English     ನಮ್ಮನ್ನು ಅನುಸರಿಸಿ:
 
ನಾನು ಹೇಗೆ ಮುಖಪುಟ > ನಾನು ಹೇಗೆ > ಅರಣ್ಯ ಪ್ರದೇಶದಲ್ಲಿ ಚಾರಣ ಚಿತ್ರೀಕರಣಕ್ಕೆ ಅನುಮತಿ ಪಡೆಯಬೇಕೆ?
ಅರಣ್ಯ ಪ್ರದೇಶದಲ್ಲಿ ಚಾರಣ ಚಿತ್ರೀಕರಣಕ್ಕೆ ಅನುಮತಿ ಪಡೆಯಬೇಕೆ?

1) ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯಕ್ಕೆ ಪ್ರವೇಶಿಸಲು/ಚಾರಣ ಮಾಡಲು ಅನುಮತಿಗಾಗಿ ಯಾರನ್ನು ಸಂಪರ್ಕಿಸಬೇಕು?

ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಕ್ಕೆ ಪ್ರವೇಶಿಸಲು/ಚಾರಣ ಮಾಡಲು ಅನುಮತಿ ಪಡೆಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯಗಳ ಉಸ್ತುವಾರಿ ಹೊಂದಿರುವ ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕು.

2) ರಾಷ್ಟ್ರೀಯ ಉದ್ಯಾನವನದೊಳಕ್ಕೆ ಯಾವ ಉದ್ದೇಶಕ್ಕೆ ಪ್ರವೇಶ ನೀಡಲಾಗುತ್ತದೆ?

ಕೆಳಕಂಡ ಎಲ್ಲಾ ಅಥವಾ ಯಾವುದೇ ಒಂದು ಕಾರಣಕ್ಕಾಗಿ ಅಭಯಾರಣ್ಯವನ್ನು ಪ್ರವೇಶಿಸಲು ಅಥವಾ ಅಲ್ಲಿ ವಾಸಿಸಲು ಯಾವುದೇ ವ್ಯಕ್ತಿಗೆ ಮುಖ್ಯ ವನ್ಯಜೀವಿ ವಾರ್ಡನ್ ರವರು ಅನುಮತಿ ನೀಡಬಹುದು; ಅವುಗಳೆಂದರೆ :
 1. ವನ್ಯಜೀವಿಗಳ ಶೋಧನೆ ಅಥವಾ ಅಧ್ಯಯನ ಮತ್ತು ಅದಕ್ಕೆ ಅನುಗುಣವಾದ ಅಥವಾ ಸಾಂದರ್ಭಿಕವಾದ ಉದ್ದೇಶಗಳಿಗಾಗಿ.
 2. ಛಾಯಗ್ರಹಣ
 3. ವೈಜ್ಞಾನಿಕ ಸಂಶೋಧನೆ
 4. ಪ್ರವಾಸೋದ್ಯಮ
 5. ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಯಾವುದೇ ವ್ಯಕ್ತಿಯ ಜೊತೆ ಕಾನೂನುಬದ್ಧ ವ್ಯಾಪಾರ ವ್ಯವಹಾರ ನಡೆಸಲು.

3) ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಕ್ಕೆ ಪ್ರವೇಶಿಸಲು ಅನುಮತಿ ಪಡೆಯುವುದರಿಂದ ಯಾರಿಗೆ ವಿನಾಯಿತಿ ಇರುತ್ತದೆ?

 1. ಸಾರ್ವಜನಿಕ ಸೇವಾ ಕರ್ತವ್ಯದ ಮೇಲಿರುವವರು.
 2. ಅಭಯಾರಣ್ಯದ ಪರಿಮಿತಿಯೊಳಗೆ ವಾಸಿಸಲು ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ಅಧಿಕೃತ ಅಧಿಕಾರಿಯಿಂದ ಅನುಮತಿ ನೀಡಲ್ಪಟ್ಟಿರುವ ವ್ಯಕ್ತಿ.
 3. ಅಭಯಾರಣ್ಯದ ಪರಿಮಿತಿಯೊಳಗಿನ ಸ್ಥಿರ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಹೊಂದಿರುವ ವ್ಯಕ್ತಿ.
 4. dependants of the person referred to in clause (a), clause (b) or clause (c.)ಉಪವಾಕ್ಯ (ಅ), ಉಪವಾಕ್ಯ (ಆ) ಅಥವಾ ಉಪವಾಕ್ಯ (ಇ) ಗಳಲ್ಲಿ ಉಲ್ಲೇಖಿಸಿರುವ ವ್ಯಕ್ತಿಯ ಮೇಲೆ ಅವಲಂಬಿತರಾಗಿರುವವರು.

4) ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು?

ಪ್ರತಿ ವ್ಯಕ್ತಿಯೂ ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ವಾಸಿಸುವಷ್ಟು ಕಾಲವೂ ಈ ಕೆಳಕಂಡ ಅಂಶಗಳಿಗೆ ಬದ್ಧನಾಗಿರತಕ್ಕದ್ದು :
 1. ಅಭಯಾರಣ್ಯದಲ್ಲಿ ಈ ಕಾಯಿದೆಯ ವಿರುದ್ಧವಾದ ಯಾವುದೇ ಅಪರಾಧ ನಡೆಯುವುದನ್ನು ತಡೆಯುವುದು.
 2. ಅಭಯಾರಣ್ಯದಲ್ಲಿ ಈ ಕಾಯಿದೆಗೆ ವಿರುದ್ಧವಾದ ಅಂತಹ ಯಾವುದೇ ಅಪರಾಧಗಳು ನಡೆದಿದೆ ಎಂದು ನಂಬಲು ಕಾರಣವಿದ್ದಲ್ಲಿ, ಅಪರಾಧಿಯನ್ನು ಕಂಡುಹಿಡಿಯಲು ಮತ್ತು ಬಂಧಿಸಲು ಸಹಾಯ ಮಾಡುವುದು.
 3. ಯಾವುದೇ ಕಾಡು ಪ್ರಾಣಿಯ ಸಾವನ್ನು ವರದಿ ಮಾಡುವುದು ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ಅಧಿಕೃತ ಅಧಿಕಾರಿಯು ಉಸ್ತುವಾರಿ ವಹಿಸುವವರೆಗೂ ಅದರ ದೇಹವನ್ನು ರಕ್ಷಿಸುವುದು.
 4. ತನ್ನ ಅರಿವಿಗೆ ಅಥವಾ ಮಾಹಿತಿಗೆ ಬರುವ ಅಂತಹ ಅಭಯಾರಣ್ಯದಲ್ಲಿನ ಯಾವುದೇ ಬೆಂಕಿಯನ್ನು ನಂದಿಸುವುದು ಮತ್ತು ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಯಾವುದೇ ವಿಧಾನದಿಂದ ಅದು ಹರಡದಂತೆ ತಡೆಯುವುದು ಮತ್ತು
 5. ಈ ಕಾಯಿದೆಯ ವಿರುದ್ಧವಾಗಿ ನಡೆಯುವ ಅಪರಾಧಗಳನ್ನು ತಡೆಯಲು ಅಥವಾ ಅಂತಹ ಯಾವುದೇ ಅಪರಾಧದ ತನಿಖೆಯಲ್ಲಿ ಅರಣ್ಯ ಅಧಿಕಾರಿ, ಮುಖ್ಯ ವನ್ಯಜೀವಿ ವಾರ್ಡನ್, ವನ್ಯಜೀವಿ ವಾರ್ಡನ್ ಅಥವಾ ನೀತಿ ನಿರೂಪಕ ಅಧಿಕಾರಿಯು ಸಹಾಯ ಕೇಳಿದಲ್ಲಿ ಅವರಿಗೆ ಸಹಕರಿಸುವುದು.

5) ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ಪ್ರವೇಶಿಸಲು ಯಾವುದಾದರೂ ಪ್ರವೇಶ ಶುಲ್ಕವಿದೆಯೆ; ವಿಧಿಸಲು ಇರುವ ನಿಯಮಗಳು?

ಹೌದು, ವನ್ಯಜೀವಿ (ರಕ್ಷಣೆ) ಕಾಯಿದೆಯ ಸೆಕ್ಷನ್ 28ರ ಅನ್ವಯ ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ಹೋಗಲು ಪ್ರವೇಶ ಶುಲ್ಕವಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಪ್ರವೇಶ ಶುಲ್ಕವನ್ನು ನಿರ್ಧರಿಸುತ್ತಾರೆ.

6) ಚಿಲ್ಲರೆ ದರದಲ್ಲಿ ಶ್ರೀಗಂಧವನ್ನು ಪಡೆಯಲು ಯಾರು ಅರ್ಹರಾಗಿರುತ್ತಾರೆ?

ಯಾವುದೇ ಖಾಸಗಿ ವ್ಯಕ್ತಿ/ಧಾರ್ಮಿಕ ಸಂಘಸಂಸ್ಥೆಗಳು/ಖಾಸಗಿ ವಲಯದ ಸಂಸ್ಥೆಗಳು/ಸಂಘಸಂಸ್ಥೆಗಳು ಚಿಲ್ಲರೆ ದರದಲ್ಲಿ ಶ್ರೀಗಂಧಕ್ಕಾಗಿ ಅರ್ಜಿ ಸಲ್ಲಿಸಬಹುದು.


 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?