English     ನಮ್ಮನ್ನು ಅನುಸರಿಸಿ:
 
ವನ್ಯಜೀವಿ ಮುಖಪುಟ > ವನ್ಯಜೀವಿ > ರಾಷ್ಟ್ರೀಯ ಉದ್ಯಾನವನಗಳು
ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು

ಅಧಿಸೂಚನೆ ಸಂಖ್ಯೆ ಎಫ್ಇಇ 221 ಎಫ್ಡಬ್ಲ್ಯೂಎಲ್ 99 ದಿನಾಂಕ 18-08-2003ರಂತೆ 339.866 ಚದರ ಕಿಮೀ. ವಿಸ್ತೀರ್ಣದ ಅನ್ಶಿ ರಾಷ್ಟ್ರೀಯ ಉದ್ಯಾನವನವನ್ನು ಘೋಷಿಸಲಾಯಿತು. ಮುಂದೆ, ಅಧಿಸೂಚನೆ ಸಂಖ್ಯೆ ಎಫ್ಇಇ 16 ಎಫ್ಡಬ್ಲ್ಯೂಎಲ್ 2008 ದಿನಾಂಕ 21-08-2009ರಂತೆ ಇದಕ್ಕೆ ಹೊಂದಿಕೊಂಡಿರುವ 77.48 ಚದರ ಕಿಮೀ. ವಿಸ್ತೀರ್ಣದ ಜೋಯಿಡಾ ಹಾಗೂ ಕಾರವಾರ ತಾಲ್ಲೂಕುಗಳ ಮೀಸಲು ಅರಣ್ಯವನ್ನು ಅಧಿಕವಾಗಿ ಸೇರಿಸಿ ಅನ್ಶಿ ರಾಷ್ಟ್ರೀಯ ಉದ್ಯಾನವನದ ವಿಸ್ತೀರ್ಣವನ್ನು 417.34 ಚದರ ಕಿಮೀ.ಗಳಾಗಿ ಮಾಡಲಾಯಿತು.

ರಾಷ್ಟ್ರೀಯ ಉದ್ಯಾನವನಗಳ ಹೆಸರು

ವಿಸ್ತೀರ್ಣ (ಚ.ಕಿಮೀ)

ಹತ್ತಿರದ ಜಿಲ್ಲಾ ಕೇಂದ್ರ

ಭೇಟಿ ನೀಡಬಹುದಾದ ಕಾಲ

ಅನ್ಶಿ ರಾಷ್ಟ್ರೀಯ ಉದ್ಯಾನವನ 417.34

ಕಾರವಾರ 60
ಬೆಂಗಳೂರು 580

ನವೆಂಬರ್-ಜೂನ್

ಬಂಡೀಪುರ ರಾಷ್ಟ್ರೀಯ ಉದ್ಯಾನವನ 872.24

ಚಾಮರಾಜನಗರ 52
ಬೆಂಗಳೂರು 218

ಜೂನ್-ಅಕ್ಟೋಬರ್

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 260.51

ಬೆಂಗಳೂರು 22

ಎಲ್ಲಾ ಕಾಲಗಳಲ್ಲೂ

ಕುದುರೆಮುಖ ರಾಷ್ಟ್ರೀಯ ಉದ್ಯಾನವನ 600.57

ಉಡುಪಿ 90
ಬೆಂಗಳೂರು 263

ಡಿಸೆಂಬರ್-ಮೇ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ 643.39

ಮೈಸೂರು 120
ಬೆಂಗಳೂರು 240

ಸೆಪ್ಟೆಂಬರ್-ಮಾರ್ಚ್

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳಿಗೆ ರಕ್ಷಣಾ ಸೌಲಭ್ಯಗಳು

ವಿವಿಧ ಸರ್ಕಸ್ ಕಂಪನಿಗಳಿಂದ ಬಿಡುಗಡೆಗೊಳಿಸ್ಪಲ್ಪಟ್ಟ 100ಕ್ಕೂ ಹೆಚ್ಚು ಸಿಂಹಗಳು ಮತ್ತು ಹುಲಿಗಳಿಗೆ ಆಶ್ರಯ ಒದಗಿಸಲು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ರಕ್ಷಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. 31-3-2010ರಂತೆ ವಿವಿಧ ಸರ್ಕಸ್ ಕಂಪನಿಗಳಿಂದ ಬಿಡುಗಡೆಗೊಳಿಸ್ಪಲ್ಪಟ್ಟ ಸಿಂಹಗಳು ಮತ್ತು ಹುಲಿಗಳ ಪೈಕಿ 36 ಸಿಂಹಗಳು ಮತ್ತು 1 ಹುಲಿಗೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಖಲಂದರ್ಗಳು, ಹಾದಿತಪ್ಪಿದ, ಗಾಯಗೊಂಡ, ಅನಾಥವಾದ, ಬಲೆಗೆಬಿದ್ದ ಮತ್ತು ಖಾಯಿಲೆಗಳು ಇತ್ಯಾದವುಗಳಿಂದ ರಕ್ಷಿಸಲ್ಪಟ್ಟ ಕರಡಿಗಳ ಹಿತದೃಷ್ಠಿಯಿಂದ ನವದೆಹಲಿಯ ವನ್ಯಜೀವಿ ಎಸ್ಓಎಸ್ನ ಸಹಯೋಗದೊಂದಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ ರಕ್ಷಿತ ಪ್ರಾಣಿಗಳು ಇರುವ ಹಾಲಿ ಇರುವ ಕರಡಿ ಸಫಾರಿಯ ಭಾಗವೊಂದನ್ನು ಉಪಯೋಗಿಸಿಕೊಂಡು ಕರಡಿ ರಕ್ಷಣಾ ಕೆಂದ್ರವೊಂದನ್ನು ಸ್ಥಾಪಿಸಲಾಗಿದೆ ಹಾಗೂ ಇದು ಅಂತಹ ಇನ್ನೂ ಹೆಚ್ಚಿನ ಕರಡಿಗಳನ್ನು ರಕ್ಷಿಸಲು ಮತ್ತು ಪುನರ್ವಸತಿ ಕಲ್ಪಿಸಲು ಸಹಾಯಕವಾಗುತ್ತದೆ. 31-3-2014ರಂತೆ ರಕ್ಷಿಸಲ್ಪಟ್ಟ 78 ಕರಡಿಗಳಿಗೆ ಈ ರಕ್ಷಣಾ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸೇರಿದ 25 ಕರಡಿಗಳ ನಿರ್ವಹಣೆ ವೆಚ್ಚವಾದ 5.30 ಲಕ್ಷ ರೂಪಾಯಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನವೇ ಭರಿಸುತ್ತದೆ. ಉಳಿದ ಇತರ ಕರಡಿಗಳ ನಿರ್ವಹಣಾ ವೆಚ್ಚವನ್ನು ವನ್ಯಜೀವಿ ಎಸ್ಓಎಸ್ ನೇರವಾಗಿ ಭರಿಸುತ್ತದೆ.

ಯೂರೋಪ್ನ ಹಲವಾರು ಸರ್ಕಸ್ ಕಂಪನಿಗಳಿಂದ ಬಿಡುಗಡೆಗೊಳಿಸಲ್ಪಟ್ಟ ಹುಲಿಗಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆಶ್ರಯ ಒದಗಿಸಲಾಗಿದೆ. 31-12-2011ರಂತೆ ಈ ಕೇಂದ್ರದಲ್ಲಿ 2 ಹುಲಿಗಳಿವೆ. ಈ ಪ್ರಾಣಿಗಳ ನಿರ್ವಹಣಾ ವೆಚ್ಚವನ್ನು ಬ್ರಿಟನ್ನ ಬಾರ್ನ್ ಫ್ರೀ ಫೌಂಡೇಶನ್ನ ನಿಧಿಯಿಂದ ಭರಿಸಲಾಗುತ್ತದೆ.


 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?