English     ನಮ್ಮನ್ನು ಅನುಸರಿಸಿ:
 
ಅರಣ್ಯ ಮುಖಪುಟ > ಸ್ಕೀಮ್ಸ್ ಮತ್ತು ಯೋಜನೆಗಳು > ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
1. 2406-01-101-2-19 – ದಡದ ಮೇಲಿನ ಉಷ್ಣಪ್ರದೇಶದ ಮರಗಳ ತೋಪುಗಳ ಸಂರಕ್ಷಣೆ ಮತ್ತು ನಿರ್ವಹಣೆ ಎಪಿಸಿಸಿಎಫ್ ಅಭಿವೃದ್ಧಿ ಮತ್ತು ಸಿಸಿಎಫ್ ಬಿದಿರು ಯೋಜನೆ
2. 2406-01-102-2-17 – ಸಿಸಿಎಸ್- ಅರಣ್ಯ ನಿರ್ವಹಣೆಯನ್ನು ತೀಕ್ಷ್ಣಗೊಳಿಸುವುದು - ಎಪಿಸಿಸಿಎಫ್ ಎಫ್ಆರ್ಎಂ
ಅರಣ್ಯ ರಕ್ಷಣೆಗೆ ಮೂಲಭೂತ ಸೌಕರ್ಯಗಳನ್ನು ಬಲಗೊಳಿಸುವುದು, ಕಾರ್ಯ ಯೋಜನಾ ಘಟಕಗಳು, ಸರ್ವೆ ಮತ್ತು ಭೂ ದಾಖಲೆಗಳ ಯಂತ್ರೋಪಕರಣಗಳು ಹಾಗೂ ಅಗ್ನಿ ವಿಚಕ್ಷಣಾ ವ್ಯವಸ್ಥೆಗಳನ್ನು ಆಧುನೀಕರಣಗೊಳಿಸುವ ಗುರಿ ಹೊಂದಿರುವ ಈ ಯೋಜನೆಗೆ ಭಾರತ ಸರ್ಕಾರವು ಶೇಕಡಾ 75%ರಷ್ಟು ಹಣಕಾಸು ನೆರವನ್ನು ನೀಡುತ್ತದೆ.
3. 2406-02-ಯುಓ-ಓ-02 – ಹುಲಿ ಯೋಜನೆ - ಪಿಸಿಸಿಎಫ್ ಡಬ್ಲ್ಯೂಎಲ್
ಈ ಯೋಜನೆಯನ್ನು 1973ರಲ್ಲಿ ಅನುಷ್ಠಾನಗೊಳಿಸಲಾಯಿತು ಹಾಗೂ ಭಾರತ ಸರ್ಕಾರವು ಆವರ್ತನೀಯವಲ್ಲದ ಬಾಬ್ತಿಗೆ ಶೇಕಡಾ 100ರಷ್ಟು ನೆರವು ನೀಡುತ್ತದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಆವರ್ತನೀಯ ಬಾಬ್ತಿಗೆ ತಲಾ ಶೇಕಡಾ 50%ರಷ್ಟು ನೀಡುತ್ತವೆ. ಬಂಡೀಪುರ ಹುಲಿ ಮೀಸಲು, ರಾಜೀವ ಗಾಂಧಿ (ನಾಗರಹೊಳೆ) ಹುಲಿ ಮೀಸಲು, ಭದ್ರಾ ಹುಲಿ ಮೀಸಲು ಮತ್ತು ಆನ್ಶಿ-ದಾಂಡೇಲಿ ಹುಲಿ ಮೀಸಲು ಮತ್ತು ಬಿಳಿಗಿರಿ ರಂಗನಾಥ ಹುಲಿ ಮೀಸಲುಗಳು ಹುಲಿ ಯೋಜನೆಯ ಅಡಿಯಲ್ಲಿವೆ. ಹುಲಿ ಸಂರಕ್ಷಣಾ ಪಡೆ, ಮಳೆಗಾಲದ ಗಸ್ತು ದಳಗಳನ್ನು ಸ್ಥಾಪಿಸುವುದು, ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಮತ್ತು ನಿರ್ವಹಣೆ, ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸಂಘಟಿಸುವುದರ ಮೂಲಕ ಕಳ್ಳಬೇಟೆಯನ್ನು ತಡೆಯುವುದು, ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ವೈರ್ಲೆಸ್ ಸೆಟ್ಗಳ, ವಾಹನಗಳ ನಿರ್ವಹಣೆ, ಬೆಂಕಿ ನಿಯಂತ್ರಣದ ಕೆಲಸ, ಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಲು ನೀರಿನ ಹೊಂಡಗಳನ್ನು ನಿರ್ಮಿಸುವುದು, ಪ್ರಚಾರ ಕಾರ್ಯಗಳು, ಆವಾಸಸ್ಥಾನ ಅಭಿವೃದ್ಧಿ ಕೆಲಸಗಳು ಹಾಗೂ ಜೈವಿಕ ಪರಿಸರ ಅಭಿವೃದ್ಧಿ ಕೆಲಸಗಳು ಇತ್ಯಾದಿ ಕೆಲಸಗಳನ್ನು ಈ ಯೋಜನೆಯ ಅಡಿಯಲ್ಲಿ ನಡೆಸಲಾಗುತ್ತದೆ.
4. 2406-02-110-0-47 – ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಅಭಿವೃದ್ಧಿಗಾಗಿ ಸಿಎಸ್ಎಸ್- ಪಿಸಿಸಿಎಫ್ ಡಬ್ಲ್ಯೂಎಲ್
“ವನ್ಯಜೀವಿ (ರಕ್ಷಣೆ) ಕಾಯಿದೆಯ ಅಡಿಯಲ್ಲಿ ವಿದ್ಯುಕ್ತವಾಗಿ ಅಧಿಸೂಚಿಸಲ್ಪಟ್ಟಿರುವ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳು, ಹುಲಿ ಯೋಜನೆಯಿಂದ ಕೇಂದ್ರದ ನೆರವು ಪಡೆಯುತ್ತಿರುವ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳಿಗೆ” ಈ ಯೋಜನೆಯು ನೆರವು ನೀಡುತ್ತದೆ. ಕೇಂದ್ರ ಸರ್ಕಾರವು ತನ್ನ ಪತ್ರ ಸಂಖ್ಯೆ ಎಫ್.ನಂ. 21-1/2009-ಡಬ್ಲ್ಯೂಎಲ್ಐ, ದಿನಾಂಕ 21-01-2009ರಂತೆ ಈಗ ಚಾಲ್ತಿಯಲ್ಲಿರುವ ಕೇಂದ್ರ ಪ್ರಾಯೋಜಿತ ಯೋಜನೆಯಾದ “ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳ ಅಭಿವೃದ್ಧಿಗಾಗಿ ನೆರವು” ಇದರ ವ್ಯಾಪ್ತಿಯನ್ನು ವಿಸ್ತರಿಸಿದೆ ಹಾಗೂ ಹೆಚ್ಚಿನ ಉಪಾಂಗಗಳು/ಕಾರ್ಯಚಟುವಟಿಕೆಗಳಾದ “ರಕ್ಷಿತ ಪ್ರದೇಶಗಳಿಗೆ ನೆರವು (ರಾಷ್ಟ್ರೀಯ ಉದ್ಯಾನವನಗಳು, ಅಭಯಾರಣ್ಯಗಳು, ಸಂರಕ್ಷಣಾ ಮೀಸಲುಗಳು ಹಾಗೂ ಸಮುದಾಯ ಮೀಸಲುಗಳು)” “ರಕ್ಷಿತ ಪ್ರದೇಶಗಳ ಹೊರಗೆ ವನ್ಯಜೀವಿಗಳ ರಕ್ಷಣೆ” ಹಾಗೂ “ತೀವ್ರ ಅಪಾಯದ ಅಂಚಿನಲ್ಲಿರುವ ಪ್ರಬೇಧಗಳು ಹಾಗೂ ಮೂಲ ಆವಾಸಸ್ಥಾನಗಳ ಪುನಶ್ಚೇತನ ಕಾರ್ಯಕ್ರಮ” ಇವುಗಳನ್ನು ಸೇರ್ಪಡೆಗೊಳಿಸಿದೆ ಹಾಗೂ ಅದನ್ನು 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ “ಸಿಎಸ್ಎಸ್-ವನ್ಯಜೀವಿ ಮೂಲ ಆವಾಸ ಸ್ಥಾನಗಳ ಸಮಗ್ರ ಅಭಿವೃದ್ಧಿ” ಎಂದು ಮರುನಾಮಕರಣ ಮಾಡಿದೆ. ಈ ಯೋಜನೆಯ ಅಡಿಯಲ್ಲಿ ಆವರ್ತನೀಯವಲ್ಲದ ಕಾಮಗಾರಿ ಬಾಬ್ತಿಗೆ ಭಾರತ ಸರ್ಕಾರವು ಶೇಕಡಾ 100ರಷ್ಟು ಆವರ್ತನೀಯ ಬಾಬ್ತಿಗೆ ಶೇಕಡಾ 50%ರಷ್ಟು ಹಾಗೂ ರಾಜ್ಯ ಸರ್ಕಾರವು ಸರಿದೂಗಿಸುವ ಅನುದಾನವಾಗಿ ಉಳಿದ ಶೇಕಡಾ 50%ರಷ್ಟು ನೀಡುತ್ತದೆ.

ನೀರಿನ ಪೂರೈಕೆಯನ್ನು ಹೆಚ್ಚಿಸುವುದು, ಮೂಲ ಅವಾಸಸ್ಥಾನಗಳ ಅಭಿವೃದ್ಧಿ, ಕಳ್ಳಬೇಟೆ ತಡೆಯುವುದು ಹಾಗೂ ಸರ್ವೇಕ್ಷಣೆಯನ್ನು ಸುಧಾರಿಸುವ ಕ್ರಮಗಳೂ ಸೇರಿದಂತೆ ವನ್ಯಜೀವಿಗಳನ್ನು ರಕ್ಷಿಸುವುದು, ಎಲ್ಲೆಗಳ ಗುರುತು ಮಾಡುವಿಕೆ, ಕಾಡುಪ್ರಾಣಿಗಳ ಆರೋಗ್ಯ ಹಾಗೂ ಪೆÇೀಷಣೆಗಾಗಿ ಪಶುವೈದ್ಯಕೀಯ ಸೌಲಭ್ಯಗಳು, ಸಂಶೋಧನೆ, ತರಬೇತಿ ಹಾಗೂ ಶೈಕ್ಷಣಿಕ ಸೌಲಭ್ಯಗಳು, ರಸ್ತೆ ನಿರ್ಮಾಣ, ಸಿಬ್ಬಂಗಳ ಕಟ್ಟಡಗಳು, ಕಾಡು ಪ್ರಾಣಿಗಳಿಂದ ಆಗುವ ಹಾನಿಗೆ ಪರಿಹಾರ, ಪ್ರಾಣಿಗಳ ದಾಳಿಯಿಂದ ಬೆಳೆಗಳನ್ನು ರಕ್ಷಿಸಲು ಭೌತಿಕ ತಡೆಗೋಡೆಗಳನ್ನು ನಿರ್ಮಿಸುವುದು ಇತ್ಯಾದಿ ಬಾಬ್ತು ಕಾಮಗಾರಿಗಳಿಗೆ ಈ ಯೋಜನೆಯಡಿಯಲ್ಲಿ ಹಣಕಾಸು ಒದಗಿಸಲಾಗುತ್ತದೆ. ಈ ಯೋಜನೆಯನ್ನು ಆದಿಚುಂಚನಗಿರಿ ನವಿಲುಧಾಮ, ಅರ್ಬಿತಿಟ್ಟು ಪಕ್ಷಿಧಾಮ, ಅತ್ತಿವೇರಿ ಪಕ್ಷಿಧಾಮ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ, ಕಾವೇರಿ ವನ್ಯಜೀವಿ ಅಭಯಾರಣ್ಯ, ದಾರೋಜಿ ಕರಡಿಧಾಮ, ಘಟಪ್ರಭಾ ಪಕ್ಷಿಧಾಮ, ಗುಡವಿ ಪಕ್ಷಿಧಾಮ, ಜಯಮಂಗಲಿ ಸಂರಕ್ಷಣಾ ಮೀಸಲು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮೇಲುಕೋಟೆ ವನ್ಯಜೀವಿ ಅಭಯಾರಣ್ಯ, ಮೂಕಾಂಬಿಕ ವನ್ಯಜೀವಿ ಅಭಯಾರಣ್ಯ, ನುಗು ವನ್ಯಜೀವಿ ಅಭಯಾರಣ್ಯ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ, ರಂಗನತಿಟ್ಟು ಪಕ್ಷಿಧಾಮ, ರಾಮನಗರ ರಣಹದ್ದು ಧಾಮ, ಶರಾವತಿ ವನ್ಯಜೀವಿ ಅಭಯಾರಣ್ಯ, ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ,, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ, ತಲಕಾವೇರಿ ವನ್ಯಜೀವಿ ಅಭಯಾರಣ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

 
 
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?