ವನ್ಯಜೀವಿ ವಿಭಾಗಕ್ಕೆ
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ ಹಾಗೂ ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್ ರವರು ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅಭಯಾರಣ್ಯಗಳನ್ನು ಹೊಂದಿರುವ ರಕ್ಷಿತ ಪ್ರದೇಶ ಎಂದು ನಿರ್ಧರಿಸಲ್ಪಟ್ಟಿರುವ ರಾಜ್ಯದ 17% ಅರಣ್ಯ ಪ್ರದೇಶವನ್ನು ನಿರ್ವಹಿಸುರುತ್ತಾರೆ.
ಕರ್ನಾಟಕವು 5 ರಾಷ್ಟ್ರೀಯ ಉದ್ಯಾನವನಗಳು ಹಾಗೂ 30 ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿದೆ.
ವನ್ಯಜೀವಿ ವಿಭಾಗದ ಕಾರ್ಯಚಟುವಟಿಕೆಗಳು :
ಕರ್ನಾಟಕ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಎರಡು ಮುಖ್ಯ ಕೆಲಸಗಳನ್ನು ಹೊಂದಿದೆ. ಮುಖ್ಯವಾದ ಕೆಲಸವೆಂದರೆ 5 ರಾಷ್ಟ್ರೀಯ ಉದ್ಯಾನವನಗಳು ಹಾಗೂ 30 ಅಭಯಾರಣ್ಯಗಳನ್ನು ಹಾಗೂ 15 ಸಂರಕ್ಷಣಾ ಮೀಸಲು ಅರಣ್ಯ, 1 ಸಮುದಾಯ ಮೀಸಲುಗಳನ್ನು ರಕ್ಷಿಸುವುದು ಮತ್ತು ನಿರ್ವಹಿಸುವುದು. ಇದಲ್ಲದೆ, ವನ್ಯಜೀವಿ ವಿಭಾಗವು ವನ್ಯಜೀವಿ ರಕ್ಷಣಾ ಕಾಯಿದೆ 1972ರ ಪರಿಶಿಷ್ಠಗಳಲ್ಲಿ ಪಟ್ಟಿಮಾಡಿರುವ ರಾಜ್ಯದ ಎಲ್ಲಾ ವನ್ಯಜೀವಿಗಳನ್ನು (ಅರಣ್ಯರಹಿತ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ವನ್ಯಮೃಗಗಳೂ ಸೇರಿದಂತೆ) ಕಾಪಾಡುವ ಮತ್ತು ಸಂರಕ್ಷಿಸುವ ಕೆಲಸವನ್ನು ಮಾಡುತ್ತದೆ.
ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅಭಯಾರಣ್ಯಗಳ ನಿರ್ವಹಣೆಯನ್ನು ಮುಖ್ಯವಾಗಿ ರಾಜ್ಯ ರೂಪಿಸಿರುವ ಯೋಜನೆಗಳೂ ಸೇರಿದಂತೆ ಕೇಂದ್ರ ಪ್ರಾಯೋಜಿತ ಹಾಗೂ ಕೇಂದ್ರ ರೂಪಿಸಿರುವ ಯೋಜನೆಗಳ ಅಡಿಯಲ್ಲಿ ಮಾಡಲಾಗುತ್ತದೆ. ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೊಂಡಿರುವ ಕಾರ್ಯಚಟುವಟಿಕೆಗಳು ಈ ಕೆಳಕಂಡಂತಿವೆ.
- ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅಭಯಾರಣ್ಯಗಳ ನಿರ್ವಹಣೆಯನ್ನು ಮುಖ್ಯವಾಗಿ ರಾಜ್ಯ ರೂಪಿಸಿರುವ ಯೋಜನೆಗಳೂ ಸೇರಿದಂತೆ ಕೇಂದ್ರ ಪ್ರಾಯೋಜಿತ ಹಾಗೂ ಕೇಂದ್ರ ರೂಪಿಸಿರುವ ಯೋಜನೆಗಳ ಅಡಿಯಲ್ಲಿ ಮಾಡಲಾಗುತ್ತದೆ. ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೊಂಡಿರುವ ಕಾರ್ಯಚಟುವಟಿಕೆಗಳು ಈ ಕೆಳಕಂಡಂತಿವೆ.
- ಕಳ್ಳಬೇಟೆ ನಿಗ್ರಹ ಶಿಬಿರಗಳು, ಗಸ್ತು ತಿರುಗುವುದು ಹಾಗೂ ಶಿಬಿರಗಳ ಮೂಲಕ ರಕ್ಷಿಸುವುದು.
- ಜೈವಿಕ ಪರಿಸರ ಅಭಿವೃದ್ಧಿ ಚಟುವಟಿಕೆಗಳು, ಬದಲಿ ಸಂಪನ್ಮೂಲಗಳನ್ನು ಒದಗಿಸುವುದರ ಮೂಲಕ ರಕ್ಷಿತ ಪ್ರದೇಶಗಳಲ್ಲಿ ಜಾನುವಾರು/ಮನುಷ್ಯರ ಇರುವಿಕೆಯನ್ನು ಕಡಿಮೆಗೊಳಿಸುವುದು.
- ತಡೆಗಳಾದ ಆನೆ ನಿರೋಧಕ ಕಂದಕಗಳು, ಸೌರ ಅಥವಾ ಬ್ಯಾಟರಿ ಶಕ್ತಿಯ ಬೇಲಿಗಳು, ಒಣ ಇಟ್ಟಿಗೆ ಕಲ್ಲುಗಳ ಗೋಡೆಗಳನ್ನು ನಿರ್ಮಿಸುವುದು ಹಾಗೂ ವನ್ಯಜೀವಿ ಅವಾಸಸ್ಥಾನಗಳ ಪ್ರದೇಶದಲ್ಲಿ ಓಡಾಟ ಮಾರ್ಗಗಳನ್ನು ನಿರ್ಮಿಸುವುದನ್ನು ಕೈಗೆತ್ತಿಕೊಳ್ಳುವುದರ ಮೂಲಕ ಮನುಷ್ಯ-ಪ್ರಾಣಿಗಳ ನಡುವಿನ ಸಂಘರ್ಷವನ್ನು ಕಡಿಮೆಗೊಳಿಸುವುದು.
- ಮನುಷ್ಯನ ಸಾವಿಗೆ ಕೃಪಾಧನ/ಪರಿಹಾರ ನೀಡುವುದು, ವನ್ಯಜೀವಿಗಳಿಂದ ಬೆಳೆ ಹಾಗೂ ಜಾನುವಾರುಗಳಿಗೆ ಉಂಟಾಗುವ ನಷ್ಟಕ್ಕೆ ಪರಿಹಾರ ನೀಡುವುದು.
- ಶಿಕ್ಷಣ, ತರಬೇತಿ ಹಾಗೂ ಸಂಶೋಧನಾ ಚಟುವಟಿಕೆಗಳು, ಪ್ರಕಟಣೆ, ಮೇಲ್ವಿಚಾರಣೆ, ಇತ್ಯಾದಿ.,
ವನ್ಯಜೀವಿ ಸಂರಕ್ಷಣೆ :
ರಾಜ್ಯದಲ್ಲಿ 9,329.187 ಚದರ ಕಿಲೋ ಮೀಟರ್ಗಳ ವಿಸ್ತೀರ್ಣದ 5 ರಾಷ್ಟ್ರೀಯ ಉದ್ಯಾನವನಗಳು ಹಾಗೂ 30 ಅಭಯಾರಣ್ಯಗಳನ್ನು ಒಳಗೊಂಡ ಅರಣ್ಯ ಪ್ರದೇಶದ ವಿವರಗಳು ಕೆಳಕಂಡಂತಿದೆ :
ಕ್ರಮ ಸಂಖ್ಯೆ
|
ವೃತ್ತ
|
ವಿಭಾಗ
|
ರಾಷ್ಟ್ರೀಯ ಉದ್ಯಾನ/ವನ್ಯಜೀವಿ ಅಭಯಾರಣ್ಯ
|
ವಿಸ್ತೀರ್ಣ(ಚ.ಕಿಮೀ)
|
1
|
CCF Bangalore Circle
|
1. DCF, Bannerghatta National Park
|
1. Bannerghatta National Park
|
260.51
|
|
2. DCF, Ramanagara Dvn.
|
2.Ramadevara Betta vulture Sanctuary
|
3.46
|
2
|
CCF Mysore Circle
|
3. DCF, WLD, Mysore
|
3. Adichunchanagiri Peacock Wildlife Sancutuary
|
0.84
|
|
|
4. Ranganathittu Bird Sanctuary
|
0.67
|
|
|
5. Arbithittu Wildlife Sanctuary
|
13.50
|
|
|
6. Melkote Wildlife Sanctuary
|
49.82
|
3
|
CCF, Chamarajanagar Circle,
|
4. CF & Director Chamarajanagar
|
7. BRT Tiger Reserve
|
539.52
|
|
5. DCF, Cauvery WLD, Kollegal
|
8. Cauvery Wildlife Sanctuary
|
1027.53
|
|
6. DCF Kollegal (T) Dn,
|
9. Malai Mahadeshwara Wildlife Sanctuary
|
906.187
|
4
|
CCF, Kodagu Circle
|
7. DCF, WLD, Madikeri
|
10. Pushpagiri Wildlife Sanctuary
|
102.92
|
|
|
11. Talacauvery Wildlife Sanctuary
|
105.59
|
|
|
12. Bramhagiri Wildlife Sanctuary
|
181.29
|
5
|
CCF, Mangalore Circle
|
8. DCF, Kudremukh WL Dvn, Karkala
|
13. Kudremukh National Park
|
600.57
|
|
14. Someshwara Wildlife Sanctuary
|
314.25
|
|
|
15. Mookambika Wildlife Sanctuary
|
370.37
|
6
|
APCCF
Field Director Project Tiger, Shimoga/
CCF
Shimoga Circle
|
CCF & Director,
Dandeli
|
16. Dandeli Tiger Reserve
|
886.41
|
17. Anshi Tiger Reserve
|
417.34
|
7
|
CCF, Shimoga Circle
|
10. DCF, WL Dvn., Shimoga
|
18. Shettihalli Wildlife Sanctuary
|
395.60
|
19. Sharavathi Wildlife Sancurary
|
431.23
|
20. Gudavi Bird Sanctuary
|
0.73
|
8
|
APCCF
Field Director Project Tiger, Shimoga./
CCF, Chikmagalur Circle
|
11. CF & Director,
Bhadra T.R.
|
21. Bhadra Wildlife Sanctuary
|
500.16
|
9
|
CCF, Dharwad Circle
|
12. ACF, WL SubDvn, Ranebennur
|
22. Ranebennur Blackbuck Sanctuary
23. Attiveri Bird Sanctuary
|
119.00
2.23
|
10
|
CCF, Bellary Circle
|
13.DCF, Bellary, (T)
|
24. Daroji Bear Sanctuary
|
82.72
|
|
14. DCF, Davanagere (T) Dvn, Davanagere
|
25. Rangayyadurga Four Horned Antelope Wildlife Sanctuary
|
77.23
|
|
15. DCF, Bellary
|
26. Gudekote Sloth Bear Sanctuary
|
47.61
|
|
16. DCF, Chitradurga
|
27. Jogimatti Wildlife Sanctuary
|
100.48
|
11
|
APCCF Field Director Project Tiger, Mysore
|
17. CF & Director Bandipur
|
28. Bandipur Tiger Reserve
|
872.24
|
18. CF & Director Hunsur
|
29. Nugu Wildlife Sanctuary 30. Nagarahole Tiger Reserve
|
30.32 643.39
|
12
|
CCF, Belgaum Circle
|
19. DCF, Belgaum (T) Dvn, Belgaum
|
31. Bhimgad Wildlife Sanctuary
|
190.42
|
|
20. DCF, Gokak (T) Dvn, Gokak
|
32. Ghataprabha Bird Sanctuary
|
29.78
|
|
21. DCF, Bagalkote (T)
|
33. Yadahalli Chinkara Wildlife Sanctuary
|
96.36
|
13
|
CCF, Gulbarga Circle
|
21. DCF, Gulbarga (T) vn. Gulbarga
|
34. Chincholi Wildlife Sanctuary
|
134.88
|
14
|
CCF
Hassan Circle
|
22. DCF, Tumkur (T) Dvn., Tumkur
|
35. Thimlapura Wildlife Sanctuary
|
50.86
|
Total Area
|
9,583.787
|
ಯೋಜನೆಗಳು :
- ಹುಲಿ ಯೋಜನೆ
ಈ ಯೋಜನೆಯನ್ನು 1973ರಿಂದ ಅನುಷ್ಠಾನಗೊಳಿಸಲಾಗಿದೆ ಮತ್ತು ಭಾರತ ಸರ್ಕಾರವು ಶೇಕಡಾ 50%ರಷ್ಟು ಆವರ್ತನೀಯ ಬಾಬ್ತನ್ನು ಹಾಗೂ ಶೇಕಡಾ 100%ರಷ್ಟು ಆವರ್ತನೀಯವಲ್ಲದ ಬಾಬ್ತನ್ನು ಒದಗಿಸುತ್ತದೆ. ಬಂಡೀಪುರ ಹುಲಿ ಮೀಸಲು, ರಾಜೀವ್ ಗಾಂಧಿ (ನಾಗರಹೊಳೆ) ಹುಲಿ ಮೀಸಲು, ಭದ್ರಾ ಹುಲಿ ಮೀಸಲು ಮತ್ತು ಅನ್ಶಿ-ದಾಂಡೇಲಿ ಹುಲಿ ಮೀಸಲು, ಹುಲಿ ಯೋಜನೆ ಅಡಿಯಲ್ಲಿ ಬರುತ್ತವೆ. ಈ ಯೋಜನೆಯ ಅಡಿಯಲ್ಲಿ ಕೈಗೊಳ್ಳುವ ಕೆಲಸಗಳೆಂದರೆ; ಹುಲಿ ಸಂರಕ್ಷಣಾ ಪಡೆ, ಮಳೆಗಾಲದ ಗಸ್ತು ದಳಗಳನ್ನು ಸ್ಥಾಪಿಸುವುದು, ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಮತ್ತು ನಿರ್ವಹಣೆ, ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸಂಘಟಿಸುವುದರ ಮೂಲಕ ಕಳ್ಳಬೇಟೆಯನ್ನು ತಡೆಯುವುದು, ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ವೈರ್ಲೆಸ್ ಸೆಟ್ಗಳ, ವಾಹನಗಳ ನಿರ್ವಹಣೆ, ಬೆಂಕಿ ನಿಯಂತ್ರಣದ ಕೆಲಸ, ಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಲು ನೀರಿನ ಹೊಂಡಗಳನ್ನು ನಿರ್ಮಿಸುವುದು, ಪ್ರಚಾರ ಕಾರ್ಯಗಳು, ಆವಾಸಸ್ಥಾನ ಅಭಿವೃದ್ಧಿ ಕೆಲಸಗಳು ಹಾಗೂ ಜೈವಿಕ ಪರಿಸರ ಅಭಿವೃದ್ಧಿ ಕೆಲಸಗಳು ಇತ್ಯಾದಿ.
ರಾಜ್ಯದ 5 ಹುಲಿ ಮೀಸಲುಗಳಲ್ಲಿ ರಾಷ್ಟ್ರದ ಅತಿ ಹೆಚ್ಚು ಹುಲಿಗಳಿವೆ ಹಾಗೂ ಹುಲಿ ಸಂತತಿಯಲ್ಲಿ ರಾಜ್ಯವು ಮೊದಲನೇ ಸ್ಥಾನದಲ್ಲಿದೆ. 2010ರ ಹುಲಿ ಗಣನೆಯಂತೆ ರಾಜ್ಯದಲ್ಲಿ 300 ಹುಲಿಗಳಿವೆ. 2013ರ ಹುಲಿ ಗಣನೆಯಂತೆ ರಾಜ್ಯದಲ್ಲಿ 406 ಹುಲಿಗಳಿವೆ.
- ಆನೆ ಯೋಜನೆ
ಪ್ರಸ್ತುತ ಈ ಯೋಜನೆಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹುಣಸೂರು, ಚಾಮರಾಜನಗರ, ಕೊಳ್ಳೇಗಾಲ, ಮಡಿಕೇರಿ, ವಿರಾಜಪೇಟೆ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿದೆ. ಈ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಕೆಲಸಗಳೆಂದರೆ; ಹೊಸ ಆನೆ ನಿರೋಧಕ ಕಂದಕಗಳನ್ನು ತೋಡುವುದು ಹಾಗೂ ಹೊಸ ಸೌರ ಬೇಲಿಯನ್ನು ನಿರ್ಮಿಸುವುದು ಮತ್ತು ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು, ಕಳ್ಳಬೇಟೆ ನಿಗ್ರಹ ಶಿಬಿರಗಳು, ಕೊಳ್ಳೆ ವಿರೋಧಿ ಶಿಬಿರಗಳನ್ನು ನಿರ್ವಹಿಸುವುದು/ಸ್ಥಾಪಿಸುವುದು ಹಾಗೂ ಗಲಭೆಕೋರ ಆನೆಗಳ ನಿರ್ವಹಣೆ/ಸೆರೆಹಿಡಿಯುವುದು ಹಾಗೂ ಪುನರ್ವಸತಿ, ಅರಿವಳಿಕೆ ಉಪಕರಣಗಳು ಹಾಗೂ ಔಷಧಿಗಳನ್ನು ಪಡೆದುಕೊಳ್ಳುವುದು, ಸಿಬ್ಬಂದಿ ತರಬೇತಿ/ಕೌಶಲ್ಯಗಳನ್ನು ಜಾರಿ ಮಾಡುವುದು, ರೋಗಪೀಡಿತ ಹಾಗೂ ಗಾಯಗೊಂಡ ಆನೆಗಳ ಶುಷ್ರೂಷೆ ಮಾಡಲು ಹಾಗೂ ಮರಣೋತ್ತರ ಪರೀಕ್ಷೆ ನಡೆಸಲು ಪಶು ವೈದ್ಯರಿಗೆ ತರಬೇತಿ ನೀಡುವುದು, ಆನೆ ಮೀಸಲು ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಪ್ರಚಾರ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿ., ರಾಜ್ಯವು ದೇಶದ ಆನೆ ಸಂತತಿಯ ಶೇಕಡಾ 25%ರಷ್ಟು ಹೊಂದಿದೆ. 2012ರ ಗಣತಿಯಂತೆ 6072 ಆನೆಗಳಿವೆ.
- ನೀಲಗಿರಿ ಮೀಸಲು ಜೈವಿಕ ಮಂಡಲ
ಅವಾಸಸ್ಥಾನ ಮತ್ತು ಪರಿಸರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ನೀಲಗಿರಿ ಮೀಸಲು ಜೈವಿಕ ಮಂಡಲ ಯೋಜನೆಯನ್ನು ಭಾರತ ಸರ್ಕಾರವು ಪ್ರಾಯೋಜಿಸುತ್ತಿದೆ. ನೀಲಗಿರಿ ಮೀಸಲು ಜೈವಿಕ ಮಂಡಲ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಚಾಮರಾಜನಗರ ವನ್ಯಜೀವಿ ವಿಭಾಗವನ್ನು ಒಳಗೊಂಡಿದೆ.
- ರಾಜ್ಯ ರೂಪುರೇಷೆ ಯೋಜನೆಗಳು
- 2406-02-1100-01-ಪ್ರಕೃತಿ ಸಂರಕ್ಷಣೆ (ರಾಜ್ಯ ಯೋಜನೆ)
- 2406-02-1100-49-ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುಸರ್ವಸತಿ
- 2406-01-8000-15-ಮನುಷ್ಯ-ಪ್ರಾಣಿಗಳ ಸಂಘರ್ಷ ಕಡಿಮೆ ಮಾಡಲು ದೂರಗಾಮಿ ಕ್ರಮಗಳು-059-ಪ್ರಮುಖ ಕಾಮಗಾರಿ
- 2406-02-1100-50-ಹೊಸದಾಗಿ ಘೋಷಿಸಲ್ಪಟ್ಟ ಅಭಯಾರಣ್ಯಗಳ ಅಭಿವೃದ್ಧಿ-ಪ್ರಮುಖ ಕಾಮಗಾರಿಗಳು
- 2406-01-8000-14-ಹುಲಿ ಮೀಸಲಿನಿಂದ ಮತ್ತು ರಾಷ್ಟ್ರೀಯ ಉದ್ಯಾನವನಗಳಿಂದ ಕುಟುಂಬಗಳ ಐಚ್ಛಿಕ ಪುಸರ್ವಸತಿ-059-ಇತರ ವೆಚ್ಚಗಳು.
- 2406-01-8000-14-ಹುಲಿ ಮೀಸಲಿನಿಂದ ಮತ್ತು ರಾಷ್ಟ್ರೀಯ ಉದ್ಯಾನವನಗಳಿಂದ ಕುಟುಂಬಗಳ ಐಚ್ಛಿಕ ಪುಸರ್ವಸತಿ-422 ವಿಶೇಷ ಉಪಾಂಗ ಯೋಜನೆ (ಎಸ್ಸಿಪಿ)
- 2406-01-8000-14-ಹುಲಿ ಮೀಸಲಿನಿಂದ ಮತ್ತು ರಾಷ್ಟ್ರೀಯ ಉದ್ಯಾನವನಗಳಿಂದ ಕುಟುಂಬಗಳ ಐಚ್ಛಿಕ ಪುಸರ್ವಸತಿ-423 ಬುಡಕಟ್ಟು ವಿಶೇಷ ಯೋಜನೆ (ಟಿಎಸ್ಪಿ)
- ಕೇಂದ್ರ ಪ್ರಾಯೋಜಿತ ಯೋಜನೆಗಳು
- 2406-02-1100-02-ಸಿಎಸ್ಎಸ್ ಹುಲಿ ಯೋಜನೆ
- 2406-02-1100-47-ಸಿಎಸ್ಎಸ್-ವನ್ಯಜೀವಿ ಆವಾಸಸ್ಥಾನಗಳ ಸಮಗ್ರ ಅಭಿವೃದ್ಧಿ
- ಕೇಂದ್ರ ರೂಪುರೇಷೆ ಯೋಜನೆಗಳು
- 2406-02-1100-23-ಸಿಎಸ್ಎಸ್- ಆನೆ ಯೋಜನೆ
- 2406-02-1100-20- ನೀಲಗಿರಿ ಮೀಸಲು ಜೈವಿಕ ಮಂಡಲ
- ರೂಪುರೇಷೇತರ ಯೋಜನೆಗಳು
- 2406-02-1100-01- ಪ್ರಕೃತಿ ಸಂರಕ್ಷಣೆ (ರೂಪುರೇಷೆರಹಿತ)
- 2406-02-1100-46- ರಕ್ಷಿತ ಪ್ರದೇಶ ಅಭಿವೃದ್ಧಿ ನಿದಿ
- 2406-02-1100-01- ಪ್ರಕೃತಿ ಸಂರಕ್ಷಣೆ 059- ಇತರ ವೆಚ್ಚಗಳು (ಆಹಾರ ಮತ್ತು ಮೇವು)
- 2406-02-1100-01- ಪ್ರಕೃತಿ ಸಂರಕ್ಷಣೆ 015- ಹೆಚ್ಚಿನ ವೆಚ್ಚಗಳು (ಪರಿಹಾರ)
|