸಲು, ಜೈವಿಕ ಪರಿಸರವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಯೋಜನೆಯ ಗ್ರಾಮಗಳ ಮೂಲವಾಸಿಗಳ ಜೀವನ ಮಟ್ಟವನ್ನು ಸುಧಾರಿಸಲು 2005-06 ರಿಂದ 2012-13ರವರೆಗೆ (ಎಂಟು ವರ್ಷಗಳು) ಜಪಾನ್ ಇಂಟರ್ನ್ಯಾಷನಲ್ ಕೊ-ಆಪರೇಷನ್ ಏಜೆನ್ಸಿ (ಜೆಐಸಿಎ) ನೆರವಿನಿಂದ ಕರ್ನಾಟಕ ಸಮರ್ಥ ಅರಣ್ಯ ನಿರ್ವಹಣೆ ಮತ್ತು ಜೈವಿಕ ವೈವಿಧ್ಯ ಸಂರಕ್ಷಣಾ ಯೋಜನೆ (ಕೆಎಸ್ಎಫ್ಎಂಬಿಸಿ) ಅನುಷ್ಠಾನವಾಗಿತ್ತು. ಯೋಜನೆಯನ್ನು ರಾಜ್ಯದ ಎಲ್ಲಾ 30 ಜಿಲ್ಲೆಗಲ್ಲೂ ಜಾರಿಗೊಳಿಸಲಾಗುತ್ತಿದೆ.

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಗದಗ, ತುಮಕೂರು ಹಾಗೂ ಮಂಡ್ಯ. ಭಾಗ ಬಿ ಅಡಿಯಲ್ಲಿ ಅರಣ್ಯೀಕರಣದ ಗುರಿಯು 56,000 ಹೆಕ್ಟೇರ್ಗಳು.

ಅರಣ್ಯೀಕರಣ, ಮಣ್ಣು ಸಂರಕ್ಷಣೆ ಹಾಗೂ ತೇವಾಂಶ ಸಂರಕ್ಷಣೆ, ತೋಟ ಅರಣ್ಯೀಕರಣ, ಜೈವಿಕ ವೈವಿಧ್ಯ ಸಂರಕ್ಷಣೆ, ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸುವುದರ ಮೂಲಕ ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ, ರಕ್ಷಿತ ಪ್ರದೇಶಗಳಲ್ಲಿ ಮೂಲ ಆವಾಸಸ್ಥಾನ ಅಭಿವೃದ್ಧಿ, ಕರಾವಳಿ ಭಾಗಗಳಲ್ಲಿ ದಡದ ವೃಕ್ಷ ತೋಪುಗಳನ್ನು ಪುನರುಜ್ಜೀವನಗೊಳಿಸುವುದು, ಸಂಶೋಧನೆ, ತರಬೇತಿ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಜಿಐಎಸ್-ಎಂಐಎಸ್ ಇತ್ಯಾದಿಗಳು ಈ ಯೋಜನೆಯ ಮುಖ್ಯ ಕಾರ್ಯಗಳಾಗಿರುತ್ತವೆ.
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?