English     ನಮ್ಮನ್ನು ಅನುಸರಿಸಿ:
 
ಅರಣ್ಯ ಮುಖಪುಟ > ಸ್ಕೀಮ್ಸ್ ಮತ್ತು ಯೋಜನೆಗಳು > ಇತರ ಕಾರ್ಯಕ್ರಮಗಳು - ರೂಪುರೇಷೇತರ ಯೋಜನೆಗಳು
ಇತರ ಕಾರ್ಯಕ್ರಮಗಳು - ರೂಪುರೇಷೇತರ ಯೋಜನೆಗಳು
ಸಾಮಾಜಿಕ ಅರಣ್ಯೀಕರಣ ವಿಭಾಗಗಳ ಮೂಲಕ ಜಿಲ್ಲಾ ವಲಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲಾ ವಲಯ ಯೋಜನೆಗಳ ವಿವರಗಳು ಕೆಳಕಂಡಂತಿವೆ.
1. ಅರಣ್ಯ ಸಂಶೋಧನೆ
2. ಕಾರ್ಯ ಯೋಜನೆ ರೂಪಿಸುವುದು
ಈ ಯೋಜನೆಯ ಅಡಿಯಲ್ಲಿ ಭೂಮಿಯ ಮೇಲೆ ಮೀಸಲು ಅರಣ್ಯ ಕಲ್ಲುಗಳನ್ನು ನೆಡುವುದರ ಮೂಲಕ ಸರ್ವೆ ಹಾಗೂ ಗುರುತುಮಾಡುವ ಕೆಲಸಗಳು, ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವುದು, ಗಣತಿ, ಮಾದರಿ ಪ್ಲಾಟ್ಗಳ ನಿರ್ಮಾಣ, ವಿಭಾಗಗಳಲ್ಲಿ ಸರ್ವೆ, ಕಲ್ಲುಗಳ ಬದಿ ದಿಬ್ಬಗಳನ್ನು ನಿರ್ಮಿಸುವುದು ಮುಂತಾದ ಕೆಲಸಗಳ ವೆಚ್ಚಗಳನ್ನು ಭರಿಸಲಾಗುತ್ತದೆ.
3. ರಸ್ತೆಗಳು, ಸೇತುವೆಗಳು, ನೀರಿನ ಪೂರೈಕೆ ಹಾಗೂ ಕಟ್ಟಡಗಳ ನಿರ್ವಹಣೆ
ಈ ಯೋಜನೆಯ ಅಡಿಯಲ್ಲಿ ಅರಣ್ಯ ರಸ್ತೆಗಳು ಹಾಗೂ ಸೇತುವೆಗಳು, ಅರಣ್ಯ ವಿಶ್ರಾಂತಿ ಗೃಹಗಳು, ಕಛೇರಿ ಕಟ್ಟಡಗಳು, ತಪಾಸಣಾ ಸ್ಥಳಗಳು, ನೀರಿನ ಪೂರೈಕೆ ಸೌಲಭ್ಯಗಳನ್ನು ಒದಗಿಸುವುದರ ದುರಸ್ತಿ ಹಾಗೂ ನಿರ್ವಹಣಾ ಕೆಲಸಗಳ ವೆಚ್ಚಗಳನ್ನು ಭರಿಸಲಾಗುತ್ತದೆ.
4. ವಸತಿ ಗೃಹಗಳ ನಿರ್ವಹಣೆ
ಈ ಯೋಜನೆಯ ಅಡಿಯಲ್ಲಿ ವಸತಿ ಗೃಹಗಳ ದುರಸ್ತಿ ಹಾಗೂ ನಿರ್ವಹಣಾ ಕೆಲಸಗಳ ವೆಚ್ಚಗಳನ್ನು ಭರಿಸಲಾಗುತ್ತದೆ.
5.ಅರಣ್ಯ ರಕ್ಷಣೆ, ಪುನರುಥ್ಥಾನ ಹಾಗೂ ಕೃಷಿ ಕ್ರಿಯೆಗಳು : ಪಿಸಿಸಿಎಫ್ ಹೆಚ್ಓಎಫ್ಎಫ್ ಹಾಗೂ ಎಪಿಸಿಸಿಎಫ್ ಹೆಚ್ಕ್ಯೂ ಹಾಗೂ ಸಿ
ಅ. ಬೆಂಕಿಯಿಂದ ರಕ್ಷಣೆ
ಒಟ್ತು 38 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶದ ಪೈಕಿ ಕನಿಷ್ಠ ಅರ್ಧದಷ್ಟು ಅರಣ್ಯ ಪ್ರದೇಶಗಳು ಕಾಡ್ಗಿಚ್ಚಿಗೆ ಒಳಗಾಗುತ್ತವೆ. ಪ್ರತಿ ವರ್ಷ ಆಕಸ್ಮಿಕವಾಗಿ ಹಾಗೂ ದುಷ್ಕರ್ಮಿಗಳಿಂದ ಉದ್ದೇಶಪೂರ್ವಕವಾಗಿ ಈ ಅರಣ್ಯಗಳಲ್ಲಿ ಬೆಂಕಿ ಹುಟ್ಟಿಕೊಳ್ಳುತ್ತದೆ. ಪ್ರಮುಖವಾದ ಬೆಲೆಬಾಳುವ ವೃಕ್ಷ ಪ್ರಬೇಧಗಳಾದ ತೇಗ ಹಾಗೂ ಬೀಟೆ ಮರಗಳನ್ನು ಹೊಂದಿರುವ ಎಲೆ ಉದುರುವ ಅರಣ್ಯಗಳಲ್ಲಿ ಬೆಂಕಿ ಪ್ರಕರಣಗಳು ಹೆಚ್ಚುಹೆಚ್ಚಾಗಿ ನಡೆಯುತ್ತವೆ. ನಾಗರಹೊಳೆ, ಬಂಡೀಪುರ ಮುಂತಾದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಮೇಲಿಂದ ಮೇಲೆ ಬೆಂಕಿ ಪ್ರಕರಣಗಳು ಸಂಭವಿಸಿ ಪುಷ್ಪ ಹಾಗೂ ಪ್ರಾಣಿಗಳಿಗೆ ಹೆಚ್ಚಿನ ನಷ್ಟ ಉಂಟುಮಾಡುತ್ತವೆ. ಬೇಸಿಗೆ ಕಾಲದಲ್ಲಿ ಬೆಂಕಿ ಪ್ರಕರಣಗಳನ್ನು ನಿಯಂತ್ರಿಸಲು ಹಾಗೂ ತಡೆಯಲು ರಕ್ಷಣಾ ಕ್ರಮಗಳಾದ; ಬುಡದ ಕಳೆಯನ್ನು ಕತ್ತರಿಸುವುದು ಹಾಗೂ ಸ್ವಚ್ಚಗೊಳಿಸುವುದು, ಬೆಂಕಿ ಪಥವನ್ನು ರಚಿಸುವುದು ಹಾಗೂ ನಿವಾರಿಸುವುದು ಮತ್ತು ಸಂಭವನೀಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಪಹರೆಯವರನ್ನು ನೇಮಿಸುವುದನ್ನು ಕೈಗೊಳ್ಳಲಾಗಿದೆ.
ಆ. ಕೃಷಿ ಕ್ರಿಯೆಗಳು
3 ವರ್ಷಗಳಿಗೆ ಮಾತ್ರ ನೆಡುತೋಪುಗಳನ್ನು ಬೆಳೆಸಲು ಹಾಗೂ ನಿರ್ವಹಿಸಲು ಈ ರೂಪುರೇಷೆ ಯೋಜನೆಗಳು ಅವಕಾಶಮಾಡಿಕೊಡುತ್ತದೆ. ರೂಪುರೇಷೆ ಯೋಜನೆಗಳ ಅಡಿಯಲ್ಲಿ ಬೆಳೆಸುವ ನೆಡುತೋಪುಗಳನ್ನು ಈ ಕಾರ್ಯಕ್ರಮದ ಅಡಿಯಲ್ಲಿ ನಿರ್ವಹಿಸುವುದರಿಂದ ನೆಡುವ ಪ್ರಬೇಧಗಳು ಮತ್ತು ಸಂಗ್ರಹಣೆಗೆ ಅನುಗುಣವಾಗಿ ಅಂತಹ ನೆಡುತೋಪುಗಳನ್ನು 5 ರಿಂದ 7 ವರ್ಷಗಳವರೆಗೆ ನಿರ್ವಹಿಸುವುದು ಅವಶ್ಯಕ. ನರ್ಸರಿಗಳೊಂದಿಗೆ ಕ್ರಿಯಾ ಯೋಜನೆಗಳ ಅಡಿಯಲ್ಲಿ ಅರಣ್ಯಗಳ ಸಂಯೋಜಿತ ಮರುಸೃಷ್ಟಿ ಹಾಗೂ ಖಾಲಿ ಇರುವ ಪ್ರದೇಶಗಳನ್ನು ಭರ್ತಿ ಮಾಡುವುದು ಅಥವಾ ಮರ ಕೆಡವಿದ ಪ್ರದೇಶಗಳಲ್ಲಿ ಮತ್ತೆ ಸಸಿಗಳನ್ನು ನೆಡುವುದು, ಹಳೆಯ ನೆಡುತೋಪುಗಳನ್ನು ಜೋಪಾನ ಮಾಡುವಿಕೆ ಹಾಗೂ ಬೃಹತ್ ಕೃಷಿ ಕಾರ್ಯಗಳು ಇವುಗಳಿಗೆ ಸಂಬಂಧಿಸಿದ ಎಲ್ಲಾ ಖರ್ಚುವೆಚ್ಚಗಳನ್ನು ಈ ಕಾರ್ಯಕ್ರಮದ ಅಡಿಯಲ್ಲಿ ಒದಗಿಸಲಾಗುವ ನಿಧಿಯಿಂದ ಭರಿಸಲಾಗುತ್ತದೆ.
6. ಇತರ ಪ್ರದೇಶಗಳಲ್ಲಿ ಅರಣ್ಯೀಕರಣ
ರಾಜ್ಯದ ಆಯವ್ಯಯದಲ್ಲಿನ ಅವಕಾಶಗಳಷ್ಟೇ ಅಲ್ಲದೆ, ಸಾರ್ವಜನಿಕರು ಹಾಗೂ ಇತರರಿಂದ ಬಂದ ಹಣವನ್ನು ಮೊದಲು ರಾಜ್ಯದ ಬೊಕ್ಕಸ ಹಾಗೂ ಅರಣ್ಯೀಕರಣ/ಅಭಿವೃದ್ಧಿ ಕೆಲಸಗಳಿಗೆ ಅವಶ್ಯವಾದ ಹಣದ ಬಾಬ್ತಿಗೆ ಜಮಾ ಮಾಡಲಾಗುತ್ತದೆ.
7. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ
ಭೌಗೋಳಿಕ ಪ್ರದೇಶದ ಶೇಕಡಾ 20%ರಷ್ಟು ಪ್ರದೇಶ ಅರಣ್ಯ ಇಲಾಖೆಯ ನಿಯಂತ್ರಣದಲ್ಲಿದ್ದರೂ, ಅರಣ್ಯೀಕರಣ ಕಾರ್ಯಕ್ರಮಗಳಿಗೆ ರೂಪುರೇಷೆ ಯೋಜನೆಗಳ ಅಡಿಯಲ್ಲಿ ಒದಗಿಸಲಾಗುವ ನಿಧಿಯು ರಾಜ್ಯದ ಒಟ್ಟು ಯೋಜನಾ ವೆಚ್ಚದ ಕೇವಲ ಶೇಕಡಾ 0.54ರಷ್ಟಾಗಿರುತ್ತದೆ. ಅರಣ್ಯೀಕರಣ ಕಾರ್ಯಚಟುವಟಿಕೆಗಳಿಗಾಗಿ ಅವಶ್ಯಕವಾದ ಹೆಚ್ಚಿನ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಉದ್ದೇಶದಿಂದ ಸರ್ಕಾರ ಹಾಗೂ ಸರ್ಕಾರೀ ಮಾಲೀಕತ್ವದ ನಿಗಮಗಳು ವಿಲೇವಾರಿ ಮಾಡುವ ಅರಣ್ಯ ಉತ್ಪನ್ನಗಳ ಮೌಲ್ಯದ ಮೇಲೆ ಅರಣ್ಯ ಅಭಿವೃದ್ಧಿ ತೆರಿಗೆಯನ್ನು ವಿಧಿಸಲು ಅವಕಾಶವಾಗುವಂತೆ 1975ರಲ್ಲಿ ಕರ್ನಾಟಕ ಅರಣ್ಯ ಕಾಯಿದೆ 1963ಕ್ಕೆ ಸೆಕ್ಷನ್ 98ಎ ಸೇರಿಸಲಾಯಿತು. ಕೈಗಾರಿಕೆಗಳಿಗೆ ಅರಣ್ಯ ಉತ್ಪನ್ನಗಳನ್ನು ಮಾರಾಟ ಮಾಡಿದಾಗ ಶೇಕಡಾ 12% ರಷ್ಟು ಹಾಗೂ ಇತರ ಪ್ರಕರಣಗಳಲ್ಲಿ ಶೇಕಡಾ 8%ರಷ್ಟು ಅರಣ್ಯ ಅಭಿವೃದ್ಧಿ ತೆರಿಗೆಯನ್ನು ವಿಧಿಸಲಾಗುತ್ತದೆ. ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಮೊದಲು ರಾಜ್ಯದ ಕ್ರೋಢೀಕೃತ ನಿಧಿಗೆ ಜಮಾ ಮಾಡಲಾಗುತ್ತದೆ ಹಾಗೂ ನಂತರ ಅದನ್ನು ಭರಿಸುವ ವೆಚ್ಚವಾಗಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ. ಪ್ರತಿ ವರ್ಷ ಸಂಗ್ರಹವಾಗುವ ಅಂದಾಜಿತ ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ ಯೋಜನೆಗಳ ಅಡಿಯಲ್ಲಿ ಇಲಾಖೆಗೆ ಒದಗಿಸಲಾಗಿತ್ತದೆ ಹಾಗೂ ಅದನ್ನು ಅರಣ್ಯ ನೆಡುತೋಪುಗಳನ್ನು ಬೆಳೆಸಲು ಮತ್ತು ಅದಕ್ಕೆ ಪೂರಕವಾದ ಅಂತಹ ಇತರ ಉದ್ದೇಶಗಳಿಗಾಗಿ ಬಳಸಿಕೊಳ್ಳಗಾಗುತ್ತದೆ. 2013-14ನೇ ಸಾಲಿಗೆ ಆಯವ್ಯಯ ಅವಕಾಶವು 25000.00 ಲಕ್ಷ ರೂಪಾಯಿಗಳಾಗಿದ್ದು, ಅದರ ಪೈಕಿ 46.993.55 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪುಗಳನ್ನು ಬೆಳೆಸಲು ಹಾಗೂ 63,926.70 ಹೆಕ್ಟೇರ್ ಪ್ರದೇಶದಲ್ಲಿನ ನೆಡುತೋಪುಗಳನ್ನು ನಿರ್ವಹಿಸಲು, 29,989.50 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪುಗಳನ್ನು ಬೆಳೆಸಲು ಅವಶ್ಯಕವಾದ ಸಸಿಗಳನ್ನು ಬೆಳೆಸಲು 24,765.40 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
8. ಮರಮುಟ್ಟುಗಳ ಹಾಗೂ ಇತರ ಅರಣ್ಯ ಉತ್ಪನ್ನಗಳ ಸಂಗ್ರಹಣೆ
ಈ ಯೋಜನೆಯ ಅಡಿಯಲ್ಲಿ ಮರಮುಟ್ಟುಗಳ ಹಾಗೂ ಕಟ್ಟಿಗೆಗಳ ಸಂಗ್ರಹಣೆ (ಅಂದರೆ ಕೆಡವುವುದು, ಪರಿವರ್ತಿಸುವುದು ಹಾಗೂ ಸಾಗಣೆ), ಅರಣ್ಯ ಪ್ರದೇಶಗಳಲ್ಲಿ ಹಾಗೂ ಖಾಸಗಿ ಭೂಮಿಗಳಲ್ಲನ ಶ್ರೀಗಂಧದ ಮರಗಳು ಮತ್ತು ಕೊರಡುಗಳನ್ನು ಕೆಡವುವುದು, ಸಂಗ್ರಹಿಸುವುದು ಹಾಗೂ ಅವುಗಳನ್ನು ಸರ್ಕಾರಿ ಶ್ರೀಗಂಧ ಡಿಪೆÇೀಗಳಿಗೆ ಸಾಗಿಸುವುದು ಮತ್ತು ಬಲಿತ ಶ್ರೀಗಂಧದ ಮರಗಳನ್ನು ಸಂರಕ್ಷಿಸುವುದು, ಮೇದಾರರಿಗೆ ಪೂರೈಸಲು ಬೇಕಾದ ಹಸಿರು ಬಿದಿರುಗಳನ್ನು ಹಾಗೂ ಕಾಗದ ಖಾರ್ಕಾನೆಗಳಿಗೆ ಪೂರೈಸಲು ನಿರ್ಜೀವ ಹಾಗೂ ಹೂಬಿಟ್ಟ ಬಿದಿರನ್ನು ಹಾಗೂ ಗ್ರಾಮೀಣ ಕುಶಲಕರ್ಮಿಗಳಿಗೆ ಮತ್ತು ಗೃಹ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಬೇಕಾದ ಬೆತ್ತಗಳನ್ನು ಸಂಗ್ರಹಿಸುವುದು ಮುಂತಾದವುಗಳಿಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಭರಿಸಲಾಗುವುದು. 2013-14ರಲ್ಲಿ ಸಂಗ್ರಹಣೆ ಹಾಗೂ ಅವುಗಳಿಗೆ ಸಂಬಂಧಿಸಿದ ವೆಚ್ಚಗಳಿಗೆ ನೀಡಲು 3468.54 ಲಕ್ಷ ರೂಪಾಯಿಗಳನ್ನು ಖರ್ಚುಮಾಡಲಾಯಿತು.
9. ಪ್ರಕೃತಿ ಸಂರಕ್ಷಣೆ
ಈ ಬಾಬ್ತಿನ ಅಡಿಯಲ್ಲಿ ಒದಗಿಸಲಾದ ನಿಧಿಯನ್ನು ಕಳ್ಳ ಬೇಟೆ ನಿಗ್ರಹ ಶಿಬಿರಗಳ ರಕ್ಷಣೆ ಹಾಗೂ ನಿರ್ವಹಣೆಗಾಗಿ ವೆಚ್ಚಮಾಡಲಾಗಿದೆ. ರಕ್ಷಣಾ ಕಾರ್ಯಗಳಿಗಾಗಿ ನೇಮಿಸಲ್ಪಟ್ಟ ಕೆಲಸಗಾರರಿಗೆ ವೇತನ ನೀಡಲು, ಬೆಂಕಿ ರಕ್ಷಣಾ ಕಾರ್ಯಗಳು, ಕಳ್ಳ ಬೇಟೆ ನಿಗ್ರಹ ಶಿಬಿರಗಳ ನಿರ್ವಹಣೆಗಾಗಿ 2013-14ರಲ್ಲಿ 174.49 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
10. ರಕ್ಷಿತ ಪ್ರದೇಶಗಳ ಅಭಿವೃದ್ಧಿ
ರಕ್ಷಿತ ಪ್ರದೇಶಗಳಿಂದ ಬಂದ ಆದಾಯವನ್ನು ರಕ್ಷಿತ ಪ್ರದೇಶ ನಿರ್ವಹಣಾ ನಿಧಿಗೆ ಮರು ಜಮೆ ಮಾಡಲಾಗುತ್ತದೆ ಹಾಗೂ ಅದನ್ನು ಮುಖ್ಯವಾಗಿ ಅಂತಹ ರಕ್ಷಿತ ಪ್ರದೇಶಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಬಳಸಲಾಗುತ್ತದೆ. ಮುಳ್ಳುಕಂಟಿ ಕಳೆಗಳನ್ನು ಕೀಳುವುದು, ಹಳೆಯ ನೀರಿನ ಕುಂಟೆಗಳ ಹೂಳೆತ್ತುವುದು, ಮೇವು ಬೆಳೆಸುವುದು, ರಸ್ತೆಗಳ, ರಸ್ತೆ ಕೆಳಗಿನ ಕಾಲುವೆಗಳ ಹಾಗೂ ಎಸ್ಎಂಎಸ್ ಕೆಲಸಗಳ ನಿರ್ವಹಣೆ, ಎಲ್ಲೆಗಳನ್ನು ಸುಭದ್ರಗೊಳಿಸುವುದು, ಕಳ್ಳ ಬೇಟೆ ನಿಗ್ರಹ ಶಿಬಿರಗಳ ಶೆಡ್ಗಳು, ಇಪಿಟಿ ಹಾಗೂ ಸೌರ ಬೇಲಿಗಳ ದುರಸ್ತಿ ಮತ್ತು ನಿರ್ವಹಣೆ ಇತ್ಯಾದಿಗಳು., ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯಗಳು, ಸೂಚನಾ ಫಲಕಗಳು, ವಿಡಿಯೋಗಳು, ಪ್ರಚಾರ ಸಾಮಗ್ರಿಗಳು, ಹತ್ತಿರದ ಶಾಲಾ ಮಕ್ಕಳಿಗೆ ತರಬೇತಿ, ಪ್ರವಾಸಿಗರಿಗೆ ವಾಹನಗಳು, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಂಬಂಧಪಟ್ಟ ಮೂಲ ಸೌಲಭ್ಯ ಕಾಮಗಾರಿಗಳ ನಿರ್ವಹಣೆ ಹಾಗೂ ಸ್ಥಾಪನೆಗಾಗಿ 2013-14ನೇ ಸಾಲಿನಲ್ಲಿ 374.74 ಲಕ್ಷ ರೂಪಾಯಿಗಳನ್ನು ವೆಚ್ಚಮಾಡಲಾಯಿತು.
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?