English     ನಮ್ಮನ್ನು ಅನುಸರಿಸಿ:
 
ಜೆ.ಎಫ್.ಪಿ.ಎಮ್ ಮತ್ತು ಕೃಷಿ ಅರಣ್ಯ ಮುಖಪುಟ > ಜೆ.ಎಫ್.ಪಿ.ಎಮ್ ಮತ್ತು ಕೃಷಿ ಅರಣ್ಯ > ಜಂಟಿ ಅರಣ್ಯ ಯೋಜನೆ ಹಾಗೂ ನಿರ್ವಹಣೆ
ಜಂಟಿ ಅರಣ್ಯ ಯೋಜನೆ ಹಾಗೂ ನಿರ್ವಹಣೆ

ಪ್ರಸ್ತಾವನೆ

ವಿವಿಧ ರೀತಿಯ ಜೀವಿಗಳ ಮಧ್ಯಪ್ರವೇಶ ಅಂದರೆ; ಅಕ್ರಮ ಮರ ಕಡಿಯುವಿಕೆ, ಜಾನುವಾರುಗಳ ಮೇಯಿಸುವಿಕೆ, ಬೆಂಕಿ ಹಾಗೂ ಒತ್ತುವರಿಯಿಂದಾಗಿ ಹಲವಾರು ವರ್ಷಗಳಿಂದ ಅರಣ್ಯಗಳಿಗೆ ಹಾನಿಯಾಗುವುದು ಹೆಚ್ಚಾಗಿರುವುದು ಹಲವಾರು ದಶಕಗಳಿಂದ ಅನುಭವಕ್ಕೆ ಬಂದಿರುವ ವಿಷಯ. ಸಿಬ್ಬಂದಿಗಳ ಹೆಚ್ಚಳ, ಸಂಪರ್ಕ ಜಾಲ ಹಾಗೂ ಹೆಚ್ಚಿನ ತೀವ್ರವಾದ ಗಸ್ತಿನಂತಹ ಹಲವಾರು ಕ್ರಮಗಳ ಹೊರತಾಗಿಯೂ, ನಿರೀಕ್ಷಿತ ಫಲಗಳನ್ನು ಸಾಧಿಸಲಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಗ್ರಾಮಗಳಲ್ಲಿ ಹಾಗೂ ಅರಣ್ಯಗಳ ಅಂಚಿನಲ್ಲಿ ವಾಸಿಸುವ ಜನರು ಅಳಿದುಹೋಗಿರುವ ಅರಣ್ಯಗಳ ಸಂರಕ್ಷಣೆ, ಯೋಜನೆ, ರಕ್ಷಣೆ, ಮರುಸೃಷ್ಠಿ, ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ರಾಜ್ಯ ಸರ್ಕಾರವು ಬಯಸುತ್ತದೆ.

ಅಲ್ಲದೆ ಹಲವಾರು ಕಾರಣಗಳಿಂದಾಗಿ ಸಿ ಮತ್ತು ಡಿ ಜಮೀನುಗಳು, ಗೋಮಾಳ ಜಮೀನುಗಳು, ಕೆರೆ ದಂಡೆಗಳು, ರಸ್ತೆ ಬದಿಗಳು, ಕಾಲುವೆ ದಂಡೆಗಳು ಮತ್ತು ಇತರ ಸರ್ಕಾರಿ ಭೂಮಿಗಳಲ್ಲಿ ಬೆಳೆಸಿದ ನೆಡುತೋಪುಗಳು ಮಾಯವಾಗುತ್ತಿವೆ. ಅರಣ್ಯೀಕರಣ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸ್ವತ್ತಿನ ಸಂಪನ್ಮೂಲಗಳು, ಅವುಗಳಿಂದ ಬರುವ ಉತ್ಪನ್ನಗಳು ಹಾಗೂ ಪ್ರಬೇಧಗಳ ಆಯ್ಕೆಯಲ್ಲಿ ಹಲವಾರು ಸಂಘರ್ಷಗಳಿವೆ. ಈ ಪ್ರವೃತ್ತಿಯನ್ನು ಹೋಗಲಾಡಿಸಲು ಈ ಸಾರ್ವಜನಿಕ ಸ್ವತ್ತಿನ ಸಂಪನ್ಮೂಲಗಳ ಸಂರಕ್ಷಣೆ, ಯೋಜನೆ, ರಕ್ಷಣೆ, ಮರುಸೃಷ್ಠಿ, ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಜನರನ್ನು ತೊಡಗಿಸಿಕೊಳ್ಳಲು ಸರ್ಕಾರವು ಬಯಸುತ್ತದೆ.

ಗ್ರಾಮೀಣ ಜನರ ಸಹಕಾರ ಮತ್ತು ತೊಡಗಿಸಿಕೊಳ್ಳುವಿಕೆಯಿಂದ ಜಂಟಿ ಅರಣ್ಯ ಯೋಜನೆ ಹಾಗೂ ನಿರ್ವಹಣೆಯ (ಜೆಎಫ್ಪಿಎಂ) ವ್ಯವಸ್ಥೆಯ ಮೂಲಕ ಮೇಲ್ಕಂಡ ಉದ್ದೇಶಗಳನ್ನು ಸಾಧಿಸಬಹುದೆಂಬ ನಿರ್ಧಾರಕ್ಕೆ ಸರ್ಕಾರವು ಬಂದಿದೆ. ಸರ್ಕಾರೇತರ ಸಂಸ್ಥೆಗಳು ಈ ಆಂದೋಲನವನ್ನು ಪರಿಣಾಮಕಾರಿಯಾಗಿಸಲು ಸಹಕಾರಿಯಾಗಬಹುದು.

ಉದ್ದೇಶಗಳು

ಅರಣ್ಯ ಪ್ರದೇಶಗಳ ಹಾಗೂ ಜೀವಿಗಳ ಒತ್ತಡಗಳಿಂದಾಗಿ ಅಳಿದುಹೋಗಿರುವ ಇತರ ಸರ್ಕಾರಿ ಭೂಮಿಗಳ ಸಂರಕ್ಷಣೆ, ಯೋಜನೆ, ರಕ್ಷಣೆ, ಮರುಸೃಷ್ಠಿ, ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಮತ್ತು ಅಂತಹ ಇತರ ಕಾರ್ಯಗಳನ್ನು ನಿರ್ವಹಿಸಲು ಜನರನ್ನು ತೊಡಗಿಸಿಕೊಳ್ಳುವ ದೃಷ್ಠಿಯಿಂದ ಗ್ರಾಮದಲ್ಲಿನ ಆಸಕ್ತ ಗ್ರಾಮವಾಸಿಗಳು ತಾವೇ ಗ್ರಾಮ ಅರಣ್ಯ ಸಮಿತಿಗಳನ್ನು (ವಿಹೆಚ್ಸಿ) ರಚಿಸಿಕೊಳ್ಳಲು ಪ್ರಸ್ತಾವಿಸಲಾಗಿದೆ. ಗ್ರಾಮ ಅರಣ್ಯ ಸಮಿತಿಗಳ ಸ್ಥಾಪನೆ, ರಚನೆ, ಕರ್ತವ್ಯಗಳು ಮತ್ತು ಜವಾಬ್ದಾರಿಗಳು, ಉತ್ಪನ್ನಗಳ ಹಂಚಿಕೆಯ ವಿಧಾನ ಮತ್ತು ಇತರ ಕಾರ್ಯನಿರ್ವಹಣಾ ರೀತಿಯ ಪ್ರಸ್ತಾವನೆ ಸಲ್ಲಿಸಿದೆ.

ಅರಣ್ಯ ಉತ್ಪನ್ನಗಳ ಹಂಚಿಕೆ

ಅರಣ್ಯ ಉತ್ಪನ್ನಗಳ ಮಾರಾಟದಿಂದ ಬರುವ ಒಟ್ಟು ಆದಾಯವನ್ನು ಸರ್ಕಾರ ಹಾಗೂ ಗ್ರಾಮ ಅರಣ್ಯ ಸಮಿತಿಗಳು ಈ ಕೆಳಕಂಡ ರೀತಿ ಹಂಚಿಕೆ ಮಾಡಿಕೊಳ್ಳತಕ್ಕದ್ದು :

  1. ಮರಮುಟ್ಟುಗಳಲ್ಲದ ಅರಣ್ಯ ಉತ್ಪನ್ನಗಳು :
    1. ಸರ್ಕಾರಕ್ಕೆ ಶೇಕಡಾ 10%ರಷ್ಟು
    2. ಶೇಕಡಾ 90%ರಷ್ಟು ಗ್ರಾಮ ಅರಣ್ಯ ಸಮಿತಿಗೆ
      ಗ್ರಾಮ ಅರಣ್ಯ ಸಮಿತಿಗಳ ಭಾಗಾಂಶದ ಪೈಕಿ ಕನಿಷ್ಠ ಶೇಕಡಾ 50%ರಷ್ಟು ಗ್ರಾಮ ಅರಣ್ಯ ಅಭಿವೃದ್ಧಿ ನಿಧಿಗೆ (ವಿಎಫ್ಡಿಎಫ್) ಹೋಗತಕ್ಕದ್ದು ಮತ್ತು ಉಳಿಕೆಯನ್ನು ಲಾಭಾಂಶವಾಗಿ ಗ್ರಾಮ ಅರಣ್ಯ ಸಮಿತಿಯ ಸದಸ್ಯರುಗಳು ಹಂಚಿಕೊಳ್ಳುತ್ತಾರೆ ಅಥವಾ ಗ್ರಾಮ ಅರಣ್ಯ ಸಮಿತಿಯು ನಿರ್ಧರಿಸುವಂತೆ ಗ್ರಾಮ ಅಭಿವೃದ್ಧಿ ನಿಧಿಗೆ (ವಿಡಿಎಫ್) ಹೋಗುತ್ತದೆ.

  2. ಇತರ ಅರಣ್ಯ ಉತ್ಪನ್ನಗಳು :
    ಗ್ರಾಮ ಅರಣ್ಯ ಸಮಿತಿಗಳ ಸಹಾಯದಿಂದ ಗಳಿಸಿದ ಆಸ್ತಿಗಳು :
    1. ಸರ್ಕಾರಕ್ಕೆ ಶೇಕಡಾ 25%ರಷ್ಟು
    2. ಶೇಕಡಾ 75%ರಷ್ಟು ಗ್ರಾಮ ಅರಣ್ಯ ಸಮಿತಿಗೆ
      ಗ್ರಾಮ ಅರಣ್ಯ ಸಮಿತಿಗಳ ಭಾಗಾಂಶದ ಪೈಕಿ ಕನಿಷ್ಠ ಶೇಕಡಾ 50%ರಷ್ಟು ಗ್ರಾಮ ಅರಣ್ಯ ಅಭಿವೃದ್ಧಿ ನಿಧಿಗೆ (ವಿಎಫ್ಡಿಎಫ್) ಹೋಗುತ್ತದೆ ಮತ್ತು ಉಳಿಕೆಯನ್ನು ಲಾಭಾಂಶವಾಗಿ ಗ್ರಾಮ ಅರಣ್ಯ ಸಮಿತಿಯ ಸದಸ್ಯರುಗಳು ಹಂಚಿಕೊಳ್ಳುತ್ತಾರೆ ಅಥವಾ ಗ್ರಾಮ ಅರಣ್ಯ ಸಮಿತಿಯು ನಿರ್ಧರಿಸುವಂತೆ ಗ್ರಾಮ ಅಭಿವೃದ್ಧಿ ನಿಧಿಗೆ (ವಿಡಿಎಫ್) ಹೋಗುತ್ತದೆ.

  3. ಹಳೆಯ ಉರುವಲು ಕಟ್ಟಿಗಗಳು, ಮೇವು ಮತ್ತು ಚಿಕ್ಕ ಮರಮುಟ್ಟು ನೆಡುತೋಪುಗಳನ್ನು ಸೇರಿದಂತೆ, ಆದರೆ ತೇಗದ ನೆಡುತೋಪುಗಳನ್ನು ಹೊರತುಪಡಿಸಿ ಗ್ರಾಮ ಅರಣ್ಯ ಸಮಿತಿಗಳ ರಚನೆಗೆ ಮುಂಚಿತವಾಗಿ ಗಳಿಸಲ್ಪಟ್ಟ ಆಸ್ತಿಗಳಲ್ಲಿ :
    1. ಸರ್ಕಾರಕ್ಕೆ ಶೇಕಡಾ 50%ರಷ್ಟು
    2. ಶೇಕಡಾ 50%ರಷ್ಟು ಗ್ರಾಮ ಅರಣ್ಯ ಸಮಿತಿಗೆ
      ಗ್ರಾಮ ಅರಣ್ಯ ಸಮಿತಿಗಳ ಭಾಗಾಂಶದ ಪೈಕಿ ಕನಿಷ್ಠ ಶೇಕಡಾ 50%ರಷ್ಟು ಗ್ರಾಮ ಅರಣ್ಯ ಅಭಿವೃದ್ಧಿ ನಿಧಿಗೆ (ವಿಎಫ್ಡಿಎಫ್) ಹೋಗುತ್ತದೆ ಮತ್ತು ಉಳಿಕೆಯನ್ನು ಲಾಭಾಂಶವಾಗಿ ಗ್ರಾಮ ಅರಣ್ಯ ಸಮಿತಿಯ ಸದಸ್ಯರುಗಳು ಹಂಚಿಕೊಳ್ಳುತ್ತಾರೆ ಅಥವಾ ಗ್ರಾಮ ಅರಣ್ಯ ಸಮಿತಿಯು ನಿರ್ಧರಿಸುವಂತೆ ಗ್ರಾಮ ಅಭಿವೃದ್ಧಿ ನಿಧಿಗೆ (ವಿಡಿಎಫ್) ಹೋಗುತ್ತದೆ.

  4. ಬೆಲೆಬಾಳುವ ಪ್ರಬೇಧಗಳಾದ ಶ್ರೀಗಂಧ, ಬೀಟೆ, ತೇಗ, ಹೊನ್ನೆ, ಮತ್ತಿ ಹಾಗೂ ನಂದಿ ಹೊರತುಪಡಿಸಿ ಹಾಗೂ ಕ್ರಿಯಾ ಯೋಜನೆಯ ನಿಯಮಗಳಂತೆ ಗ್ರಾಮ ಅರಣ್ಯ ಸಮಿತಿಗಳ ರಚನೆಗೆ ಮುಂಚಿತವಾದ ನೈಸರ್ಗಿಕ ಬೆಳೆಗಳಲ್ಲಿ :
    1. ಸರ್ಕಾರಕ್ಕೆ ಶೇಕಡಾ 50%ರಷ್ಟು
    2. ಶೇಕಡಾ 50%ರಷ್ಟು ಗ್ರಾಮ ಅರಣ್ಯ ಸಮಿತಿಗೆ
      ಗ್ರಾಮ ಅರಣ್ಯ ಸಮಿತಿಗಳ ಭಾಗಾಂಶದ ಪೈಕಿ ಕನಿಷ್ಠ ಶೇಕಡಾ 50%ರಷ್ಟು ಗ್ರಾಮ ಅರಣ್ಯ ಅಭಿವೃದ್ಧಿ ನಿಧಿಗೆ (ವಿಎಫ್ಡಿಎಫ್) ಹೋಗುತ್ತದೆ ಮತ್ತು ಉಳಿಕೆಯನ್ನು ಲಾಭಾಂಶವಾಗಿ ಗ್ರಾಮ ಅರಣ್ಯ ಸಮಿತಿಯ ಸದಸ್ಯರುಗಳು ಹಂಚಿಕೊಳ್ಳುತ್ತಾರೆ ಅಥವಾ ಗ್ರಾಮ ಅರಣ್ಯ ಸಮಿತಿಯು ನಿರ್ಧರಿಸುವಂತೆ ಗ್ರಾಮ ಅಭಿವೃದ್ಧಿ ನಿಧಿಗೆ (ವಿಡಿಎಫ್) ಹೋಗುತ್ತದೆ.
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?